Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಉದಯರಶ್ಮಿ ಇಂದಿನ ದಿನಪತ್ರಿಕೆ ಜೂನ್ 21, 2026

ವಿಶ್ವದಾದ್ಯಂತ ಹರಡಿಕೊಂಡಿರುವ ಬಂಜಾರರು :ಪ್ರೊ.ನಾರಾಯಣ

ಕೋರಿಕೆಗೆ ಮನ್ನಣೆ: ರೈಲ್ವೆ ಸಚಿವರಿಗೆ ಸಚಿವ ಎಂ.ಬಿ.ಪಾಟೀಲ ಧನ್ಯವಾದ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»ವಿಶೇಷ ಲೇಖನ»ಶಾಲಾ ಮಕ್ಕಳಿಗೆ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳು
ವಿಶೇಷ ಲೇಖನ

ಶಾಲಾ ಮಕ್ಕಳಿಗೆ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳು

By No Comments3 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಲೇಖನ
– ವೀಣಾ ಹೇಮಂತ್ ಗೌಡ ಪಾಟೀಲ್,
ಮುಂಡರಗಿ
ಗದಗ ಜಿಲ್ಲೆ

ಉದಯರಶ್ಮಿ ದಿನಪತ್ರಿಕೆ

ಶಾಲೆಯಲ್ಲಿ ಮಕ್ಕಳಿಗೆ ಎ ಎಂದರೆ ಆಪಲ್ ಬಿ ಎಂದರೆ ಬಾಲ್ ಸಿ ಎಂದರೆ ಕ್ಯಾಟ್ ಎಂದು ಮಾತ್ರ ಹೇಳಿಕೊಡುತ್ತಾರೆ. ಆದರೆ ಮನೆಯಲ್ಲಿ ಹೇಗೆ ಎಂದರೆ ಆಪಲ್ ಬಾಲ್ ಎಂಬುದರ ಬದಲಾಗಿ ಪರ್ಯಾಯ ಪದಗಳನ್ನು ನಾವು ಮಕ್ಕಳಿಗೆ ಕಲಿಸಬಹುದು.
ಶಾಲೆಯಲ್ಲಿ ಮಕ್ಕಳಿಗೆ ಎ ಎಂದರೆ ಆಪಲ್ ಬಿ ಎಂದರೆ ಬಾಲ್ ಎಂದು ಹೇಳುವುದರ ಬದಲು ಮನೆಯಲ್ಲಿ ಕಾಣಿಸಿರುವ ಎ ಬಿ ಸಿ ಡಿ ಹೀಗೆ ಹತ್ತು ಹಲವು ಅಕ್ಷರಗಳಿಗೆ ಪರ್ಯಾಯವಾಗಿ ಬೇರೆ ಪದಗಳನ್ನು, ವಿಷಯಗಳನ್ನು ಕಲಿಸುತ್ತಾ ಹೋದಾಗ ಮಕ್ಕಳಲ್ಲಿ ಹೆಚ್ಚಿನ ವಿಷಯ ಸಂಗ್ರಹಣೆಯಾಗುತ್ತದೆ.
ಇನ್ನು ಇದಕ್ಕೆ ಹೊರತಾಗಿ ಮಕ್ಕಳು ಶಾಲೆಯಲ್ಲಿ ಕಲಿಯುವ ವೈಜ್ಞಾನಿಕ ವಿಷಯಗಳನ್ನು ಬದುಕಿನ ವಿವಿಧ ಕ್ಷೇತ್ರಗಳಲ್ಲಿ ಅನುಭವಿಸುವ ಮೂಲಕ ಕಲಿಯಲು ಅವಕಾಶ ಮಾಡಿಕೊಡಬೇಕು.
ರೈತ ಹೊಲವನ್ನು ಉತ್ತಿ ಹದ ಮಾಡುತ್ತಾನೆ. ಬೀಜವನ್ನು ಬಿತ್ತುತ್ತಾನೆ ಹಾಗೆ ಬಿತ್ತಿದ ಬೀಜ ಮೊಳಕೆ ಒಡೆದು ಪುಟ್ಟ ಸಸಿಯಾಗಿ ಕ್ರಮೇಣ ನೀರು ಬಿಸಿಲಿನ ಸಹವಾಸದಲ್ಲಿ ಎತ್ತರವಾಗಿ ಬೆಳೆದು ತೆನೆ ಮೂಡಿ ಆ ತೆನೆಯ ಭಾರದಿಂದ ತೂಗುತ್ತದೆ. ಜೋಳ, ಗೋಧಿ, ಅಕ್ಕಿ ಎಲ್ಲಿಂದ ಬರುತ್ತವೆ ಎಂದು ನಾವು ಮಕ್ಕಳನ್ನು ಕೇಳಿದಾಗ ಅವರ ಬಾಯಿಂದ ಮಾರುಕಟ್ಟೆಯಿಂದ ಎಂಬ ಉತ್ತರ ಬರುತ್ತದೆ. ಕೃಷಿ ಪ್ರಧಾನವಾದ ಭಾರತ ದೇಶದಲ್ಲಿ ನಾವು ನಮ್ಮ ಮಕ್ಕಳಿಗೆ ಯಾವುದೇ ರೀತಿಯ ಕೃಷಿ ವಿಷಯಗಳು ಅರಿವನ್ನು ಮೂಡಿಸಿಲ್ಲ. ಇದಕ್ಕೆ ನಾವು ಹೆಚ್ಚಿನ ಖರ್ಚು ಮಾಡಬೇಕಾಗಿಲ್ಲ. ಹತ್ತಿರದ ಊರಿನ ಹೊಲಗಳಲ್ಲಿ ಬಿತ್ತುವ, ಬೆಳೆಯುವ, ತೆನೆ ಮುರಿಯುವ, ರಾಶಿ ಮಾಡುವ ಅವುಗಳನ್ನು ಮಾರುಕಟ್ಟೆಗೆ ಒಯ್ದು ಮಾರುವ ಸಮಯದಲ್ಲಿ ಮಕ್ಕಳನ್ನು ಕರೆದುಕೊಂಡು ಹೋಗಿ ವಿಷಯವನ್ನು ವಿವರಿಸಿದರೆ ಅವರಿಗೂ ಕೂಡ ತಮ್ಮ ತಟ್ಟೆಯಲ್ಲಿ ಬಂದು ಬೀಳುವ ಮುನ್ನ ಆಹಾರ ಬೆಳೆಯಲು ಅದೆಷ್ಟು ಕಷ್ಟ ಪಡಬೇಕು ಎಂಬುದರ ಅರಿವು ಮೂಡುತ್ತದೆ. ಜೊತೆಗೆ ರೈತನ ಕುರಿತಾದ ಕೃತಜ್ಞತಾ ಭಾವ ಕೂಡ.


ವೈಜ್ಞಾನಿಕವಾಗಿ ಮಣ್ಣು, ನೀರು, ಗಾಳಿ, ಬೆಳಕು, ಭೌಗೋಳಿಕ ಮತ್ತು ಪ್ರಾಕೃತಿಕ ವಾತಾವರಣಗಳನ್ನು ಶಾಲೆಯ ಪಠ್ಯದಲ್ಲಿ ಓದುವ ಮಕ್ಕಳು ಪ್ರಾಯೋಗಿಕವಾಗಿ ಅವುಗಳನ್ನು ನೋಡುವ, ಅನುಭವಿಸುವ, ವಿವರಗಳನ್ನು ಅರಿಯುವ ಪ್ರಕೃತಿಯಿಂದ ನಾವು ಮಕ್ಕಳನ್ನು ವಂಚಿತರನ್ನಾಗಿಸುತ್ತೇವೆ.
ನಮ್ಮ ಹತ್ತಿರದ ವಿಜ್ಞಾನ ಭವನ, ಕಲಾ ಮತ್ತು ಸಾಂಸ್ಕೃತಿಕ ಭವನಗಳಿಗೆ ಭೇಟಿ ಕೊಡುವುದು ಮಕ್ಕಳಿಗೆ ಮನೆಯ ಹೊರಗಿನ ಪರಿಸರದ ಕುರಿತ ಜ್ಞಾನವನ್ನು ನೀಡುವುದು ನಾವು ಮಾಡಲೇಬೇಕಾದ ಕರ್ತವ್ಯಗಳು. ಯಾವ ವಿಷಯಗಳನ್ನು ನಾವು ಶಾಲೆಯ ಪಠ್ಯ ಚಟುವಟಿಕೆಗಳಲ್ಲಿ ಕಲಿಯುತ್ತೇವೆಯೋ ಅವುಗಳನ್ನು ಪ್ರಾಯೋಗಿಕವಾಗಿ ನೋಡಿದಾಗ ನಮಗೆ ಉಂಟಾಗುವ ಅನುಭವಗಳು ಮನಸ್ಸಿನ ಆಳ ಪದರಗಳಲ್ಲಿ ಬೇರೂರುತ್ತವೆ.
ಈ ಹಿಂದೆ ಮನೆಯಲ್ಲಿ ರೇಡಿಯೋ ಸರಿಯಾಗಿ ಕೆಲಸ ನಿರ್ವಹಿಸದೇ ಇದ್ದಾಗ ಅದನ್ನು ಸರಿಯಾಗಿ ಬಿಚ್ಚಿ ಅಲ್ಲಿ ಹೊಕ್ಕಿರಬಹುದಾದ ಸಣ್ಣ ಕ್ರಿಮಿಕೀಟಗಳನ್ನು ಜಿರಲೆಗಳನ್ನು ಜಾಡಿಸಿ ಸ್ವಚ್ಛ ಮಾಡಿ ಎಲ್ಲ ವೈರುಗಳು ಸರಿಯಾಗಿವೆಯೇ ಎಂದು ಪರೀಕ್ಷಿಸಿ ಮತ್ತೆ ಯಥಾ ಪ್ರಕಾರ ಜೋಡಿಸಿ ಇಡುತ್ತಿದ್ದೆವಲ್ಲವೇ?
ಮನೆಯಲ್ಲಿ ಟಿವಿ ನೋಡುವಾಗ ಜೋರಾದ ಗಾಳಿ ಬೀಸಿ ಟಿವಿಯ ಆಂಟಿನಾ ಹೊರಳಿದಾಗ ಅದನ್ನು ಸರಿಯಾದ ದಿಕ್ಕಿನತ್ತ ಹೊರಳಿಸಿ ಟಿವಿಯಲ್ಲಿ ದೃಶ್ಯಗಳು ಮೂಡುತ್ತಿವೆಯೇ ಎಂದು ಖಚಿತಪಡಿಸಿಕೊಳ್ಳಲು ಪರೀಕ್ಷಿಸುತ್ತಿದ್ದುದು ನಿನ್ನೆ ಮೊನ್ನೆ ನಡೆದಂತಿದೆ.
ಆದರೆ ಇಂದಿನ ನಮ್ಮ ಮಕ್ಕಳಿಗೆ ಈ ರೀತಿಯ ಪ್ರಾಯೋಗಿಕ ಪಾಠಗಳು ನಡೆಯುತ್ತಿದೆಯೇ ಎಂದು ಕೇಳಿದರೆ ಇಲ್ಲ ಎಂದು ಹೇಳಬೇಕಾಗಿರುವುದು ವಿಪರ್ಯಾಸವಲ್ಲದೇ ಮತ್ತೇನು? ಕ್ವಾಣಿ ಕೂಸು ಕೊಳೀತು.. ಓಣಿ ಕೂಸು ಬೆಳೀತು ಎಂದು ನಮ್ಮ ಹಿರಿಯರು ಹೇಳಿರುವುದು ಇದಕ್ಕೆ.
ಅದೆಷ್ಟೇ ಜಾಣ್ಮೆ ಇದ್ದರೂ ಕೆಲವು ವಿಷಯಗಳು ನಮ್ಮ ನಿಲುಕಿಗೆ ದೊರೆಯದೆ ಹೋಗುತ್ತವೆ. ಎಲ್ಲ ಮಾತನಾಡುವವರು ಭಾಷಣಕಾರರಾಗುವುದಿಲ್ಲ, ಗುನುಗುನಿಸುವ ಎಲ್ಲರೂ ಸಂಗೀತಗಾರರಾಗುವುದಿಲ್ಲ ನಿಜ ಆದರೆ ಅದರ ಅನುಭವವೇ ಇಲ್ಲದೆ ಹೋದರೆ?
ಅಂತಹ ತಪ್ಪಿಗೆ ಮಕ್ಕಳ ಬದುಕಿನಲ್ಲಿ ಅವಕಾಶವೀಯಬಾರದು.
ಬೀದಿ ಬೀದಿಗಳಲ್ಲಿ ಕೂಡಿಸುವ ಗಣೇಶನ ಪೆಂಡಾಲುಗಳಲ್ಲಿ, ನವರಾತ್ರಿಯ ಸಮಯದಲ್ಲಿ ನಡೆಯುವ ಸಾಂಸ್ಕೃತಿಕ ಕಲೆಗಳ ಉತ್ಸವದಲ್ಲಿ ಮಕ್ಕಳು ಭಾಗವಹಿಸಬೇಕು ಚಿತ್ರಕಲೆ, ಸಂಗೀತ, ನೃತ್ಯ, ಭಾಷಣ ಹೀಗೆ ಎಲ್ಲ ವಿಷಯಗಳಲ್ಲಿಯೂ ಮಕ್ಕಳು ಪ್ರಾವೀಣ್ಯತೆಯನ್ನು ಸಾಧಿಸಲು ಅನುವು ಮಾಡಿಕೊಡಬೇಕು. ಮಕ್ಕಳು ಸ್ಪರ್ಧಾತ್ಮಕ ಜಗತ್ತಿನಲ್ಲಿ ಮುಂಚೂಣಿಯಲ್ಲಿ ನಿಲ್ಲಲು ಅವಶ್ಯಕವಾದ ಜ್ಞಾನವನ್ನು ಅವರಿಗೆ ಚಿಕ್ಕಂದಿನಿಂದಲೇ ನೀಡಬೇಕು.


ಅಮೆರಿಕಾದ ಖ್ಯಾತ ಚಿಂತಕ ಎಮರ್ಸನ್ ಹೇಳುವ ಈ ಮಾತು ಅತ್ಯಂತ ಮಾರ್ಮಿಕವಾಗಿದೆ ‘ಎದೆಗಾರಿಕೆಯ ಕಿಂಚಿತ ಅಭಾವದಿಂದ ಜಗತ್ತಿನ ಎಷ್ಟೋ ಕುಶಲರು ಮೂಲೆಗುಂಪಾಗಿದ್ದಾರೆ’ ಎಂದು. ಮಕ್ಕಳು ‘ದೇಶವನ್ನು ಸುತ್ತಿ ಕೋಶವನ್ನು ಓದಬೇಕು’ ಎಂಬಂತೆ ಎಲ್ಲ ವಿಷಯಗಳಿಂದ ಪರಿಚಿತರಾಗಬೇಕು. ಕೇವಲ ಧಾರ್ಮಿಕ ಕ್ಷೇತ್ರಗಳು, ಮೋಜಿನ ತಾಣಗಳನ್ನು ಮಾತ್ರವಲ್ಲದೆ ನಮ್ಮ ಹತ್ತಿರದ ಕವಿ, ಸಾಹಿತಿಗಳ ಮನೆಗಳು, ಸ್ಮಾರಕ ಭವನಗಳು, ವಿಜ್ಞಾನ ಮತ್ತು ಸಾಂಸ್ಕೃತಿಕ ಕೇಂದ್ರಗಳಿಗೆ ಆಕಾಶವಾಣಿ ಮತ್ತು ದೂರದರ್ಶನ ಕೇಂದ್ರಗಳಿಗೆ, ವಿಶ್ವವಿದ್ಯಾಲಯಗಳಿಗೆ ಭೇಟಿ ನೀಡಬೇಕು. ಅಲ್ಲಿರುವ ವೈವಿಧ್ಯಮಯ ವಿಷಯಗಳು ಕುರಿತು ಅರಿವನ್ನು ಪಡೆಯಬೇಕು.
ನಾವು ಓದುತ್ತಿರುವುದು ಕೇವಲ ಪುಸ್ತಕಗಳಲ್ಲಿ ಮಾತ್ರ ಇಲ್ಲ.. ಪ್ರಪಂಚದೆಲ್ಲೆಡೆ ಇದೆ ಎಂಬ ಜ್ಞಾನ ಮಕ್ಕಳಲ್ಲಿ ಇರಲೇಬೇಕು.
ಅಡುಗೆ ಮಾಡುವುದು, ಬಟ್ಟೆ ಒಗೆಯುವುದು, ಕಸ ಗುಡಿಸುವುದು ಲಿಂಗ ಆಧಾರಿತ ಕೆಲಸಗಳಲ್ಲ. ವೈಯುಕ್ತಿಕ ಸ್ವಾವಲಂಬನೆಯನ್ನು ಸಾಧಿಸಲು ಅತ್ಯವಶ್ಯಕವಾಗಿ ನಾವು ಅಳವಡಿಸಿಕೊಳ್ಳಬಹುದಾದ ಕೆಲಸಗಳು. ಬೇರೆಯವರ ಮೇಲೆ ಅವಲಂಬಿಸದೆ ನಮ್ಮ ಕೆಲಸಗಳನ್ನು ಖುದ್ದು ನಾವೇ ಮಾಡಿಕೊಳ್ಳುವ ಮೂಲಕ ಸ್ವಾವಲಂಬನೆಯನ್ನು ಸಾಧಿಸಲು ಮಕ್ಕಳಿಗೆ ಅನುವು ಮಾಡಿಕೊಡಬೇಕು. ಪ್ರಾರಂಭದಲ್ಲಿ ಮಕ್ಕಳು ಹೇಗೆ ಮಾಡಿದರೂ ಕೂಡ ಅದನ್ನು ನಯವಾಗಿ ತಿದ್ದಿ ಹೇಳಬೇಕೇ ಹೊರತು ಒರಟಾಗಿ ಖಂಡಿಸಬಾರದು. ಪ್ರತಿ ಬಾರಿಯೂ ಮಗುವನ್ನು ಹೀಗಳೆಯುವುದರಿಂದ ಮಗು ಹಿಂಜರಿಯಲಾರಂಭಿಸುತ್ತದೆ, ಆಸಕ್ತಿಯನ್ನು ಕಳೆದುಕೊಳ್ಳುತ್ತದೆ. ತುಸು ಮಟ್ಟಿನ ಪ್ರೋತ್ಸಾಹ ಮಗುವಿನ ಕಲಿಕೆಯಲ್ಲಿ ಬಹಳಷ್ಟು ಉತ್ತಮ ಪರಿಣಾಮಗಳನ್ನು ಬೀರುತ್ತದೆ.
ಸಾಮಾಜಿಕ ಮೌಲ್ಯಗಳು ಮತ್ತು ಜೀವನ ಕೌಶಲ್ಯಗಳನ್ನು ಮಕ್ಕಳಿಗೆ ಚಿಕ್ಕಂದಿನಲ್ಲಿಯೇ ಕಲಿಸಬೇಕು. ತಮ್ಮ ಕೆಲಸಗಳನ್ನು ಮಕ್ಕಳು ತಾವೇ ನಿರ್ವಹಿಸಲಾರಂಭಿಸಿದಾಗ ಅವರಿಗೆ ಶ್ರಮದ ಪರಿಕಲ್ಪನೆಯ ಅರಿವು ಮೂಡುತ್ತದೆ. ಇದು ಅವರಲ್ಲಿ ಅಹಂಕಾರ ರಹಿತ ಜೀವನವನ್ನು ಸಾಗಿಸಲು ಅವಕಾಶ ಮಾಡಿಕೊಡುತ್ತದೆ.
ಪಾಟೀಲ್ ಪುಟ್ಟಪ್ಪನವರು ಪತ್ರಕರ್ತನಾಗಲು ಪತ್ರಿಕೋದ್ಯಮ ಪದವಿ ಪಡೆದಿದ್ದರೆ ಮಾತ್ರ ಸಾಲದು ಪತ್ರಿಕೋದ್ಯಮದ ಎಲ್ಲಾ ಗಹನ ವಿಷಯಗಳನ್ನು ಅರಿತಿರಬೇಕು, ಕಾರ್ಯಶೀಲತೆ ಅವರದಾಗಿರಬೇಕು ಎಂದು ಹೇಳುತ್ತಿದ್ದರು.
ಮನೆಯಲ್ಲಿ ಮೂರು ತಲೆಮಾರಿನ ಜನರು ಇದ್ದಾಗ ನಮಗಿಂತ ಹಿರಿಯರನ್ನು ಮತ್ತು ನಮಗಿಂತ ಕಿರಿಯರನ್ನು ನಾವು ಗೌರವಿಸಲೇಬೇಕು. ನಮಗಿಂತ ಹಿರಿಯರನ್ನು ಗೌರವಿಸುವ ಮೂಲಕ ನಮಗಿಂತ ಕಿರಿಯರಿಗೆ ನಾವು ಗೌರವದ, ಪ್ರೀತಿಯ, ವಿಶ್ವಾಸದ ಪಾಠವನ್ನು ಪಠ್ಯೇತರ ಚಟುವಟಿಕೆಯ ರೂಪದಲ್ಲಿ ಕಲಿಸಲೇಬೇಕು. ನಾವು ನಮ್ಮ ಹಿರಿಯರ ಕುರಿತು ತೋರಿಸುವ ಅಸಡ್ಡೆಗಳು ನಮ್ಮ ಮಕ್ಕಳಿಗೆ ಪಾಠವಾದರೆ ಅವರು ಕೂಡ ಅದನ್ನೇ ನಮ್ಮ ವಿಷಯದಲ್ಲಿ ರೂಢಿಸಿಕೊಳ್ಳುತ್ತಾರೆ ಎಂಬ ಸೂಕ್ಷ್ಮತೆಯ ಅರಿವು ನಮಗಿರಬೇಕು.
ಶಾಲೆಯ ಪಾಠಗಳನ್ನು ಹೇಗೆ ಬೇಕಾದರೂ, ಯಾರು ಬೇಕಾದರೂ ಕಲಿಯಬಹುದು.. ಆದರೆ ಮೌಲ್ಯಯುತ ಬದುಕಿನ ಪಾಠ ಕಲಿತವರು ಬದುಕಿನ ಎಂತಹದ್ದೇ ಸವಾಲುಗಳನ್ನು ಸುಲಲಿತವಾಗಿ ಎದುರಿಸಬಲ್ಲರು.

BIJAPUR NEWS public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಉದಯರಶ್ಮಿ ಇಂದಿನ ದಿನಪತ್ರಿಕೆ ಜೂನ್ 21, 2026

ವಿಶ್ವದಾದ್ಯಂತ ಹರಡಿಕೊಂಡಿರುವ ಬಂಜಾರರು :ಪ್ರೊ.ನಾರಾಯಣ

ಕೋರಿಕೆಗೆ ಮನ್ನಣೆ: ರೈಲ್ವೆ ಸಚಿವರಿಗೆ ಸಚಿವ ಎಂ.ಬಿ.ಪಾಟೀಲ ಧನ್ಯವಾದ

ಬಿ.ಎಲ್.ಡಿ.ಇ ಸಂಸ್ಥೆಯ 94 ಪಾಲಿಟೆಕ್ನಿಕ್ ವಿದ್ಯಾರ್ಥಿಗಳು ಆಯ್ಕೆ

Add A Comment
Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Helldivers
  • Typora
  • Uncategorized
  • Wemod
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಉದಯರಶ್ಮಿ ಇಂದಿನ ದಿನಪತ್ರಿಕೆ ಜೂನ್ 21, 2026
    In ದಿನಪತ್ರಿಕೆ
  • ವಿಶ್ವದಾದ್ಯಂತ ಹರಡಿಕೊಂಡಿರುವ ಬಂಜಾರರು :ಪ್ರೊ.ನಾರಾಯಣ
    In (ರಾಜ್ಯ ) ಜಿಲ್ಲೆ
  • ಕೋರಿಕೆಗೆ ಮನ್ನಣೆ: ರೈಲ್ವೆ ಸಚಿವರಿಗೆ ಸಚಿವ ಎಂ.ಬಿ.ಪಾಟೀಲ ಧನ್ಯವಾದ
    In (ರಾಜ್ಯ ) ಜಿಲ್ಲೆ
  • ಬಿ.ಎಲ್.ಡಿ.ಇ ಸಂಸ್ಥೆಯ 94 ಪಾಲಿಟೆಕ್ನಿಕ್ ವಿದ್ಯಾರ್ಥಿಗಳು ಆಯ್ಕೆ
    In (ರಾಜ್ಯ ) ಜಿಲ್ಲೆ
  • ನೀಟ್ ಪರೀಕ್ಷೆ: ನಿಷೇಧಾಜ್ಞೆ ಜಾರಿಗೊಳಿಸಿ ಆದೇಶ
    In (ರಾಜ್ಯ ) ಜಿಲ್ಲೆ
  • ಲಸಿಕಾ ಕಾರ್ಯಕ್ರಮ ಯಶಸ್ವಿಗೊಳಿಸಿ :ಡಿಸಿ ಆನಂದ್ ಕೆ
    In (ರಾಜ್ಯ ) ಜಿಲ್ಲೆ
  • ಜು.೧ ರಿಂದ ಹಿರಿಯ ನಾಗರಿಕರ ಗುರುತಿನ ಚೀಟಿ ಅಭಿಯಾನ
    In (ರಾಜ್ಯ ) ಜಿಲ್ಲೆ
  • ಸಾಂಸ್ಕೃತಿಕ ಸೌರಭ ಕಾರ್ಯಕ್ರಮ :ಅರ್ಜಿ ಆಹ್ವಾನ
    In (ರಾಜ್ಯ ) ಜಿಲ್ಲೆ
  • ತಾಯಿ-ಶಿಶು ಮರಣ ಪ್ರಮಾಣ ಶೂನ್ಯಕ್ಕೆ ತನ್ನಿ :ಡಾ.ಆನಂದ ಕೆ
    In (ರಾಜ್ಯ ) ಜಿಲ್ಲೆ
  • ನಭೋಮಂಡಲದಲ್ಲಿ ಸೂರ್ಯನ ಸುತ್ತುವರೆದ ಉಂಗುರಾಕಾರ ವಿಸ್ಮಯ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.