Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಬಾರದ ಮಳೆಗೆ ಕತ್ತೆಗಳ ಮದುವೆ – ಮೆರವಣಿಗೆ

ಸೆ.೨೮ರಿಂದ ೩೦ವರೆಗೆ ಬ್ಯಾಂಕ್ ನೌಕರರ ಮುಷ್ಕರ

ಸಿವಿಲ್ ಪೊಲೀಸ್ ಕಾನ್‌ಸ್ಟೇಬಲ್ ನೇಮಕಾತಿ: ಸೆ.೨೮ ರಿಂದ ದೈಹಿಕ ಪರೀಕ್ಷೆಗಳು ಆರಂಭ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ಜೂ.೧೦ ರಂದು ಮೋದಿಯವರಿಗಾಗಿ ಪೂಜೆ ಸಲ್ಲಿಸಿ :ಬೆಳ್ಳುಬ್ಬಿ ಕರೆ
(ರಾಜ್ಯ ) ಜಿಲ್ಲೆ

ಜೂ.೧೦ ರಂದು ಮೋದಿಯವರಿಗಾಗಿ ಪೂಜೆ ಸಲ್ಲಿಸಿ :ಬೆಳ್ಳುಬ್ಬಿ ಕರೆ

By No Comments1 Min Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಉದಯರಶ್ಮಿ ದಿನಪತ್ರಿಕೆ

ಕೊಲ್ಹಾರ: ಬಸವನ ಬಾಗೇವಾಡಿ ಮತಕ್ಷೇತ್ರದ ಭಾರತೀಯ ಜನತಾ ಪಕ್ಷದ ಕಾರ್ಯಕರ್ತರು ಹಾಗೂ ದೇಶಾಭಿಮಾನಿ ನಾಗರಿಕರು ಬುಧವಾರ, ಜೂನ್ ೧೦, ೨೦೨೬ ರಂದು ತಮ್ಮ ತಮ್ಮ ಊರುಗಳ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಸಲ್ಲಿಸಲು ಮಾಜಿ ಸಚಿವ ಎಸ್.ಕೆ. ಬೆಳ್ಳುಬ್ಬಿ ಕರೆ ನೀಡಿದರು.
ಪಟ್ಟಣದ ಸ್ವಗೃಹದಲ್ಲಿ ಬುಧವಾರ ಸಾಯಂಕಾಲ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದ ಪ್ರಧಾನಿಯಾಗಿ ನರೇಂದ್ರ ಮೋದಿಯವರು ೧೨ ವರ್ಷಗಳ ೪೩೯೯ ದಿನಗಳ ಸೇವೆಯನ್ನು ಪೂರೈಸಿ ಹೊಸ ಇತಿಹಾಸ ನಿರ್ಮಿಸಿರುವ ಹಿನ್ನೆಲೆಯಲ್ಲಿ ಈ ಪೂಜೆ ಆಯೋಜಿಸಲು ಮನವಿ ಮಾಡಿದರು.
ಹಿಂದೆ ಮೂರು ಬಾರಿ ಪ್ರಧಾನಿಯಾಗಿದ್ದ ಜವಾಹರಲಾಲ್ ನೆಹರು ಅವರ ೪೩೯೨ ದಿನಗಳ ದಾಖಲೆ ಮುರಿದು ಮುಂದುವರಿಯುತ್ತಿರುವ ಹಿನ್ನೆಲೆಯಲ್ಲಿ, ರಾಜ್ಯದ ಪ್ರತಿಯೊಂದು ಹಳ್ಳಿ, ಪಟ್ಟಣ ಮತ್ತು ನಗರಗಳಲ್ಲಿ ಇರುವ ಪ್ರಮುಖ ದೇವಸ್ಥಾನಗಳಲ್ಲಿ ದೇಶಾಭಿಮಾನಿಗಳು ವಿಶೇಷ ಪೂಜೆ ಸಲ್ಲಿಸಬೇಕು ಎಂದು ಅವರು ವಿನಂತಿಸಿದರು.
ನೆಹರು ಅವರ ಕಾಲಘಟ್ಟ ಹಾಗೂ ಇಂದಿನ ಕಾಲಘಟ್ಟದಲ್ಲಿ ದೊಡ್ಡ ವ್ಯತ್ಯಾಸವಿದೆ. ಆ ಕಾಲದಲ್ಲಿ ಮಾಧ್ಯಮ ಹಾಗೂ ಪ್ರಚಾರದ ಪ್ರಭಾವ ಕಡಿಮೆ ಇದ್ದರೆ, ಇಂದಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳು ಬಹಳ ಪ್ರಬಲವಾಗಿವೆ. ಇಂತಹ ಪರಿಸ್ಥಿತಿಯಲ್ಲಿ ಆಡಳಿತ ನಡೆಸುವುದು ಸವಾಲಿನ ಸಂಗತಿ ಎಂದು ಹೇಳಿದರು.
ಪ್ರಧಾನಿ ನರೇಂದ್ರ ಮೋದಿಯವರು ಕಠಿಣ ಪರಿಸ್ಥಿತಿಗಳಲ್ಲಿಯೂ ದೇಶದ ಅಭಿವೃದ್ಧಿಗಾಗಿ ಹಾಗೂ ಜನಹಿತಕ್ಕಾಗಿ ಹಗಲಿರುಳು ಶ್ರಮಿಸುತ್ತಿದ್ದಾರೆ. ಅವರ ಆಡಳಿತ ಇನ್ನಷ್ಟು ಯಶಸ್ವಿಯಾಗಲು ಮತ್ತು ದೇಶದ ರಕ್ಷಣೆಗೆ ದಕ್ಷತೆಯೊಂದಿಗೆ ಮುಂದುವರಿಯಲು ದೇವರ ಅನುಗ್ರಹಕ್ಕಾಗಿ ಎಲ್ಲರೂ ಪ್ರಾರ್ಥಿಸೋಣ ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಪಕ್ಷದ ಕಾರ್ಯಕರ್ತರಾದ ರಾಜಶೇಖರ ಶೀಲವಂತ, ಈರಯ್ಯ ಮಠಪತಿ, ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷ ಕಲ್ಲಪ್ಪ ಸಿ. ಸೊನ್ನದ, ಸದಸ್ಯರಾದ ಬಾಬು ಭಜಂತ್ರಿ, ಬಸಪ್ಪ ಗಾಜಿ, ಯಮನಪ್ಪ ಮಂಟೂರ, ಮಳೆಪ್ಪ ಬರಗಿ, ವಿಜಯಕುಮಾರ ಕೊಟ್ಟಗಿ, ಸುಭಾಷ್ ಭಜಂತ್ರಿ, ಶಿವಾನಂದ ದೊಡಮನಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

BIJAPUR NEWS public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಬಾರದ ಮಳೆಗೆ ಕತ್ತೆಗಳ ಮದುವೆ – ಮೆರವಣಿಗೆ

ಸೆ.೨೮ರಿಂದ ೩೦ವರೆಗೆ ಬ್ಯಾಂಕ್ ನೌಕರರ ಮುಷ್ಕರ

ಸಿವಿಲ್ ಪೊಲೀಸ್ ಕಾನ್‌ಸ್ಟೇಬಲ್ ನೇಮಕಾತಿ: ಸೆ.೨೮ ರಿಂದ ದೈಹಿಕ ಪರೀಕ್ಷೆಗಳು ಆರಂಭ

ಮಹಿಳಾ ಅಭಿವೃದ್ಧಿ ನಿಗಮದವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನ

Add A Comment
Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Helldivers
  • Typora
  • Uncategorized
  • Wemod
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಬಾರದ ಮಳೆಗೆ ಕತ್ತೆಗಳ ಮದುವೆ – ಮೆರವಣಿಗೆ
    In (ರಾಜ್ಯ ) ಜಿಲ್ಲೆ
  • ಸೆ.೨೮ರಿಂದ ೩೦ವರೆಗೆ ಬ್ಯಾಂಕ್ ನೌಕರರ ಮುಷ್ಕರ
    In (ರಾಜ್ಯ ) ಜಿಲ್ಲೆ
  • ಸಿವಿಲ್ ಪೊಲೀಸ್ ಕಾನ್‌ಸ್ಟೇಬಲ್ ನೇಮಕಾತಿ: ಸೆ.೨೮ ರಿಂದ ದೈಹಿಕ ಪರೀಕ್ಷೆಗಳು ಆರಂಭ
    In (ರಾಜ್ಯ ) ಜಿಲ್ಲೆ
  • ಮಹಿಳಾ ಅಭಿವೃದ್ಧಿ ನಿಗಮದವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನ
    In (ರಾಜ್ಯ ) ಜಿಲ್ಲೆ
  • ಇಂಡಿ: ಕೆಲವೆಡೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ
    In (ರಾಜ್ಯ ) ಜಿಲ್ಲೆ
  • ಮಾಸಿಕ ಗೌರವಧನ: ಅರ್ಜಿ ಆಹ್ವಾನ
    In (ರಾಜ್ಯ ) ಜಿಲ್ಲೆ
  • ದೇವರಹಿಪ್ಪರಗಿಯಲ್ಲಿ ಕಾನೂನು ಅರಿವು ಮತ್ತು ನೆರವು
    In (ರಾಜ್ಯ ) ಜಿಲ್ಲೆ
  • ಕನಿಷ್ಠ ವೇತನ ಜಾರಿಗೆ ಆಗ್ರಹಿಸಿ ಪತ್ರ ಚಳುವಳಿ
    In (ರಾಜ್ಯ ) ಜಿಲ್ಲೆ
  • ರೆಡ್ಡಿ ಸಮಾಜದ ಅಭಿನಂದನಾ ಸಮಾವೇಶ ಯಶಸ್ವಿಗೊಳಿಸಿ
    In (ರಾಜ್ಯ ) ಜಿಲ್ಲೆ
  • ಸಾರ್ವಜನಿಕ ಆಸ್ಪತ್ರೆಯಲ್ಲಿ ಬಾಣಂತಿ ಸಾವಿಗೆ ತೀವ್ರ ಆಕ್ರೋಶ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.