ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಸನ್ 2026-27 ನೇ ಸಾಲಿಗೆ ವಿಜಯಪುರ ಜಿಲ್ಲೆಗೆ ಕೇಂದ್ರ ಸರ್ಕಾರದಿಂದ ರಾಜ್ಯ ಜಿಲ್ಲೆಯ ರಸ್ತೆಗಳು ಮಳೆಯಿಂದ ಹಾಗೂ ಕಬ್ಬಿನ ವಾಹನಗಳ ಸಂಚಾರದಿಂದ ದುರಸ್ತಿಗೆ ಬಂದಿರುವ ರಸ್ತೆಗಳ ಅಗಲೀಕರಣ ಹಾಗೂ ಮರು ನಿರ್ಮಾಣಕ್ಕಾಗಿ 4800 ಲಕ್ಷದ ಸಿ.ಆರ್.ಐ.ಎಫ್ ಕಾಮಗಾರಿಗಳ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಶೀಘ್ರದಲ್ಲಿ ಕಾಮಗಾರಿ ಚಾಲನೆಯ ಪೂಜೆಯನ್ನು ನೆರವೇರಿಸಲಾಗುವುದು ಎಂದು ರಮೇಶ ಜಿಗಜಿಣಗಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿದ ಅವರು, ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಇಂಡಿ-ಲಚ್ಯಾಣ-ಪಡನೂರ-ಶಿರಗೂರ-ಗುಬ್ಬೇವಾಡ ರಸ್ತೆ ಕಿ.ಮಿ. 3.00 ರಿಂದ 8.5 ಕಿ.ಮಿ ವರೆಗೆ (ಆಯ್ದ ಭಾಗಗಳಲ್ಲಿ) ಅಂದಾಜು ರೂ. 600.00 ಲಕ್ಷಗಳಲ್ಲಿ ರಸ್ತೆ ಅಗಲೀಕರಣ ಕಾಮಗಾರಿ. – (ರಸ್ತೆಯ ಉದ್ದ 10.00 ಕಿಮಿ), ವಿಜಯಪುರ ಜಿಲ್ಲೆಯ ತಾಳಿಕೋಟಿ ತಾಲೂಕಿನ ಡಂಬಳ-ಕಲಕೇರಿ ಜಿಲ್ಲೆಯ ರಸ್ತೆ ಕಿ.ಮಿ. 8.38 ರಿಂದ 12.65 ಮತ್ತು 17.50 (ಆಯ್ದ ಭಾಗಗಳಲ್ಲಿ) ಮರು ಡಾಂಬರೀಕರಣ ರೂ. 6.00 ಲಕ್ಷಗಳ ಕಾಮಗಾರಿ (ರಸ್ತೆಯ ಉದ್ದ- 10.00 ಕಿ.ಮಿ) ಕಾಮಗಾರಿ, ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ರಾಜ್ಯ ಹೆದ್ದಾರಿ-34 ಔರಾದ-ಸದಾಶಿವಗಢ ರಸ್ತೆ 357.00 ರಿಂದ 367.80 ಕಿ.ಮಿ ( ಹಲಗಣಿ ಕೂಡರಸ್ತೆಯಿಂದ ಅರ್ಜುಣಗಿ) (ರಸ್ತೆ ಉದ್ದ-10.8 ಕಿ.ಮಿ) ರೂ. 500.00 ಲಕ್ಷಗಳ ರಸ್ತೆ ಕಾಮಗಾರಿ ಸುಧಾರಣೆ. ರಸ್ತೆ ಉದ್ದ 10.8 ಕಿಮಿ), ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಚತುಷ್ಪಟ ರಸ್ತೆ ( 4 ಲೇನ್) ಗಲ್ಲಿಯ ದೀಪದಿಂದ ಎನ್.ಎಚ್-561ಎ ಹತ್ತಿರ ಭೂತನಾಳ ಕೆರೆಯಿಂದ ಗೋಶಾಲೆ ವರೆಗೆ ವಿಜಯಪುರ ನಗರ ಲಿಮಿಟ್ (1.00 ಕಿ.ಮಿ ಉದ್ದ) ರೂ. 100.00 ಲಕ್ಷಗಳ ಕಾಮಗಾರಿ ನಿರ್ಮಾಣ 2. 1.00, ವಿಜಯಪುರ ಜಿಲ್ಲೆಯ ವಿಜಯಪುರ ನಗರದ ಸಿ.ಸಿ. ರಸ್ತೆ ಕಲ್ಲೂರ ಪೆಟ್ರೋಲ್ ಪಂಪ ದಿಂದ ಯಂಡಿಗೇರಿ ಹಾಸ್ಪಿಟಲ್ (ಸಿದ್ದೇಶ್ವರ ಆಶ್ರಮ) ವರೆಗೆ ಒಟ್ಟು ಉದ್ದ 700 ಮಿ. ಒಳಗೊಂಡ ಒಳಚರಂಡಿ, ಫೂಟಪಾತ ಮತ್ತು ಗಲ್ಲಿಯ ದೀಪ ವಿಜಯಪುರ ನಗರಕ್ಕೆ ಸಿಮೀತ- ರೂ. 600 ಲಕ್ಷಗಳ ಕಾಮಗಾರಿ ಸುಧಾರಣೆ.- ರಸ್ತೆ ಉದ್ದ 0.7 ಕಿ.ಮಿ), ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಜೇವರಗಿ-ಚಿಕ್ಕೋಡಿ ರಸ್ತೆ ಕಿ.ಮಿ 4.00 ರಿಂದ 6.65 ಕಿ.ಮಿ ಸಿಂದಗಿ ಪಟ್ಟಣಕ್ಕೆ ಸಿಮೀತ ಮರು ಡಾಂಬರೀಕರಣ ಕಾಮಗಾರಿ (ಆಯ್ದ ಭಾಗಗಳಲ್ಲಿ) ರೂ. 430.00 ಲಕ್ಷಗಳ- 2.5 ಕಿ.ಮಿ ಉದ್ದ, ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಆಲಮೇಲ-ಸಿಂದಗಿ ರಸ್ತೆ ಕಿ.ಮಿ 10.00 18.39 ಕಿ.ಮಿ ರಸ್ತೆ ಮರು ಡಾಂಬರೀಕರಣ ಕಾಮಗಾರಿ ರೂ. 170.00 ಲಕ್ಷಗಳು – 8.39 ಕಿಮಿ ಉದ್ದ., ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ರಾಜ್ಯ ಹೆದ್ದಾರಿ -124 ಭರಖೇಡ- ಬೀಳಗಿ (ಆಯ್ದ ಭಾಗಗಳಲ್ಲಿ) ರಸ್ತೆ ಸುಧಾರಣೆ ರೂ. 600.00 ಲಕ್ಷಗಳು -19.45 ಕಿ.ಮಿ ಉದ್ದ, ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ರಸ್ತೆ ಮುಳವಾಡ-ಮನಗೂಳಿ-ಉಕ್ಕಲಿ ಕಿ.ಮಿ 2.00 ರಿಂದ 21.70 ಕಿ.ಮಿ ವರೆಗೆ (ಆಯ್ದ ಭಾಗಗಳಲ್ಲಿ) ಮರು ಡಾಂಬರೀಕರಣ ರೂ. 600.00 ಲಕ್ಷಗಳ ಕಾಮಗಾರಿ-19.7 ಕಿ.ಮಿ ಉದ್ದ., ವಿಜಯಪುರ ಜಿಲ್ಲೆಯ ವಿಜಯಪುರ ತಾಲೂಕಿನ ಕಲ್ಲೂರ ಪೆಟ್ರೋಲ ಪಂಪ ಯಿಂದ ಬಂಬಳ ಅಗಸಿ ಮಾರ್ಗವಾಗಿ ಅಶ್ವಿನಿ ಆಸ್ಪತ್ರೆ ವಾರ್ಡ ನಂ. 10 ನಲ್ಲಿ ಗಲ್ಲಿಯಲ್ಲಿ ದೀಪ ಅಳವಡಿಸುವದು ಮತ್ತು ರಸ್ತೆ ಯಂಡಿಗೇರಿ ಆಸ್ಪತ್ರೆಯಿಂದ ಎನ್.ಎಚ್-52 ಮಾರ್ಗವಾಗಿ ಲೇಡಿಜ್ ಹಾಸ್ಟೆಲ್ ವಾರ್ಡ ನಂ. 12 ಗಲ್ಲಿಯಲ್ಲಿ ದೀಪ ಅಳವಡಿಸುವ ಕಾಮಗಾರಿ ಸುಧಾರಣೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಪ್ರಕಟಣೆಯಲ್ಲಿ ಸಂಸದರು ತಿಳಿಸಿದ್ದಾರೆ.

