ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ನಗರದ ಆದರ್ಶ ನಗರದ ಶ್ರೀ ಸಂತ ಸೇವಾಲಾಲ ದೇವಸ್ಥಾನದಲ್ಲಿ ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿ ಬೆಂಗಳೂರು, ವತಿಯಿಂದ ಜೂ.18 ರಿಂದ 20 ವರೆಗೆ ನಡೆಯಲಿರುವ “ಬಂಜಾರ ಯುವಕ-ಯುವತಿಯರಿಗೆ ಹವೇಲಿ, ವಳಂಗ, ವಿತಿ, ಕಡಿ ಕಸಳಾತ, ಸಿಕವಾಡಿ” ಕುರಿತು ಮೂರು ದಿನಗಳ ಕಾರ್ಯಾಗಾರಕ್ಕೆ ಚಾಲನೆ ನೀಡಲಾಯಿತು.
ಕಾರ್ಯಾಗಾರವನ್ನು ಉದ್ಘಾಟಿಸಿದ ಡಾ. ಮೋತಿಲಾಲ ರೂ ಚವ್ಹಾಣ ಅಧ್ಯಕ್ಷರು, ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿ ಅವರು ಮಾತನಾಡಿ, ಬಂಜಾರ ಅಕಾಡೆಮಿಯು ಬಂಜಾರ ಸಂಸ್ಕೃತಿಯನ್ನು ಉಳಿಸಲು ಹಗಲಿರುಳು ಕಾರ್ಯವನ್ನು ನಿರ್ವಹಿಸುತ್ತಿದೆ. ಬಂಜಾರ ಭಾಷೆ ಉಳಿಸಲು ಇಂದು ಎಲ್ಲಾ ಬಂಜಾರರು ತಮ್ಮ ಮನೆಗಳಲ್ಲಿ ಲಂಬಾಣಿ ಭಾಷೆಯನ್ನು ಮಾತನಾಡಬೇಕು. ಮಕ್ಕಳಿಗೂ ಕೂಡ ಲಂಬಾಣಿ ಭಾಷೆ ಕಲಿಸಿ ಆ ಮೂಲಕ ಭಾಷೆ ಉಳಿಸಲು ಶ್ರಮಿಸಬೇಕು. ಬಂಜಾರ ಸಂಸ್ಕೃತಿ ಮತ್ತು ಭಾಷೆ ಉಳಿಸಲು ಬಂಜಾರ ಅಕಾಡೆಮಿಯು ಎಲ್ಲ ರೀತಿಯ ಕೆಲಸ ಕಾರ್ಯಗಳನ್ನು ನಿರ್ವಹಿಸಲು ಸಿದ್ಧವಾಗಿದೆ. ಯುವಕರು ಮತ್ತು ಯುವತಿಯರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಮಹಾನಗರ ಪಾಲಿಕೆಯ ಉಪಮೇಯರ ಅಗಿರುವ ಸುಮಿತ್ರಾ ಜಾಧವ ಅವರು, ಬಂಜಾರ ಯುವತಿಯರು ಹವೇಲಿ ಢಾವಲೊ ವಳಲಂಗ ಕಲಿಯಬೇಕೇಂದರು.
ಬಿ.ಡಿ. ಚವ್ಹಾಣ ನಿವೃತ್ತ ಮುಖ್ಯೋಪಾದ್ಯಾಯರು ಮಾತನಾಡುತ್ತಾ, ನಮ್ಮ ತಾಯಿಂದರು ಬಂಜಾರ ಸಂಸ್ಕೃತಿಯನ್ನು ಉಳಿಸಿಕೊಂಡು ಬಂದಿರುವರು. ಇಂದಿನ ಯುವ ಪೀಳಿಗೆ ಈ ಸಂಸ್ಕೃತಿಯನ್ನು ಉಳಿಸುವ ಜವಾಬ್ದಾರಿಯನ್ನು ಹೊತ್ತುಕೊಳ್ಳಬೇಕು ಎಂದರು.
ಅಧ್ಯಕ್ಷತೆ ವಹಿಸಿದ ಮಾಜಿ ಜಿ.ಪಂ. ಸದಸ್ಯ ರಾಜಪಾಲ ಚವ್ಹಾಣ ಅವರು, ಇಂತಹ ಕಾರ್ಯಕ್ರಮಗಳನ್ನು ರೂಪಿಸಿಕೊಂಡು ಇಂದಿನ ಯುವಕರಿಗೆ ಬಂಜಾರ ಸಂಸ್ಕೃತಿ ಮತ್ತು ಭಾಷೆ ಕುರಿತು ಅರಿವು ಮೂಡಿಸುವ ಅವಶ್ಯಕತೆ ಇದೆ ಎಂದರು.
ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಸುರೇಶ ಠಾಕ್ರ್ಯಾಪ್ಪ ಲಮಾಣಿ ಮತ್ತು ಸಂಗೀತಾ ನಾಯಕ ಅವರು ಯುವಕ ಯುವತಿಯರಿಗೆ ಬಂಜಾರ ಸಂಸ್ಕೃತಿಯ ಕುರಿತು ತರಬೇತಿ ನೀಡಿದರು.
ಶ್ರೀಮತಿ ಸಾಂಗಿಬಾಯಿ ಚವ್ಹಾಣ ಮುಖ್ಯಅತಿಥಿಯಾಗಿ ಭಾಗವಹಿಸಿದರು.
ವಸಂತ ಲಮಾಣಿ ಪ್ರಾರ್ಥಿಸಿದರು. ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿ ಸದಸ್ಯೆ ಡಾ.ಸುರೇಖಾ ಜಿ ರಾಠೋಡ ಪ್ರಾಸ್ತಾವಿಕ ಮತ್ತು ಸ್ವಾಗತ ಭಾಷಣ ಮಾಡಿದರು. ಕು.ಮಂಜುಳಾ ಚವ್ಹಾಣ ನಿರೂಪಿಸಿದರು. ಕೋಮಲ ಚವ್ಹಾಣ ವಂದನಾರ್ಪಣೆ ಮಾಡಿದರು.
ಕಾರ್ಯಕ್ರಮದಲ್ಲಿ ಶಾಂತಾಬಾಯಿ ರಾಠೋಡ, ಶಾನು ರಾಠೋಡ, ರವಿ ರಾಠೋಡ, ಶಂಕರ ರಾಠೋಡ ಮತ್ತಿತರರು ಉಪಸ್ಥಿತರಿದ್ದರು.

