Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ವಿದ್ಯಾರ್ಥಿನಿಲಯ: ಪ್ರವೇಶಕ್ಕೆ ಅರ್ಜಿ ಆಹ್ವಾನ

ಜೂ.೨೨ರಂದು ವಿದ್ಯುತ್ ವ್ಯತ್ಯಯ

ಜೂನ್ ೩೦ ರಿಂದ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ಕಟ್ಟುಕಥೆ ಸೃಷ್ಟಿಸಿ ದೂರು ನೀಡಿದ ಮೂವರ ಬಂಧನ :ಕಂಟ್ರಿಪಿಸ್ತೂಲ್ ವಶ
(ರಾಜ್ಯ ) ಜಿಲ್ಲೆ

ಕಟ್ಟುಕಥೆ ಸೃಷ್ಟಿಸಿ ದೂರು ನೀಡಿದ ಮೂವರ ಬಂಧನ :ಕಂಟ್ರಿಪಿಸ್ತೂಲ್ ವಶ

By No Comments2 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಉದಯರಶ್ಮಿ ದಿನಪತ್ರಿಕೆ

ವಿಜಯಪುರ: ತನ್ನ ಮೇಲೆ ಫೈರಿಂಗ್ ಮಾಡಲಾಗಿದೆ ಎಂದು ಕಟ್ಟುಕಥೆ ಸೃಷ್ಟಿಸಿ ಕೆಲವರ ಮೇಲೆ ಕಳೆದ ಜೂ.೦೩ ರಂದು ನಗರದ ಗ್ರಾಮೀಣ ಪೊಲೀಸ ಠಾಣೆಯಲ್ಲಿ ದೂರು ದಾಖಲಿಸಿದ್ದ ವ್ಯಕ್ತಿ ಸೇರಿದಂತೆ ಮೂವರನ್ನು ಗುರುವಾರ ಬಂಧಿಸಿದ ಪೋಲೀಸರು ಅವರಿಂದ ಕೃತ್ಯಕ್ಕೆ ಬಳಸಿದ ಕಂಟ್ರೀ ಪಿಸ್ತೂಲ್‌ವನ್ನು ವಶಪಡಿಸಿಕೊಂಡ ಘಟನೆ ನಡೆದಿದೆ.
ಪಿರ್ಯಾಧಿದಾರ ದಯವಂತ ತಂ. ಸಾಯಪ್ಪ ಡೇರೆ (30) ಸಾ: ಇಟ್ಟಂಗಿಹಾಳ ದೊಡ್ಡಿ ಸೇರಿದಂತೆ ಆನಂದ @ ಅನೀಲ ತಂ. ಮಾಯಪ್ಪ ಡೇರಿ (26) ಸಾ: ಇಟ್ಟಂಗಿಹಾಳ ದೊಡ್ಡಿ ಮತ್ತು ಕೊಂಡಿಬಾ ತಂ. ಭೀರಪ್ಪ ಮಾನವರ (23) ಸಾ: ಇಟ್ಟಂಗಿಹಾಳ ದೊಡ್ಡಿ ಬಂಧಿತರು.
ಕಳೆದ ಜೂ.೩ ರಂದು ದಯವಂತ ತಂ. ಸಾಯಪ್ಪ ಡೇರೆ ಈತನು ದೂರನ್ನು ನೀಡಿದ್ದು, ಅದರಲ್ಲಿ ದಿನಾಂಕ: 03-06-2026 ರಂದು ತೊರವಿ ಗ್ರಾಮದ ಹದ್ದಿಯಲ್ಲಿ ಬರುವ ತನ್ನ ಜಮೀನದಲ್ಲಿ ಇದ್ದಾಗ ಮದ್ಯಾಹ್ನ 3.00 ಗಂಟೆ ಸುಮಾರಿಗೆ ಯಾರೋ ಇಬ್ಬರೂ ಅಪರಿಚಿತ ವ್ಯಕ್ತಿಗಳು ತಮ್ಮ ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಕಾಲ್ನಡಿಗೆಯಲ್ಲಿ ಬಂದು ತನ್ನ ಹಿಂದಿನಿಂದ ಫೈರಿಂಗ್‌ ಮಾಡಿ ತನ್ನ ಬಲರಟ್ಟೆಗೆ ಗಾಯಗೊಳಿಸಿದ ಬಗ್ಗೆ ಹೇಳಿ, ಈ ಘಟನೆಗೆ ಒಟ್ಟು 06 ಜನರ ಮೇಲೆ ದೂರನ್ನು ಸಲ್ಲಿಸಿದ್ದನು.
ಈ ಪ್ರಕರಣದ ತನಿಖೆಯನ್ನು ಟಿ. ಎಸ್.‌ ಸುಲ್ಪಿ, ಡಿಎಸ್‌ಪಿ ವಿಜಯಪುರ ಗ್ರಾಮೀಣ, ಆರ್.‌ ಎಸ್.‌ ಜಾನರ, ಪಿಐ ವಿಜಯಪುರ ಗ್ರಾಮೀಣ ಠಾಣೆ, ವಿನೋದ ದೊಡಮನಿ, ಪಿಎಸ್‌ಐ ಗ್ರಾಮೀಣ ಠಾಣೆ ಹಾಗೂ ಸಿಬ್ಬಂದಿ ಜನರನ್ನೊಳಗೊಂಡ ತನಿಖಾ ತಂಡವನ್ನು ರಚನೆ ಮಾಡಿ ತನಿಖೆಗೆ ವಹಿಸಲಾಗಿತ್ತು.
ತನಿಖೆ ವೇಳೆ ದೂರುದಾರನು ಮೂಲ ಎಫ್‌ಐಆರ್‌ದಲ್ಲಿ ನಮೂದಿಸಿದ ಆರೋಪಿತರೊಂದಿಗೆ ಊರಲ್ಲಿ ವೈಮನಸ್ಸುಗಳು ಇದ್ದು, ಇದೇ ಕಾರಣದಿಂದ ಏನಾದರೂ ಘಟನೆ ಸೃಷ್ಠಿಸಿ ಅವರ ಮೇಲೆ ಪ್ರಕರಣ ದಾಖಲಿಸಬೇಕು ಅನ್ನುವ ದುರುದ್ದೇಶವನ್ನು ಹೊಂದಿ 03 ಜನರು ಜಾಲಗೇರಿ ಗ್ರಾಮದ ಆರೋಪಿ ಆನಂದ @ ಅನೀಲ ಡೇರಿ ಈತನ ಹೊಲದಲ್ಲಿ ಸೇರಿ ಅಲ್ಲಿ ಆರೋಪಿ ಆನಂದ ಈತನು ತನ್ನ ಹತ್ತಿರ ಇದ್ದ ಕಂಟ್ರೀ ಪಿಸ್ತೂಲ್‌ದಿಂದ ಪಿರ್ಯಾಧಿ ದಯವಂತ ಡೇರೆ ಈತನ ಬಲಗೈ ರಟ್ಟೆಯ ಹತ್ತಿರ ಗುಂಡು ಹಾರಿಸಿ ಗಾಯಗೊಳಿಸಿದ್ದು, ನಂತರ ಗಾಯಾಳು ದಯವಂತನು ತೊರವಿ ಗ್ರಾಮದಲ್ಲಿ ತನಗೆ ಎಫ್‌ಐಆರ್‌ದಲ್ಲಿ ನಮೂದಿಸಿದ ಆರೋಪಿತರು ಫೈರಿಂಗ್‌ ಮಾಡಿ ಗಾಯಗೊಳಿಸಿರುತ್ತಾರೆ ಅಂತಾ ಸುಳ್ಳು ಘಟನಾ ಸ್ಥಳವನ್ನು ಸೃಷ್ಟಿಸಿ, ಪಿರ್ಯಾಧಿ ನೀಡಿದ್ದನು.
ಪ್ರಕರಣ ವಿಜಯಪುರ ಗ್ರಾಮೀಣ ಪೊಲೀಸ ಠಾಣೆಯಲ್ಲಿ ದಾಖಲಾಗಿದ್ದು ತನಿಖಾ ತಂಡದ ಅಧಿಕಾರಿಗಳನ್ನು ಎಸ್ಪಿ ಲಕ್ಷ್ಮಣ ನಿಂಬರಗಿ ಅಭಿನಂದಿಸಿದ್ದಾರೆ.

BIJAPUR NEWS public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ವಿದ್ಯಾರ್ಥಿನಿಲಯ: ಪ್ರವೇಶಕ್ಕೆ ಅರ್ಜಿ ಆಹ್ವಾನ

ಜೂ.೨೨ರಂದು ವಿದ್ಯುತ್ ವ್ಯತ್ಯಯ

ಜೂನ್ ೩೦ ರಿಂದ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ

ಜೂ.೨೦ಕ್ಕೆ ಗ್ರಾಹಕರ ಸಂವಾದ ಸಭೆ

Add A Comment
Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Helldivers
  • Typora
  • Uncategorized
  • Wemod
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ವಿದ್ಯಾರ್ಥಿನಿಲಯ: ಪ್ರವೇಶಕ್ಕೆ ಅರ್ಜಿ ಆಹ್ವಾನ
    In (ರಾಜ್ಯ ) ಜಿಲ್ಲೆ
  • ಜೂ.೨೨ರಂದು ವಿದ್ಯುತ್ ವ್ಯತ್ಯಯ
    In (ರಾಜ್ಯ ) ಜಿಲ್ಲೆ
  • ಜೂನ್ ೩೦ ರಿಂದ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ
    In (ರಾಜ್ಯ ) ಜಿಲ್ಲೆ
  • ಜೂ.೨೦ಕ್ಕೆ ಗ್ರಾಹಕರ ಸಂವಾದ ಸಭೆ
    In (ರಾಜ್ಯ ) ಜಿಲ್ಲೆ
  • ಸಂಸ್ಕರಣಾ ಘಟಕ ಸ್ಥಾಪನೆಗೆ ಅರ್ಜಿ ಆಹ್ವಾನ
    In (ರಾಜ್ಯ ) ಜಿಲ್ಲೆ
  • ಬೆಳೆ ವಿಮೆ ಯೋಜನೆಗೆ ನೋಂದಣಿಗೆ ಮನವಿ
    In (ರಾಜ್ಯ ) ಜಿಲ್ಲೆ
  • ವಿದ್ಯುತ್ ವಿತರಣಾ ಕೇಂದ್ರಗಳನ್ನು ಖಾಸಗಿ ಕಂಪನಿಗಳಿಗೆ ಹಸ್ತಾಂತರಕ್ಕೆ ವಿರೋಧಿಸಿ ಮನವಿ
    In (ರಾಜ್ಯ ) ಜಿಲ್ಲೆ
  • ರೇವಣಸಿದ್ದೇಶ್ವರ ಏತ ನೀರಾವರಿ ಪ್ರಗತಿ ಪರಿಶೀಲನಾ ಸಭೆ
    In (ರಾಜ್ಯ ) ಜಿಲ್ಲೆ
  • ಜಮೀನುಗಳಿಗೆ ಜಂಟಿ ಕೃಷಿ ನಿರ್ದೇಶಕ, ಸಹಾಯಕ ನಿರ್ದೇಶಕರು ಭೇಟಿ
    In (ರಾಜ್ಯ ) ಜಿಲ್ಲೆ
  • ಕಟ್ಟುಕಥೆ ಸೃಷ್ಟಿಸಿ ದೂರು ನೀಡಿದ ಮೂವರ ಬಂಧನ :ಕಂಟ್ರಿಪಿಸ್ತೂಲ್ ವಶ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.