Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

“ಅತ್ಯುತ್ತಮ ಶಿಕ್ಷಕ ಪ್ರಶಸ್ತಿ”ಗೆ ಪ್ರಶಾಂತ್ ಕುಲಕರ್ಣಿ ಆಯ್ಕೆ

ಯೋಗ ಆರೋಗ್ಯಕರ ಜೀವನಕ್ಕೆ ಬುನಾದಿ :ಪಂಚಾಕ್ಷರಿ

ತಿಕೋಟಾ: ಏಳು ದಿನಗಳ ಉಚಿತ ಯೋಗ ಶಿಬಿರ ಯಶಸ್ವಿ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»ವಿಶೇಷ ಲೇಖನ»ರೋಗ ಮತ್ತು ಭಯ
ವಿಶೇಷ ಲೇಖನ

ರೋಗ ಮತ್ತು ಭಯ

By No Comments2 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಲೇಖನ
– ಸಂತೋಷ್ ರಾವ್ ಪೆರ್ಮುಡ
ಪೆರ್ಮುಡ ಮನೆ, ಪಟ್ರಮೆ ಗ್ರಾಮ ಮತ್ತು ಅಂಚೆ
ಬೆಳ್ತಂಗಡಿ ತಾಲೂಕು
ದ.ಕ ಜಿಲ್ಲೆ-೫೭೪೧೯೮
ದೂ:೯೭೪೨೮೮೪೧೬೦

ಉದಯರಶ್ಮಿ ದಿನಪತ್ರಿಕೆ

ಒಂದು ತಂಪಾದ ಸಂಜೆಯ ವೇಳೆಯಲ್ಲಿ ಭಗವಂತ ಮತ್ತು ರೋಗ ಈ ಇಬ್ಬರೂ ಪರಸ್ಪರ ಉಭಯ ಕುಶಲೋಪರಿಗಳನ್ನು ವಿಚಾರಿಸಿಕೊಳ್ಳುತ್ತಿದ್ದರು. ಜನರು ಭಗವಂತನನ್ನು ಪ್ರಾರ್ಥಿಸಿದರೆ, ರೋಗವನ್ನು ಜನರು ತಮ್ಮಿಂದ ಬಹಳ ದೂರವಿಡುತ್ತಿದ್ದರು. ಹೀಗೆ ಇಬ್ಬರೂ ಮಾತನಾಡುತ್ತಿರುವಾಗ ಪರಸ್ಪರ ತಮ್ಮ ಕೆಲಸಗಳ ಕುರಿತು ಚರ್ಚಿಸುತ್ತಾ ಭಗವಂತ ಹೇಳುತ್ತಾನೆ, ನಾನು ಈ ಪ್ರಪಂಚದ ಎಲ್ಲಾ ಜೀವರಾಶಿಗಳನ್ನು ಕಾಪಾಡುತ್ತೇನೆ ಎಂದು. ಆಗ ರೋಗವು, ನಾನು ಭೀಕರ ರೋಗವನ್ನು ಪ್ರಪಂಚದ ಎಲ್ಲಾ ಕಡೆಗೂ ಮತ್ತು ಎಲ್ಲರಿಗೂ ಹರಡುತ್ತೇನೆ ಎಂದು ಹೇಳಿತು. ಹೀಗೆ ಮಾತನಾಡುತ್ತಾ ರೋಗವು ನಾನು ಒಂದು ತಿಂಗಳಲ್ಲಿ ಸುಮಾರು ಐನೂರು ಜನಕ್ಕೆ ರೋಗವನ್ನು ಹರಡಿ ಅವರನ್ನು ಸಾಯಿಸುತ್ತೇನೆ ಎಂದು ಭಗವಂತನಿಗೆ ಹೇಳಿತು. ಅಲ್ಲಿಗೆ ರೋಗ ಮತ್ತು ಭಗವಂತರ ಮಾತುಕತೆಗಳು ಮುಗಿದು, ಇಬ್ಬರೂ ತಮ್ಮ ತಮ್ಮ ಕೆಲಸದ ನಿಮಿತ್ತ ಅಲ್ಲಿಂದ ಹೊರಡುತ್ತಾರೆ.


ಸುಮಾರು ಒಂದೆರಡು ತಿಂಗಳು ಕಳೆದ ನಂತರ ಮತ್ತೆ ಭಗವಂತ ಮತ್ತು ರೋಗ ಇಬ್ಬರೂ ಅದೇ ಸ್ಥಳದಲ್ಲಿ ಪರಸ್ಪರ ಭೇಟಿಯಾಗುತ್ತಾರೆ. ಆಗ ಭಗವಂತನು, ಕಳೆದ ಬಾರಿ ನಾವಿಬ್ಬರು ಚರ್ಚಿಸಿದಾಗ ನೀನು ಒಂದು ತಿಂಗಳಲ್ಲಿ ಒಟ್ಟು ಐನೂರು ಮಂದಿಗೆ ರೋಗವನ್ನು ಹರಡಿ ಸಾಯಿಸುತ್ತೇನೆ ಎಂದು ತಿಳಿಸಿದ್ದೆ. ಆದರೆ ಈಗ ಸುಮಾರು ಐದು ಸಾವಿರಕ್ಕೂ ಹೆಚ್ಚು ಜನರು ಸತ್ತಿದ್ದಾರೆ. ಏಕೆ ನೀನು ನಿನ್ನ ಮಾತನ್ನು ತಪ್ಪಿದೆ? ಎಂದು ರೋಗದಲ್ಲಿ ಕೇಳುತ್ತಾನೆ. ಆಗ ರೋಗವು ನಗುತ್ತಾ, ನಾನು ನಿನಗೆ ಕೊಟ್ಟ ಮಾತನ್ನು ಎಲ್ಲೂ ತಪ್ಪಿಲ್ಲ, ನಾನು ನಿನಗೆ ತಿಳಿಸಿದ್ದಂತೆ ಒಟ್ಟು ಐನೂರು ಮಂದಿಗಷ್ಟೇ ರೋಗವನ್ನು ಹರಡಿದ್ದೇನೆ. ಆದರೆ ಉಳಿದ ನಾಲ್ಕೂವರೆ ಸಾವಿರ ಮಂದಿ ರೋಗದ ಭಯದಿಂದಲೇ ತಮ್ಮ ಪ್ರಾಣವನ್ನು ಬಿಟ್ಟಿದ್ದಾರೆ, ಅದಕ್ಕೆ ನಾನೇನು ಮಾಡಲಿ ಎಂದು ಭಗವಂತನಿಗೆ ಹೇಳಿತು.
ಸಮಾಜದಲ್ಲಿ ಯಾವುದೇ ಒಂದು ಸಮಸ್ಯೆಯಿಂದ ಕಡಿಮೆ ಮಂದಿ ಹಾನಿಗೆ ಒಳಗಾದರೆ ಭಯದಿಂದ ಹಾನಿಗೆ ಒಳಗಾಗುವವರ ಸಂಖ್ಯೆಯು ಅದರ ದುಪಟ್ಟಿರುತ್ತದೆ. ಯಾರು ಸಮಸ್ಯೆಯ ವಿರುದ್ದ ಸೆಟೆದು ನಿಂತು ಹೋರಾಡುತ್ತಾರೋ ಅವರಿಗೆ ಬದುಕಿನ ಹಾದಿಯು ಗೋಚರಿಸುತ್ತದೆ. ಸಮಸ್ಯೆಗೆ ಭಯಪಟ್ಟು ಕುಳಿತವ ಎಲ್ಲರಿಗಿಂತ ಮೊದಲೇ ಸಮಸ್ಯೆಯ ಸುಳಿಗೆ ಸಿಲುಕಿ ನರಳಾಡಿ ಬದುಕನ್ನು ಅಂತ್ಯ ಮಾಡಿಕೊಳ್ಳುತ್ತಾನೆ. ‘ಧೈರ್ಯಂ ಸರ್ವತ್ರ ಸಾಧನಂ’. ಎಂಬ ಗಾದೆ ಮಾತಿನಂತೆ ಧೈರ್ಯವಿರುವಾತ ಎಂತಹ ಸಮಸ್ಯೆಯನ್ನೂ ಧೈರ್ಯ ಕೆಡದೇ ಎದುರಿಸಿ ಗೆದ್ದು, ಭಯಕ್ಕೇ ಸವಾಲಾಗಿ ಬೆಳೆಯುತ್ತಾನೆ.

BIJAPUR NEWS public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

“ಅತ್ಯುತ್ತಮ ಶಿಕ್ಷಕ ಪ್ರಶಸ್ತಿ”ಗೆ ಪ್ರಶಾಂತ್ ಕುಲಕರ್ಣಿ ಆಯ್ಕೆ

ಯೋಗ ಆರೋಗ್ಯಕರ ಜೀವನಕ್ಕೆ ಬುನಾದಿ :ಪಂಚಾಕ್ಷರಿ

ತಿಕೋಟಾ: ಏಳು ದಿನಗಳ ಉಚಿತ ಯೋಗ ಶಿಬಿರ ಯಶಸ್ವಿ

ಯೋಗದಿಂದ ರೋಗ ದೂರ :ಪ್ರೊ.ಖೊದ್ನಾಪೂರ

Add A Comment
Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Helldivers
  • Typora
  • Uncategorized
  • Wemod
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • “ಅತ್ಯುತ್ತಮ ಶಿಕ್ಷಕ ಪ್ರಶಸ್ತಿ”ಗೆ ಪ್ರಶಾಂತ್ ಕುಲಕರ್ಣಿ ಆಯ್ಕೆ
    In (ರಾಜ್ಯ ) ಜಿಲ್ಲೆ
  • ಯೋಗ ಆರೋಗ್ಯಕರ ಜೀವನಕ್ಕೆ ಬುನಾದಿ :ಪಂಚಾಕ್ಷರಿ
    In (ರಾಜ್ಯ ) ಜಿಲ್ಲೆ
  • ತಿಕೋಟಾ: ಏಳು ದಿನಗಳ ಉಚಿತ ಯೋಗ ಶಿಬಿರ ಯಶಸ್ವಿ
    In (ರಾಜ್ಯ ) ಜಿಲ್ಲೆ
  • ಯೋಗದಿಂದ ರೋಗ ದೂರ :ಪ್ರೊ.ಖೊದ್ನಾಪೂರ
    In (ರಾಜ್ಯ ) ಜಿಲ್ಲೆ
  • ಗೋಳಗುಮ್ಮಟದ ಆವರಣದಲ್ಲಿ ವಿಶ್ವ ಯೋಗ ದಿನಾಚರಣೆ
    In (ರಾಜ್ಯ ) ಜಿಲ್ಲೆ
  • ಬೆಳೆ ವಿಮೆಗೆ ಅರ್ಜಿ ಸಲ್ಲಿಸಿ: ಕೃಷಿ ಅಧಿಕಾರಿ ಸಾಣಿ
    In (ರಾಜ್ಯ ) ಜಿಲ್ಲೆ
  • ಸಿಂದಗಿ ತಾಲೂಕಿನಲ್ಲಿ ವಿವಿಧೆಡೆ ವಿಶ್ವ ಯೋಗ ದಿನ ಆಚರಣೆ
    In (ರಾಜ್ಯ ) ಜಿಲ್ಲೆ
  • ಯೋಗ ಮಾಡಿಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಕೈಜೋಡಿಸಿ
    In (ರಾಜ್ಯ ) ಜಿಲ್ಲೆ
  • ಪ್ರತಿದಿನ ಯೋಗ ಮಾಡಿದರೆ ರೋಗ ದೂರ :ನಾರಾಯಣ ಶಾಸ್ತ್ರಿ
    In (ರಾಜ್ಯ ) ಜಿಲ್ಲೆ
  • ಜೀವಪರ ನಿಲುವಿನ ಸಹೃದಯಿ ಶಿಕ್ಷಕ ಕೃಷ್ಣಾ ಪೂಜಾರ :ಇಂದುಶೇಖರ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.