ಉದಯರಶ್ಮಿ ದಿನಪತ್ರಿಕೆ
ವರದಿ: ಎಸ್ ಎಮ್ ಇಟ್ಟಿ
ಜಮಖಂಡಿ: ತಾಲೂಕಿನ ಹೂನ್ನೂರ, ಕಡಪಟ್ಟಿ ಹಾಗೂ ಜಮಖಂಡಿ ನಗರದ ಹೊರ ವಲಯದಲ್ಲಿ ಹಾದು ಹೋಗಿರುವ ಜಿ ಎಲ್ ಬಿ ಸಿ ಕೆನಾಲ್ ದಲ್ಲಿನ ಹೂಳು ತೆಗೆದರೂ ಕೂಡಾ ಹಲವು ಕಡೆ ಹೂಳು ಕೆನಾಲ್ ದಂಡೆಯಲ್ಲಿ ಉಳಿಸಿದ್ದು ಇದು ಮತ್ತೆ ಕೆನಾಲ್ ಪಾಲಾಗುವ ಬಗ್ಗೆ ಆತಂಕ ವ್ಯಕ್ತವಾಗಿದೆ.
ಮತ್ತೆ ಹೂಳು ಕಾಲುವೆ ಸೇರಿದರೆ ಇದರಿಂದ ಹಲವು ಕಡೆ ನೀರು ರಸ್ತೆಯ ಮೇಲೆ ಬರುತ್ತದೆ ಇದರಿಂದ ಕಾಲುವೆಯ ಅಕ್ಕ ಪಕ್ಕ ಸಂಚರಿಸುವ ರೈತರಿಗೆ, ಸಾರ್ವಜನಿಕರಿಗೆ ಅನಾನುಕೂಲವಾಗುತ್ತದೆ. ಹಲವು ಕಡೆ ಹೂಳು ಹಾಗೂ ಮುಳ್ಳಿನ ಗಿಡಗಳನ್ನು ಕಡಿದು ಕಾಲುವೆ ಪಕ್ಕದಲ್ಲಿ ಹಾಗೆ ಬಿಡಲಾಗಿದೆ, ಮಳೆಗಾಲದಲ್ಲಿ ಗಾಳಿಯ ರಭಸಕ್ಕೆ ಮುಳ್ಳಿನ ಕಂಠಿಗಳು ರಸ್ತೆಯಲ್ಲಿ ಬಿದ್ದರೆ ವಾಹನ ಸವಾರರ ಗಾಡಿಗಳು ಪಂಚರ್ ಆಗುವ ಭೀತಿ ಆಗುತ್ತದೆ, ಕಾಲುವೆಯ ದಂಡೆಯ ಮೇಲೆ ಬಿಡಲಾದ ಹೂಳಿನಿಂದ ರಸ್ತೆಯು ಕೆಸರುಮಯವಾಗುತ್ತದೆ, ಹಾಗೆಯೇ ಕಾಲುವೆಯ ಪಾಲಾಗುತ್ತದೆ ಎಂದು ಸ್ಥಳೀಯ ನಿವಾಸಿ ಹೇಳುತ್ತಾರೆ. ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಹೂಳನ್ನು ವಿಲೇವಾರಿ ಮಾಡಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
“ಅನೇಕ ಕಡೆ ಕೆನಾಲ್ ದಂಡೆಯ ಮೇಲೆ ಹೂಳನ್ನು ಹಾಗೆ ಬಿಡಲಾಗಿದೆ. ಇದರಿಂದ ಸಾರ್ವಜನಿಕರು ಕೆನಾಲ್ ರಸ್ತೆಯ ಮೂಲಕ ಸಂಚರಿಸುವುದು ಕಷ್ಟವಾಗಿದೆ. ತಕ್ಷಣವೇ ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಹೂಳನ್ನು ವಿಲೇವಾರಿ ಮಾಡಲು ಕ್ರಮ ಕೈಗೊಳ್ಳಬೇಕು.”
– ಸಿದ್ಧಲಿಂಗ ಹಿರೇಮಠ
ದ್ವೀಚಕ್ರ ವಾಹನ ಸವಾರ.
“ಹಲವು ಕಡೆ ಕೆನಾಲನ ಅಕ್ಕ ಪಕ್ಕದಲ್ಲಿರುವ ಗಿಡ ಗಂಟೆಗಳನ್ನು ಹಾಗೆ ಬಿಡಲಾಗಿದೆ ಅವುಗಳನ್ನು ಕೂಡಾ ತೆರವುಗೊಳಿಸಬೇಕು.”
– ಹೆಸರು ಹೇಳಲಿಚ್ಛಿಸದ ಸ್ಥಳಿಯ ನಿವಾಸಿ.

