ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ಜಾಲವಾದ ಗ್ರಾಮದ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಶಾಖೆಯಲ್ಲಿ ಸಿಬ್ಬಂದಿಗಳ ಕೊರತೆಯಿಂದ ಗ್ರಾಹಕರು ಸಾಲಿನಲ್ಲಿ ನಿಂತು ಕಾಯುವಂತಾಗಿದ್ದು ಕೂಡಲೇ ಹೆಚ್ಚಿನ ಸಿಬ್ಬಂದಿ ನೇಮಿಸಿ ವಿಳಂಬತೆ ತಪ್ಪಿಸುವಂತೆ ಗ್ರಾಮದ ಗ್ರಾಹಕರು ಆಗ್ರಹಿಸಿದ್ದಾರೆ.
ತಾಲ್ಲೂಕಿನ ಜಾಲವಾದ ಗ್ರಾಮದ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಸ್ಥಳೀಯ ರೈತ ಸಮುದಾಯಕ್ಕೆ ಆಧಾರವಾಗಿದೆ. ಆದರೆ ಈಗ ಸಿಬ್ಬಂದಿಗಳ ಕೊರತೆಯ ಕಾರಣವಾಗಿ ಗ್ರಾಹಕರು ಗಂಟೆಯವರೆಗೆ ಸಾಲಿನಲ್ಲಿ ನಿಲ್ಲುವಂತಾಗಿದೆ. ಅದರಲ್ಲೂ ರೈತರು ಬಿತ್ತನೆ ಬೀಜ, ಗೊಬ್ಬರಕ್ಕಾಗಿ ಹಣ ಪಡೆಯಲು ನಿತ್ಯ ಕಾಯುವುದು ಅನಿವಾರ್ಯವಾಗಿದೆ.
ಇಲ್ಲಿ ಎರಡು ಗಂಟೆಗಳ ಕಾಲ ನಿಂತು ಹಣ ಪಡೆದು ನಂತರ ಬೀಜ, ಗೊಬ್ಬರಗಳಿಗಾಗಿ ಮತ್ತೇ ಸರದಿಯಲ್ಲಿ ನಿಲ್ಲುವಂತಾಗಿದೆ. ಈ ಬಗ್ಗೆ ಬ್ಯಾಂಕಿನ ಹಿರಿಯ ಅಧಿಕಾರಿಗಳ ಗಮನ ಸೆಳೆದು ವಿನಂತಿ ಮಾಡಿದರೂ ಪ್ರಯೋಜನವಾಗಿಲ್ಲ. ಆದ್ದರಿಂದ ಕೂಡಲೇ ಹೆಚ್ಚುವರಿ ಸಿಬ್ಬಂದಿ ನೇಮಿಸಿ ಗ್ರಾಹಕರ ತೊಂದರೆ ತಪ್ಪಿಸಲಿ ಎಂದು ಕರ್ನಾಟಕ ರಾಜ್ಯ ರೈತಸಂಘ ಹಾಗೂ ಹಸಿರುಸೇನೆಯ ಭೀಮರಾಯ ಮನಗೂಳಿ, ಸಲೀಮ್ ಮುಲ್ಲಾ, ಧರೇಶ ಪಾಟೀಲ, ಚಂದ್ರಾಮ ಗಾಂಜಿ, ರಾಜು ಕಲಕೇರಿ, ಡಿ.ಎ. ಇನಾಮದಾರ ಆಗ್ರಹಿಸಿದ್ದಾರೆ.

