ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ನಗರ ಪ್ರದೇಶದಲ್ಲಿ ತಾಂತ್ರಿಕ ಕಾರಣಗಳಿಂದ ಇ-ಕೆವೈಸಿ ಮಾಡಿಸಲು ಬಾಕಿ ಇರುವ ಪಡಿತರ ಚೀಟಿದಾರರಿಗೆ ಐರಿಸ್ ಸಾಧನದ ಮೂಲಕ ಇ-ಕೆವೈಸಿ ಮಾಡಿಸಿಕೊಳ್ಳಲು ಆಹಾರ ಇಲಾಖೆಯು ಜೂನ್ ೨೫ ರವರೆಗೆ ವಿಶೇಷ ಅವಕಾಶ ಕಲ್ಪಿಸಲಾಗಿದೆ. ವಿಜಯಪುರ ನಗರ ಪ್ರದೇಶದಲ್ಲಿ ಇನ್ನೂ ಸುಮಾರು ೬೯೭ ಪಡಿತರ ಚೀಟಿದಾರರ ಇ-ಕೆವೈಸಿ ಬಾಕಿ ಇರುವುದು ಕಂಡುಬAದಿದೆ. ಬಯೋಮೆಟ್ರಿಕ್ (ಬೆರಳು ಗುರುತು) ಸರಿಯಾಗಿ ಮೂಡದ ಕಾರಣ ಇ-ಕೆವೈಸಿ ಪ್ರಕ್ರಿಯೆ ನೂರಕ್ಕೆ ನೂರರಷ್ಟು ಪೂರ್ಣಗೊಂಡಿಲ್ಲದೇ ಇರುವುದರಿಂದ ಇಲಾಖೆಯ ವತಿಯಿಂದಲೇ ವಿಶೇಷ ಇ-ಕೆವೈಸಿ ಮಾಡಿಸಲು ಅವಕಾಶ ಕಲ್ಪಿಸಲಾಗಿದೆ. ತಾಂತ್ರಿಕ ಕಾರಣಗಳಿಂದ ಇ-ಕೆವೈಸಿ ಆಗದೇ ಬಾಕಿ ಉಳಿದಿರುವ ಪಡಿತರ ಚೀಟಿ ಫಲಾನುಭವಿಗಳು ವಿಜಯಪುರದ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿರುವ ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆಯ ಪಡಿತರ ವಿಭಾಗದ ಸಹಾಯಕ ನಿರ್ದೇಶಕರ ಕಚೇರಿಗೆ ಭೇಟಿ ನೀಡಿ ಇ-ಕೆವೈಸಿ ಮಾಡಿಸಿಕೊಳ್ಳಬಹುದು. ದಿನಾಂಕ ೧೧-೦೬-೨೦೨೬ ರಿಂದ ೨೫-೦೬-೨೦೨೬ ರವರೆಗೆ ಕಚೇರಿ ವೇಳೆಯಲ್ಲಿ ಈ ಸೌಲಭ್ಯ ಲಭ್ಯವಿರಲಿದ್ದು, ನ್ಯಾಯ ಬೆಲೆ ಅಂಗಡಿಕಾರರು ಇ-ಕೆವೈಸಿ ಬಾಕಿ ಇರುವ ಫಲಾನುಭವಿಗಳನ್ನು ಕಚೇರಿಗೆ ಕಳುಹಿಸಿಕೊಟ್ಟು ಸಹಕರಿಸಬೇಕೆಂದು ಎಂದು ಆಹಾರ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
