Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಜೂ.15ರಂದು ವಿಜಯಪುರದಲ್ಲಿ ಅಪ್ರೆಂಟಿಸ್ ಮೇಳ

ತಿಪಟೂರಿನ ಅಕ್ಷಯ ಕಲ್ಪ ಕ್ಯಾಂಪಸ್‌ಗೆ ತರಬೇತಿಗೆ ತೆರಳಿದ ರೈತರ ತಂಡ

ನನ್ನ ಗಿಡ-ನನ್ನ ಭೂಮಿ ಸಂಸ್ಥೆಯಿಂದ ದಿ.ನಾವಲಗಿ ಸ್ಮರಣೆ & ಪರಿಸರ ದಿನಾಚರಣೆ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ಝಮೀರ್ ಅಹ್ಮದ್ ಖಾನ್‌ ಗೆ ಸಚಿವ ಸ್ಥಾನ ನೀಡಲು ಆಗ್ರಹಿಸಿ ಪ್ರತಿಭಟನೆ
(ರಾಜ್ಯ ) ಜಿಲ್ಲೆ

ಝಮೀರ್ ಅಹ್ಮದ್ ಖಾನ್‌ ಗೆ ಸಚಿವ ಸ್ಥಾನ ನೀಡಲು ಆಗ್ರಹಿಸಿ ಪ್ರತಿಭಟನೆ

By No Comments2 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಉದಯರಶ್ಮಿ ದಿನಪತ್ರಿಕೆ

ಇಂಡಿ‌: ರಾಜ್ಯ ಸಚಿವ ಸಂಪುಟದ ಎರಡನೇ ಹಂತದ ವಿಸ್ತರಣೆಯಲ್ಲಿ ಕಾಂಗ್ರೆಸ್ ಹಿರಿಯ ಮುಖಂಡ ಹಾಗೂ ಮಾಜಿ ಸಚಿವ ಝಮೀರ್ ಅಹ್ಮದ್ ಖಾನ್‌ ಅವರಿಗೆ ಉಪಮುಖ್ಯಮಂತ್ರಿ (ಡಿಸಿಎಂ) ಅಥವಾ ಕ್ಯಾಬಿನೆಟ್ ದರ್ಜೆಯ ಸಚಿವ ಸ್ಥಾನ ನೀಡಬೇಕು ಎಂದು ಆಗ್ರಹಿಸಿ ವಿಜಯಪುರ ಜಿಲ್ಲೆಯ ಇಂಡಿ ನಗರದಲ್ಲಿ ಯುವ ಅಲ್ಪಸಂಖ್ಯಾತರ ಅಭಿವೃದ್ಧಿ ಸಮಿತಿಯ ನೇತೃತ್ವದಲ್ಲಿ ಗುರುವಾರ ಪ್ರತಿಭಟನೆ ನಡೆಸಲಾಯಿತು.
ನಗರದ ಪ್ರವಾಸಿ ಮಂದಿರದಿಂದ ಪ್ರತಿಭಟನೆ ಪ್ರಾರಂಭಸಿ ಟಿಪ್ಪು ಸುಲ್ತಾನ್ ವೃತ್ತ, ಬಸವೇಶ್ವರ ವೃತ್ತ ,ಡಾ. ಬಿ ಆರ್ ಅಂಬೇಡ್ಕರ್ ಹಾಗೂ ಮಹಾವೀರ ವೃತ್ತಕ್ಕೆ ತೆರಳಿ ಪ್ರತಿಭಟನಾಕಾರರು ರಾಜ್ಯ ಸರ್ಕಾರ ಹಾಗೂ ಕಾಂಗ್ರೆಸ್ ಹೈಕಮಾಂಡ್‌ಗೆ ವಿರುದ್ಧ ಘೋಷಣೆಗಳನ್ನು ಕೂಗಿ, ಜಮೀರ್ ಅಹಮ್ಮದ್ ಖಾನ್ ಅವರಿಗೆ ಸಚಿವ ಸಂಪುಟದಲ್ಲಿ ಸೂಕ್ತ ಸ್ಥಾನಮಾನ ಕಲ್ಪಿಸುವಂತೆ ಒತ್ತಾಯಿಸಿದರು.
ತದನಂತರ ತಾಲೂಕು ಆಡಳಿತ ‌ಸೌಧಕ್ಕೆ ತೆರಳಿ ಶಿರಸ್ತೆದಾರ ಎಸ್ ಆರ್ ಮುಜಗೊಂಡ ಮೂಲಕ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ಹೈಕಮಾಂಡ್‌ಗೆ ಮನವಿ ಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಯುವ ಅಲ್ಪಸಂಖ್ಯಾತ ಅಭಿವೃದ್ಧಿ ಕಮಿಟಿಯ ಸಂಸ್ಥಾಪಕ ಅಧ್ಯಕ್ಷ ಬಿ‌ಡಿ‌ ಇನಾಮದಾರ ಮಾತನಾಡಿ, ಸಚಿವರಾಗಿದ್ದ ಅವಧಿಯಲ್ಲಿ ಜಮೀರ್ ಅಹಮ್ಮದ್ ಖಾನ್ ಕರ್ನಾಟಕದ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡಿದ್ದಾರೆ. ಬಡವರು ಹಾಗೂ ಹಿಂದುಳಿದ ವರ್ಗಗಳ ಅಭಿವೃದ್ಧಿಗಾಗಿ ವಿವಿಧ ವಸತಿ ಯೋಜನೆಗಳು ಮತ್ತು ಮೂಲಸೌಕರ್ಯ ಅಭಿವೃದ್ಧಿ ಕಾರ್ಯಕ್ರಮಗಳನ್ನು ಜಾರಿಗೆ ತಂದಿರುವ ಜಮೀರ್ ಅಹಮ್ಮದ್ ಖಾನ್ ಅವರಿಗೆ ಡಿಸಿಎಂ ಅಥವಾ ಕ್ಯಾಬಿನೆಟ್ ಸಚಿವ ಸ್ಥಾನ ನೀಡುವ ಮೂಲಕ ಅವರ ಸೇವೆಯನ್ನು ರಾಜ್ಯ ಮಟ್ಟದಲ್ಲಿ ಬಳಸಿಕೊಳ್ಳಬೇಕು ಎಂದು ಆಗ್ರಹಿಸಿದರು.
ಒಂದು ವೇಳೆ ಸಚಿವ ಸಂಪುಟದಲ್ಲಿ ಅವರಿಗೆ ಸ್ಥಾನ ನೀಡದಿದ್ದರೆ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸಲಾಗುವುದು. ಜೊತೆಗೆ ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಉತ್ತರ ನೀಡಲು ರೈತರು ಹಾಗೂ ವಿವಿಧ ಸಂಘಟನೆಗಳು ಸಜ್ಜಾಗಲಿವೆ ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.
ನ್ಯಾಯವಾದಿ ಎಮ್ ಬಿ ಮಾಣಿಕ, ರಸೂಲ್ ಮಾಶ್ಯಾಳಕರ ಮಾತನಾಡಿದರು.
ಈ ಸಂದರ್ಭದಲ್ಲಿ ರಿಯಾಜ್ ಕೊರಬು, ಅಬ್ದುಲ್ ಚಂದನವಾಲೆ, ಪಪ್ಪು ಮೋಮಿನ್, ಜಬ್ಬರ್ ಸುಂಬಡ, ದಸ್ತಗಿರಿ ಗಾಲಿಬವಾಲೆ, ಮಹಿಬೂಬ್ ಕಲಕುಮಟಿಗೆ, ಬಿಲಾಲ ಡಾಂಗೆ, ಸಾದಿಕಾ ಮಾಶ್ಯಾಳಕರ, ಶಕೀಲಾ ಗಾಲಿಬವಾಲೆ, ನೂರುದ್ದೀನ್ ಮಕಾನಂದಾರ ಸೇರಿದಂತೆ ಅನೇಕರು ಹಾಜರಿದ್ದರು.

BIJAPUR NEWS public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಜೂ.15ರಂದು ವಿಜಯಪುರದಲ್ಲಿ ಅಪ್ರೆಂಟಿಸ್ ಮೇಳ

ತಿಪಟೂರಿನ ಅಕ್ಷಯ ಕಲ್ಪ ಕ್ಯಾಂಪಸ್‌ಗೆ ತರಬೇತಿಗೆ ತೆರಳಿದ ರೈತರ ತಂಡ

ನನ್ನ ಗಿಡ-ನನ್ನ ಭೂಮಿ ಸಂಸ್ಥೆಯಿಂದ ದಿ.ನಾವಲಗಿ ಸ್ಮರಣೆ & ಪರಿಸರ ದಿನಾಚರಣೆ

ಕಳ್ಳಬಟ್ಟಿ ಸರಾಯಿ ಅಡ್ಡೆಗಳ ಮೇಲೆ ಪೊಲೀಸ್ ದಾಳಿ :ಮೂವರು ವಶಕ್ಕೆ

Add A Comment
Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Helldivers
  • Typora
  • Uncategorized
  • Wemod
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಜೂ.15ರಂದು ವಿಜಯಪುರದಲ್ಲಿ ಅಪ್ರೆಂಟಿಸ್ ಮೇಳ
    In (ರಾಜ್ಯ ) ಜಿಲ್ಲೆ
  • ತಿಪಟೂರಿನ ಅಕ್ಷಯ ಕಲ್ಪ ಕ್ಯಾಂಪಸ್‌ಗೆ ತರಬೇತಿಗೆ ತೆರಳಿದ ರೈತರ ತಂಡ
    In (ರಾಜ್ಯ ) ಜಿಲ್ಲೆ
  • ನನ್ನ ಗಿಡ-ನನ್ನ ಭೂಮಿ ಸಂಸ್ಥೆಯಿಂದ ದಿ.ನಾವಲಗಿ ಸ್ಮರಣೆ & ಪರಿಸರ ದಿನಾಚರಣೆ
    In (ರಾಜ್ಯ ) ಜಿಲ್ಲೆ
  • ಕಳ್ಳಬಟ್ಟಿ ಸರಾಯಿ ಅಡ್ಡೆಗಳ ಮೇಲೆ ಪೊಲೀಸ್ ದಾಳಿ :ಮೂವರು ವಶಕ್ಕೆ
    In (ರಾಜ್ಯ ) ಜಿಲ್ಲೆ
  • ಜೂ.೧೪ ರಂದು ಎಸ್.ಬಿ.ಐ ನಿವೃತ್ತ ಸ್ನೇಹಿತರ ಸಂತೋಷ ಕೂಟ
    In (ರಾಜ್ಯ ) ಜಿಲ್ಲೆ
  • ಎಸ್‌ಐಆರ್ ಗೆ ಕೂಡಲೆ ಏಜೆಂಟ್ ರನ್ನು ನೇಮಿಸಿಕೊಳ್ಳಿ
    In (ರಾಜ್ಯ ) ಜಿಲ್ಲೆ
  • ೫ ಸಾವಿರ ಪ್ರಕರಣಗಳಿಗೆ ಇಲ್ಲಿ ಒಬ್ಬರೇ ನ್ಯಾಯಾಧೀಶರು!
    In (ರಾಜ್ಯ ) ಜಿಲ್ಲೆ
  • ಗಂಗಾಧರ ಮುತ್ತಗಿ ವೆಟರ್‌ನರಿ ಸೈನ್ಸ ವಿಭಾಗದಲ್ಲಿ ರಾಜ್ಯಕ್ಕೆ ಮೊದಲ ರ‍್ಯಾಂಕ್!
    In (ರಾಜ್ಯ ) ಜಿಲ್ಲೆ
  • ಎಸ್‌ಐಆರ್ ಬಗ್ಗೆ ಅನಗತ್ಯ ಭಯ ಬೇಡ :ತಹಶೀಲ್ದಾರ ನಿಂಗಪ್ಪ
    In (ರಾಜ್ಯ ) ಜಿಲ್ಲೆ
  • ಝಮೀರ್ ಅಹ್ಮದ್ ಖಾನ್‌ ಗೆ ಸಚಿವ ಸ್ಥಾನ ನೀಡಲು ಆಗ್ರಹಿಸಿ ಪ್ರತಿಭಟನೆ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.