ಉದಯರಶ್ಮಿ ದಿನಪತ್ರಿಕೆ
ತಾಳಿಕೋಟೆ: ಮುದ್ದೇಬಿಹಾಳ ಮತಕ್ಷೇತ್ರದ ಶಾಸಕರಾಗಿರುವ ಸಿ.ಎಸ್.ನಾಡಗೌಡ(ಅಪ್ಪಾಜಿ) ಅವರಿಗೆ ಈ ಭಾರಿ ಸಚೀವ ಸ್ಥಾನ ಹಂಚಿಕೆಯಲ್ಲಿ ಕ್ಯಾಬಿನೇಟ್ ದರ್ಜೆಯ ಸಚೀವ ಸ್ಥಾನಮಾನ ನೀಡಬೇಕೆಂದು ತಾಳಿಕೋಟೆಯ ಮುಸ್ಲಿಂ ಧಾರ್ಮಿಕ ಮುಖಂಡ ಸೈಯದ ಶಕೀಲ್‌ಹ್ಮದ ಖಾಜಿ ಅವರು ಕಾಂಗ್ರೇಸ್ ಹೈಕಮಾಂಡಗೆ ಒತ್ತಾಯಿಸಿದ್ದಾರೆ.
ಶಾಸಕ ಸಿ.ಎಸ್.ನಾಡಗೌಡ (ಅಪ್ಪಾಜಿ) ಅವರು ಕಳೆದ ೫೦ ವರ್ಷಗಳಿಂದ ನಿಷ್ಠಾವಂತ ಸಕ್ರೀಯ ಕಾರ್ಯಕರ್ತರಾಗಿ ಅಲ್ಲದೇ ರಾಜ್ಯದ ಮುತ್ಸದ್ದಿ ರಾಜಕಾರಣಿಗಳಲ್ಲಿಯೇ ಮೊದಲಿಗರಾಗಿ ಗುರುತಿಸಿಕೊಂಡಿದ್ದಾರೆ, ಕಾಂಗ್ರೇಸ್ ಪಕ್ಷದ ತತ್ವಸಿದ್ದಾಂತಗಳಿಗೆ ಬದ್ದರಾಗಿ ಕಾಂಗ್ರೇಸ್ ಪಕ್ಷವನ್ನು ಬೇರುಮಟ್ಟದಿಂದ ಗಟ್ಟಿಗೊಳಿಸಲು ಶ್ರಮಿಸಿದಂತವರಾಗಿದ್ದಾರೆ ಶಾಸಕ ಅಪ್ಪಾಜಿ ನಾಡಗೌಡರು ೬ ಬಾರಿ ಶಾಸಕರಾಗಿ ಆಯ್ಕೆಗೊಂಡಿದ್ದಾರೆ. ಅವರ ಹಿರಿತನದಲ್ಲಿ ಬೆರಳೆಣಿಕೆಯಷ್ಟು ಜನರು ಉಳಿದುಕೊಂಡಿದ್ದರೂ ಕೂಡಾ ಅವರ ಹಿರಿತನವನ್ನು ಕಡೆಗಣಿಸದೇ ಕೇವಲ ಒಂದು ಭಾರಿ ಎರಡು ಭಾರಿ ಶಾಸಕರಾದವರಿಗೆ ಸಚೀವಸ್ಥಾನ ನೀಡುವದರೊಂದಿಗೆ ಮಣಿಹಾಕುವದು ಎಷ್ಟು ಸರಿ ಎಂದು ಪ್ರಶ್ನಿಸಿರುವ ಖಾಜಿ ಅವರು ಶಾಸಕ ಅಪ್ಪಾಜಿ ನಾಡಗೌಡರು ಸಚೀವಸ್ಥಾನ ನಿಭಾಯಿಸಬಲ್ಲ ಎಲ್ಲ ಸಾಮರ್ಥ್ಯವೂ ಇದೆ ಅಲ್ಲದೇ ರಾಜಕೀಯವಾಗಿ ಸಾಕಷ್ಟು ಅನುಭವವನ್ನು ಹೊಂದಿದಂತಹ ನಾಯಕರಾಗಿ ಗುರುತಿಸಿಕೊಂಡಿದ್ದಾರೆ. ಕಾರಣ ಅವರಿಗೆ ಸಚಿವ ಸ್ಥಾನ ನೀಡಿ ಲಕ್ಷಾಂತರ ಜನ ಅಭಿಮಾನಿಗಳ ಆಸೆಯನ್ನು ಈಡೇರಿಸಬೇಕು. ಇಲ್ಲದಿದ್ದರೆ ಕಾಂಗ್ರೇಸ್ ಕಾರ್ಯಕರ್ತರ ಸಾಮೂಹಿಕ ರಾಜೀನಾಮೆ ಪರ್ವ ಮುದ್ದೇಬಿಹಾಳ ಮತಕ್ಷೇತ್ರದಿಂದ ಪ್ರಾರಂಭಗೊಳ್ಳುವದರಲ್ಲಿ ಯಾವುದೇ ಸಂಶಯವಿಲ್ಲವೆಂದು ಕೈ ಹೈಕಮಾಂಡಗೆ ಮುಸ್ಲಿಂ ಧಾರ್ಮಿಕ ಮುಖಂಡ ಸೈಯದಶಕೀಲ್‌ಹ್ಮದ ಖಾಜಿ ಅವರು ಎಚ್ಚರಿಸಿದ್ದಾರೆ.

