ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಉಪ ಕೃಷಿ ನಿರ್ದೇಶಕರು, ಜಿಲ್ಲಾ ಕೃಷಿ ತರಬೇತಿ ಕೇಂದ್ರ, ವಿಜಯಪುರ ಇವರ ವತಿಯಿಂದ ಜಿಲ್ಲೆಯ ರೈತರು ಹಾಗೂ ರೈತ ಮಹಿಳೆಯರಿಗಾಗಿ ಯಂತ್ರೋಪಕರಣಗಳು ಮತ್ತು ಮುಂಗಾರು ಹಂಗಾಮಿನ ಜಿಲ್ಲೆಯ ಪ್ರಮುಖ ಬೆಳೆಗಳಲ್ಲಿ ನೂತನ ಬೇಸಾಯ ಪದ್ಧತಿಗಳು ತೊಗರಿ ಮತ್ತು ಹತ್ತಿ ವಿಷಯದ ಕುರಿತು ಮೂರು ದಿನಗಳ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಈ ತರಬೇತಿಯು ಜೂನ್ ೨೨ ರಿಂದ ೨೪ರವರೆಗೆ ಜಿಲ್ಲಾ ಆಧುನಿಕ ಕೃಷಿ ತರಬೇತಿ ಕೇಂದ್ರ, ವಿಜಯಪುರದಲ್ಲಿ ನಡೆಯಲಿದ್ದು, ಮುಂಗಾರು ಹಂಗಾಮಿನಲ್ಲಿ ತೊಗರಿ ಮತ್ತು ಹತ್ತಿ ಬೆಳೆಗಳ ವೈಜ್ಞಾನಿಕ ಕೃಷಿ ಪದ್ಧತಿಗಳು, ಆಧುನಿಕ ಯಂತ್ರೋಪಕರಣಗಳ ಬಳಕೆ ಹಾಗೂ ಉತ್ಪಾದಕತೆ ಹೆಚ್ಚಿಸುವ ತಂತ್ರಜ್ಞಾನಗಳ ಕುರಿತು ರೈತರಿಗೆ ಮಾಹಿತಿ ನೀಡಲಾಗುವುದು.
ಆಸಕ್ತ ರೈತರು ಹಾಗೂ ರೈತ ಮಹಿಳೆಯರು ಜೂನ್ ೧೯ರೊಳಗೆ ತಮ್ಮ ಹೆ¸ರು ನೋಂದಾಯಿಸಿಕೊಳ್ಳುವAತೆಯೂ ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೃಷಿ ಅಧಿಕಾರಿ ಶ್ರೀಮತಿ ಗೀತಾ ಬಜಂತ್ರಿ (ಮೊ. ೯೯೮೬೦೫೪೭೫೦) ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.
