ಉದಯರಶ್ಮಿ ದಿನಪತ್ರಿಕೆ
ಆಲಮಟ್ಟಿ: ಇಲ್ಲಿಯ ಚಂದ್ರಮ್ಮ ದೇವಸ್ಥಾನದ ಬಳಿ ಕೃಷ್ಣಾ ನದಿಯ ತೀರದಲ್ಲಿ ತಾಳಿಕೋಟೆ, ಹುಲ್ಲೂರು ತಾಂಡಾದ ೧೬ ಜನ ಯುವಕರು ಸೇರಿ ೫ ಗಂಟೆಗಳ ಶ್ರಮದಾನ ಮಾಡಿ ಸುಮಾರು ೨ ಟನ್ ಕಸ ತೆಗೆದಿದ್ದಾರೆ.
ತೆಗೆದ ಕಸದಲ್ಲಿ ಏನಿತ್ತು?
- ಭಕ್ತರು ಬಿಟ್ಟುಹೋದ ಹಳೆಯ ಬಟ್ಟೆಗಳು
- ಗುಟ್ಕಾ ಪ್ಯಾಕೆಟ್, ಶ್ಯಾಂಪೂ ಪೌಚ್, ಪ್ಲಾಸ್ಟಿಕ್ ಬಾಟಲಿ
- ಟೆಟ್ರಾ ಪಾಕ್, ಕುಂಕುಮ-ಅರಿಶಿಣದ ಪ್ಲಾಸ್ಟಿಕ್ ಚೀಲ
ವಿಶೇಷ ಏನು?
ಸ್ವಂತ ಖರ್ಚು: ೬೦ ಕಿ.ಮೀ ದೂರದಿಂದ ಬಂದು, ಸ್ವಂತ ಖರ್ಚಲ್ಲಿ ಈ ಕೆಲಸ ಮಾಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಮನು ನಾಯ್ಕೋಡಿ ಅವರ ಕರೆಗೆ ಸ್ಪಂದಿಸಿ ವಾಟ್ಸಾಪ್/ಫೇಸ್‌ಬುಕ್ ಮೂಲಕ ಸೇರಿದ ತಂಡ.
ಸಹಕಾರ: ಲಕ್ಷ್ಮಿ ಕ್ಲಾಥ್ ಸ್ಟೋರ್ ಉಚಿತ ಬಟ್ಟೆ ಚೀಲ ಕೊಟ್ಟಿದೆ. ಅಪರಿಚಿತರು ನೀರಿನ ಬಾಕ್ಸ್ ಕೊಟ್ಟು ಸಹಾಯ ಮಾಡಿದ್ದಾರೆ.
ಸಂದೇಶ: “ರಾಜಕಾರಣಿಗಳು ಬಾಗಿನ ಅರ್ಪಿಸಿದರೆ ಸಾಲದು, ನದಿ ಸ್ವಚ್ಛ ಮಾಡೋದೇ ನಿಜವಾದ ಬಾಗಿನ” ಅಂತ ಯುವಕರ ಮಾತು.
ಇಂತಹ ಯುವಕರು ಇದ್ದರೆ ನಮ್ಮ ನದಿ, ಪರಿಸರ ಉಳಿಯುತ್ತೆ ಎಂಬುದು ಈ ಯುವಕರ ಅಂಬೋಣ.
ಮನು ನಾಯ್ಕೋಡಿ, ರಾಜೇಂದ್ರ ಈಳಗೇರ, ಸೂರಜ್ ರಾಠೋಡ ಸೇರಿದಂತೆ ಎಲ್ಲ ೧೬ ಜನ ಯವಕರ ಸೇವಾಕಾರ್ಯಕ್ಕೆ ಸಾರ್ವಜನಿಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

