ಉದಯರಶ್ಮಿ ದಿನಪತ್ರಿಕೆ
ತಾಳಿಕೋಟೆ: ತಾಲೂಕಿನ ಫೀರಾಪೂರ ಗ್ರಾಮದ ರೈತ ದೇವಪ್ಪ ರಾಯಪ್ಪ ಹಾಲನ್ನವರ ೩೭ ಸಾಲದ ಬಾಧೆಯಿಂದ ಬುಧುವಾರರಂದು ಮುಂಜಾನೆ ೯ ಗಂಟೆಯ ಸುಮಾರಿಗೆ ಊರ ಮುಂದಿನ ತನ್ನ ಜಮೀನಿನಲ್ಲಿಯ ಗಿಡಕ್ಕೆ ನೇಣು ಬೀಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.
ಜಮೀನಿನ ಸಾಗುವಳಿಗಾಗಿ ಹಾಗೂ ವಯಸ್ಸಾದ ನಮ್ಮ ಅತ್ತೆಯ ಚಿಕಿತ್ಸೆಯ ಸಲುವಾಗಿ ಕೊಡಗಾನೂರ ಎಸ್.ಬಿ.ಐ ಬ್ಯಾಂಕಿನಲ್ಲಿ ೨೬೦೦೦/- ರೂ. ಬೆಳೆಸಾಲ ಹಾಗೂ ಊರಲ್ಲಿ ಕೈಗಡ ಅಂತಾ ೫ ಲಕ್ಷ ರೂ ಸಾಲ ಮಾಡಿಕೊಂಡಿದ್ದು ಕಳೆದ ಎರಡು ಮೂರು ವರ್ಷದಿಂದ ಸರಿಯಾಗಿ ಬೆಳೆ ಬಾರದ ಕಾರಣ ಮಾಡಿದ ಸಾಲವನ್ನ ತಿರಿಸಲಾಗದೆ ಸಾಲಕ್ಕೆ ಮನನೊಂದು ಊರ ಮುಂದಿನ ತಮ್ಮದೇ ಹೊಲದಲ್ಲಿನ ಶಂಕೇಶ್ವರ ಗಿಡಕ್ಕೆ ಲುಂಗಿಯಿಂದಾ ನೇಣುಬೀಗಿದಿಕೊಂಡು ಆತ್ಮಹತ್ಯೆ ಮಾಡಿದ್ದಾನೆಂದು ಮೃತ ದೇವಪ್ಪನ ಪತ್ನಿ ಸುಶಿಲಮ್ಮ ಹಾಲನ್ನವರ ತಾಳಿಕೋಟೆ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ.

