ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ನಗರದ ಬಸವ ಜನ್ಮಭೂಮಿ ಪ್ರತಿಷ್ಠಾನ ಪತ್ರಿಕಾ ದಿನಾಚರಣೆ ಅಂಗವಾಗಿ ರಾಜಾಜಿನಗರದ ‘ಬಸವಸಂಗಮ ಸಭಾಂಗಣ’ ದಲ್ಲಿ ಜುಲೈ ಮೊದಲ ವಾರದಲ್ಲಿ ಕವಿಗೋಷ್ಠಿˌ ಪತ್ರಿಕಾ ಮಾಧ್ಯಮದ ಮಹತ್ವ ಕುರಿತು ಉಪನ್ಯಾಸ ಹಾಗೂ ಪ್ರತಿಷ್ಠಾನದ ಪ್ರಗತಿಗೆ ಪೂರಕ ಪರಿಕರಗಳನ್ನು ಪೂರೈಸಿದ ದಾನಿಗಳಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಂಡಿದೆ.
ಆಸಕ್ತ ಕವಿಗಳು ಪತ್ರಿಕೆಗಳ ಮಹತ್ವ ಮತ್ತು ಓದುಗ ವಿಷಯ ಕುರಿತು ೨೦ ಸಾಲುಗಳ ಮಿತಿಯುಳ್ಳ ಒಂದು ಕವಿತೆಯನ್ನು ಇದೇ ತಿಂಗಳು ೨೫ ರೊಳಗೆ ಮುರುಗೇಶ ಸಂಗಮˌ ಸಂಚಾಲಕರುˌ ಬಸವ ಜನ್ಮಭೂಮಿ ಪ್ರತಿಷ್ಠಾನˌ ಆರ್.ಟಿ.ಓ.ಕಚೇರಿ ಹಿಂಭಾಗˌ ನಾಡದೇವಿ ಮಂದಿರ ರಸ್ತೆˌ ರಾಜಾಜಿನಗರˌ ವಿಜಯಪುರ ವಿಳಾಸಕ್ಕೆ ಕಳುಹಿಸಬೇಕು. ಮಾಹಿತಿಗೆ ಮೊ. ೮೦೭೩೬೨೫೩೯೯ ಸಂಖ್ಯೆ ಸಂಪರ್ಕಿಸಬೇಕೆಂದು ಪ್ರಕಟಣೆ ತಿಳಿಸಿದೆ
