ಉದಯರಶ್ಮಿ ದಿನಪತ್ರಿಕೆ
ಆಲಮಟ್ಟಿ: ಗ್ರಾಮಸ್ಥರ ಬಹು ದಿನಗಳ ಬೇಡಿಕೆಯಾಗಿದ್ದ ವಿಜಯಪುರದಿಂದ ಬೇನಾಳ ರೈಲು ನಿಲ್ದಾಣಕ್ಕೆ ನೂತನ ಬಸ್ (ಸಂಚಾರ ) ಸೇವೆ ಇಂದು ಆರಂಭವಾಗಿದೆ.
ವರುಷದ ಹಿಂದೆ ಸಾರಿಗೆ
ಇಲಾಖೆಯ ಅಧಿಕಾರಿಗಳಿಗೆ ಬೇನಾಳ ಆರ್. ಎಸ್. ಗ್ರಾಮಸ್ಥರು ಮನವಿ ಮಾಡಿಕೊಂಡಿದ್ದರು,
ಮನವಿಗೆ ಸ್ಪಂದಿಸಿದ ಅಧಿಕಾರಿಗಳು ಬಸ್ ಸಂಚಾರವನ್ನು ಆರಂಭಿಸಿದ್ದಾರೆ.
ಈ ನೂತನ ಬಸ್ಸು ಪ್ರತಿದಿನ ವಿಜಯಪುರ ಕೇಂದ್ರ ಬಸ್ ನಿಲ್ದಾಣದಿಂದ ಬೆಳಿಗ್ಗೆ ೭:೪೫ಕ್ಕೆ ಹೊರಟು ೦೯: ೩೦ಕ್ಕೆ ಆಲಮಟ್ಟಿ ಉದ್ಯಾನಕ್ಕೆ ತಲುಪುತ್ತದೆ.
೦೯:೪೫ ನಿಮಿಷಕ್ಕೆ ಉದ್ಯಾನದಿಂದ
ಹೊರಟು ೧೧: ೩೦ ನಿಮಿಷಕ್ಕೆ ವಿಜಯಪುರವನ್ನು ತಲುಪುತ್ತದೆ.
ಅದೇ ಬಸ್ಸು ೧೧ : ೪೫ ನಿಮಿಷಕ್ಕೆ ವಿಜಯಪುರವನ್ನು ಬಿಟ್ಟು ೦೧: ೩೦ಕ್ಕೆ ಆಲಮಟ್ಟಿ ಉದ್ಯಾನಕ್ಕೆ ಬರುತ್ತದೆ.
ನಂತರ ಮಧ್ಯಾಹ್ನ ೨ ಗಂಟೆಗೆ ಉದ್ಯಾನವನ್ನು ಬಿಟ್ಟು ೩:೩೦ಕ್ಕೆ ವಿಜಯಪುರವನ್ನು ತಲುಪುತ್ತದೆ.
ಹೀಗೆ ಪ್ರತಿದಿನ ೪ ಸಲ ಬಸ್ಸು ಸೇವೆಯನ್ನು ಒದಗಿಸುತ್ತದೆ.
ನೂತನ ಬಸ್ ಸಂಚಾರದಿಂದ
ಈ ಭಾಗದ ವಿದ್ಯಾರ್ಥಿಗಳಿಗೆ, ರೈತರಿಗೆ, ಕೂಲಿಕಾರ್ಮಿಕರಿಗೆ, ಮಹಿಳಾ ಉದ್ಯೋಗಿಗಳಿಗೆ
ಬಹಳ ಸಹಾಯವಾಗಿದೆ.
ವಿಜಯಪುರ ಕೇಂದ್ರ ಬಸ್ ನಿಲ್ದಾಣ ದಿಂದ ಹೊರಟ
ಬಸ್ಸು ಜುಮನಾಳ ಕ್ರಾಸ್, ಹೊನಗನಹಳ್ಳಿ, ತೊನಶ್ಯಾಳ ಕ್ರಾಸ್, ಮುಳವಾಡ ಪ್ರವಾಸಿ ಮಂದಿರ, ಮುಳವಾಡ, ಕಲಗುರ್ಕಿ, ಕಲಗುರ್ಕಿ ರೈಲು ನಿಲ್ದಾಣ, ತಳೇವಾಡ ಕ್ರಾಸ್, ಕೂಡಗಿ ರೈಲು ನಿಲ್ದಾಣ, ಎನ್‌ಟಿಪಿಸಿ, ಅಂಗಡಗೇರಿ ರೈಲು ನಿಲ್ದಾಣ, ವಂದಾಲ ರೈಲು ನಿಲ್ದಾಣ, ಬೇನಾಳ ರೈಲು ನಿಲ್ದಾಣ, ಬೇನಾಳ ಕ್ರಾಸ್, ಆಲಮಟ್ಟಿ ಸರ್ಕಲ್ ಬಸ್ ನಿಲ್ದಾಣ, ಆಲಮಟ್ಟಿ ರೈಲು ನಿಲ್ದಾಣದ ಮುಖಾಂತರ ಆಲಮಟ್ಟಿ ಉದ್ಯಾನಕ್ಕೆ ತಲುಪುತ್ತದೆ ಈ ಸೇವೆಯನ್ನು ಸಾರ್ವಜನಿಕರು ಸದುಪಯೋಗ ಪಡಿಸಿಕೊಳ್ಳಬೇಕೆಂದು ಸಾರಿಗೆ ಇಲಾಖೆಯ ಅಧಿಕಾರಿಗಳು ಮನವಿ ಮಾಡಿಕೊಂಡಿದ್ದಾರೆ.
ಬೇನಾಳ ಗ್ರಾಮಸ್ಥರಿಂದ ಅಭಿನಂದನೆ
ಮನವಿಗೆ ಸ್ಪಂದಿಸಿ
ನೂತನ ಬಸ್ ಸಂಚಾರವನ್ನು ಆರಂಭಿಸಿರುವ ವಿಜಯಪುರ ಸಾರಿಗೆ ಇಲಾಖೆಯ ಅಧಿಕಾರಿಗಳಿಗೆ ಮುಖಂಡರಾದ ಜಿ. ಸಿ. ಮುತ್ತಲದಿನ್ನಿ, ಬಿ. ಎಚ್. ಗಣಿ, ಟಿ. ಎಸ್. ಬಿರಾದಾರ, ನೀಲೇಶ್ ಬೇನಾಳ್, ಮಹೇಶ ಗಾಳಪ್ಪಗೋಳ, ಚಂದ್ರಪ್ಪ ಮನಗೂಳಿ, ರಮೇಶ ವಂದಾಲ, ಮಹಾದೇವಪ್ಪ ಹೊನ್ಯಾಳ, ಎಸ್. ಆರ್. ಬಿರಾದಾರ, ಯಲ್ಲಪ್ಪ ಭಜಂತ್ರಿ, ಮಕ್ತುಮ್ ಬಾಗೇವಾಡಿ, ಶ್ರೀಶೈಲ ಮಠ, ರಾಮಣ್ಣ ಮುತ್ತಲದಿನ್ನಿ, ಬಸು ಕೊಳದಾನವರ, ಹಸನ್ ದಾಲರೋಟಿ, ಮಹಮ್ಮದ್ ಬೇದರಕರ, ಮಹೇಶ ಇಂಗಳೇಶ್ವರ, ಅಬ್ದುಲ್ ಬೆಣ್ಣಿ, ಮೈಬೂಬ್ ಬಾಗವಾನ ಸೇರಿದಂತೆ ಸರ್ವ ಗ್ರಾಮಸ್ಥರು ಅಭಿನಂದನೆ ಸಲ್ಲಿಸಿದ್ದಾರೆ.

