ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ಇಂದು ಅಂಗನವಾಡಿ ಕೇಂದ್ರಗಳು ಶಾಲಾಪೂರ್ವ ಶಿಕ್ಷಣದ ಸಮಗ್ರ ಅನುಷ್ಠಾನದ ಪ್ರತಿಫಲವಾಗಿ ಮಾದರಿ ಅಂಗನವಾಡಿಗಳಾಗಿವೆ ಎಂದು ಸಿಂದಗಿ ತಾಲ್ಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಎ.ಕೆ. ಹಳ್ಳಿ ಹೇಳಿದರು.
ತಾಲ್ಲೂಕಿನ ಕೋರವಾರ ಗ್ರಾಮದಲ್ಲಿ ಬುಧವಾರ ಅಂಗನವಾಡಿ ಸಂಖ್ಯೆ ೦೭ರಲ್ಲಿ ಮಕ್ಕಳಿಗೆ ಶಾಲಾ ಸಮವಸ್ತ್ರ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ನಮ್ಮ ಕೇಂದ್ರಗಳು ಯಾವುದೇ ಖಾಸಗಿ ಶಾಲೆಗಳಿಗಿಂತ ಕಡಿಮೆ ಇಲ್ಲ. ಇಂದು ಸರ್ಕಾರದ ಹಲವಾರು ಯೋಜನೆಗಳು ಮಕ್ಕಳಿಗಾಗಿ ಇವೆ. ಈ ಕೇಂದ್ರಗಳಿಗೆ ದಾನಿಗಳು ಹಾಗೂ ಗ್ರಾಮ ಪಂಚಾಯಿತಿ ಸಹಕಾರ ತುಂಬಾ ಇದೆ. ಇಲ್ಲಿ ಪಾಲಕರ ಆಸಕ್ತಿಯಂತೆ ಕನ್ನಡ, ಇಂಗ್ಲಿಷ್ ಕಲಿಕೆ ನಡೆಯುತ್ತಿದೆ. ಇದರ ಸದುಪಯೋಗವನ್ನು ಎಲ್ಲಾ ಪಾಲಕರು ಪಡೆದುಕೊಳ್ಳಬೇಕು. ಗ್ರಾಮದ ಎಲ್ಲಾ ಅಂಗನವಾಡಿಗಳು ಉತ್ತಮ ಕಾರ್ಯ ನಿರ್ವಹಣೆಯಲ್ಲಿ ತೊಡಗಿವೆ. ಎಲ್ಲಾ ಅಂಗನವಾಡಿ ಕಾರ್ಯಕರ್ತೆಯರಿಗೆ ಸ್ನೇಹ ಸಂಸ್ಥೆಯಿಂದ ಏಳು ಹಂತದ ಶಾಲಾ ಪೂರ್ವ ಶಿಕ್ಷಣದ ತರಬೇತಿ ನೀಡಲಾಗುತ್ತಿದ್ದು, ಇದರಿಂದ ಎಲ್ಲಾ ಅಂಗನವಾಡಿಗಳು ಮಾದರಿ ಕೇಂದ್ರಗಳಾಗಿವೆ. ಇದೇ ರೀತಿಯ ಸಹಕಾರ ನಮ್ಮ ಅಂಗನವಾಡಿ ಕೇಂದ್ರಗಳಿಗೆ ಇರಲಿ ಎಂದರು.
ಅಂಗನವಾಡಿಯ ಮೇಲ್ವಿಚಾರಕಿ ಎಸ.ಎಚ್.ಕಾಗಲ್ ಮಾತನಾಡಿ, ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳ ಸರ್ವತೋಮುಖ ಬೆಳವಣಿಗೆಯಾಗುತ್ತದೆ ಎಂದು ತಿಳಿಸಿ ಶಾಲಾ ಪೂರ್ವ ಶಿಕ್ಷಣ ಮಹತ್ವ ವಿವರಿಸಿದರು.
ಸ್ನೇಹ ಸಂಸ್ಥೆಯ ಸಂಯೋಜಕ ಸಾಗರ ಘಾಟಗೆ, ಕೇಂದ್ರದ ಶಿಕ್ಷಕಿ ಪ್ರೇಮಾ ಕುಳೆಕುಮಟಗಿ ಮಾತನಾಡಿದರು.
ನಂತರ ದಾನಿ ರಾಮನಗೌಡ ಬೋರಾವತ್ ಎಲ್ಲಾ ಮಕ್ಕಳಿಗೆ ಸಮವಸ್ತ್ರ ವಿತರಿಸಿದರು.
ಅಂಗನವಾಡಿ ಶಿಕ್ಷಕಿಯರಾದ ಎಸ್.ಐ.ಮರತೂರ್, ಜೆ.ಬಿ.ಮಠಪತಿ, ರೇಷ್ಮಾ ಟಕ್ಕಳಕಿ ಸ್ನೇಹ ಸಂಸ್ಥೆಯ ಸಂಪಸ್ಮೂಲ ವ್ಯಕ್ತಿ ಗೌಡಪ್ಪ ಬಿರಾದಾರ, ಗ್ರಾಮ ಪಂಚಾಯಿತಿ ಸದಸ್ಯ ರಾಜಶೇಖರ ಛಾಯಾಗೋಳ, ಅಪ್ಪುಗೌಡ ಪೊಲೀಸ್ ಪಾಟೀಲ್, ಮುಖ್ಯ ಶಿಕ್ಷಕ ಪಿ.ಎಸ್.ಜಾಲವಾದಿ, ಆರೋಗ್ಯ ಇಲಾಖೆಯ ಎಂ.ಎಸ್.ಬಾಗೇವಾಡಿ ಹಾಗೂ ಎಲ್ಲಾ ಅಂಗನವಾಡಿ ಸಹಾಯಕಿಯರು ಪಾಲಕರು ಇದ್ದರು.

