Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಉದಯರಶ್ಮಿ ಇಂದಿನ ದಿನಪತ್ರಿಕೆ ಜೂನ್ 14, 2026

ಕೋವಿಡ್ ಸಂದರ್ಭ ಸೇವೆಗೈದ ಆಯುಷ್ಯ ವೈದ್ಯರ ನೇಮಕವಾಗಲಿ

ವಸತಿಯುಕ್ತ ಸರಕಾರಿ ಪ್ರಥಮ ದರ್ಜೆ ಕಾಲೇಜಿಗೆ ೨(ಈ) ಮಾನ್ಯತೆ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ಅನುಷಾ ಹೊಸುರ್ ಅಗ್ರಿಯಲ್ಲಿ ರಾಜ್ಯಕ್ಕೆ ೩ನೇ & ವೆಟರ್‌ನರಿಯಲ್ಲಿ ೪ನೇ ರ‍್ಯಾಂಕ್
(ರಾಜ್ಯ ) ಜಿಲ್ಲೆ

ಅನುಷಾ ಹೊಸುರ್ ಅಗ್ರಿಯಲ್ಲಿ ರಾಜ್ಯಕ್ಕೆ ೩ನೇ & ವೆಟರ್‌ನರಿಯಲ್ಲಿ ೪ನೇ ರ‍್ಯಾಂಕ್

By No Comments2 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಕೆ-ಸಿಇಟಿ ಪರೀಕ್ಷೆಯಲ್ಲಿ ಎಕ್ಸಲಂಟ್ ವಿಜ್ಞಾನ ಪಪೂ ಕಾಲೇಜು ವಿದ್ಯಾರ್ಥಿಗಳ ಅಮೋಘ ಸಾಧನೆ

ಉದಯರಶ್ಮಿ ದಿನಪತ್ರಿಕೆ

ವಿಜಯಪುರ: ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವತಿಯಿಂದ ೨೦೨೫-೨೬ ನೇ ಸಾಲಿಗೆ ನಡೆಸಿದ ಕರ್ನಾಟಕ ಸಾಮಾನ್ಯ ಅರ್ಹತಾ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದ್ದು ಈ ಬಾರಿ ವಿಜಯಪುರ ನಗರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆ ಎಕ್ಸಲಂಟ್ ವಿಜ್ಞಾನ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಅತ್ಯುತ್ತಮ ರ‍್ಯಾಂಕ್‌ಗಳನ್ನು ಪಡೆದುಕೊಳ್ಳುವ ಮೂಲಕ ಐತಿಹಾಸಿಕ ಸಾಧನೆಗೆ ಸಾಕ್ಷಿಯಾಗಿದ್ದಾರೆ.
ವಿದ್ಯಾರ್ಥಿನಿ ಅನುಷಾ ಹೊಸುರ ಕೆ-ಸಿಇಟಿ ಅಗ್ರಿಯಲ್ಲಿ ರಾಜ್ಯಕ್ಕೆ ೩ನೇ ಸ್ಥಾನ ಹಾಗೂ ವೆಟರನರಿ ಸೈನ್ಸ್ ನಲ್ಲಿ ರಾಜ್ಯಕ್ಕೆ ೪ನೇ ಸ್ಥಾನ ಪಡೆದುಕೊಂಡರೆ, ನಿಖಿಲ್ ಕಿತ್ತೂರ ಅಗ್ರಿಯಲ್ಲಿ ರಾಜ್ಯಕ್ಕೆ ೧೩ನೇ ಸ್ಥಾನ ಹಾಗೂ ವೆಟರನರಿ ಸೈನ್ಸ್ಲ್ಲಿ ೨೦ನೇ ಸ್ಥಾನವನ್ನು ಪಡೆದುಕೊಳ್ಳುವ ಮೂಲಕ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.
ಇವರ ಸಾಧನೆಯ ಕುರಿತು ಪ್ರತಿಕ್ರಿಯಿಸಿದ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ಬಸವರಾಜ ಕೌಲಗಿ; ಕಳೆದ ಬಾರಿಯು ಸಹ ವಿದ್ಯಾರ್ಥಿಗಳು ಕೆ-ಸಿಇಟಿ ಅಗ್ರಿ ಹಾಗೂ ವೆಟರ್‌ನರಿಯಲ್ಲಿ ರ‍್ಯಾಂಕ್ ಪಡೆದುಕೊಳ್ಳುವ ಮೂಲಕ ಕಾಲೇಜಿನ ಹೆಸರನ್ನು ಇನ್ನಷ್ಟು ಹೆಚ್ಚು ಮಾಡಿದ್ದರು. ಇಂದು ಈ ವಿದ್ಯಾರ್ಥಿಗಳು ಆ ರ‍್ಯಾಂಕ್ ಪರಂಪರೆಯನ್ನು ಮುಂದುವರಿಸಿದ್ದಾರೆ. ಯಾರು ಪರಿಶ್ರಮ ಪಟ್ಟು ಅಧ್ಯಯನ ಮಾಡುತ್ತಾರೋ ಅವರು ಖಂಡಿತ ಯಶಸ್ಸು ಪಡೆಯುತ್ತಾರೆ ಎನ್ನುವುದಕ್ಕೆ ಈ ವಿದ್ಯಾರ್ಥಿಗಳೇ ಸಾಕ್ಷಿಯಾಗಿದ್ದಾರೆ. ರೈತರ ಮಕ್ಕಳಾಗಿದ್ದುಕೊಂಡು ಅಗ್ರಿಯಲ್ಲಿ ರ‍್ಯಾಂಕ್ ಪಡೆದು ಹೆತ್ತವರ ಕನಸನ್ನು ನನಸು ಮಾಡಿದ ಇವರಿಗೆ ಹೃದಯಪೂರ್ವಕ ಶುಭಾಷಯಗಳನ್ನು ಸಲ್ಲಿಸುತ್ತೇನೆ. ಇಂದು ಈ ವಿದ್ಯಾರ್ಥಿಗಳು ಮಾಡಿದ ಸಾಧನೆ ಪ್ರಸ್ತುತ ಕಲಿಯುವ ಎಲ್ಲ ವಿದ್ಯಾರ್ಥಿಗಳಿಗೂ ಸಹ ಮಾರ್ಗಸೂಚಿಯಾಗಿದ್ದು ವಿದ್ಯಾರ್ಥಿಗಳು ಅವರ ದಾರಿಯನ್ನು ಅನುಸರಿಸಬೇಕು ಎಂದು ಹೇಳಿದರು.
ಅದರ ಜೊತೆಗೆ ಇಂಜಿನೀಯರಿಂಗ್‌ನಲ್ಲಿಯೂ ರ‍್ಯಾಂಕ್‌ಗಳನ್ನು ಪಡೆದುಕೊಂಡ ವಿದ್ಯಾರ್ಥಿಗಳಿಗೂ ಹಾಗೂ ಈ ಐತಿಹಾಸಿಕ ಸಾಧನೆಯ ಹಿಂದೆ ಶ್ರಮವಹಿಸಿದ ಎಲ್ಲ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳಿಗೂ ಅಭಿನಂದನೆ ಸಲ್ಲಿಸಿದರು.
ಪ್ರತಿ ವರ್ಷದಂತೆ ಈ ಬಾರಿಯೂ ವಿದ್ಯಾರ್ಥಿಗಳು ಅತ್ಯುತ್ತಮವಾದ ಸ್ಥಾನಗಳನ್ನು ಪಡೆದುಕೊಳ್ಳುವ ಮೂಲಕ ಕಾಲೇಜಿಗೆ ಕೀರ್ತಿ ತಂದಿರುತ್ತಾರೆ. ಅದರಲ್ಲಿ ಸಲ್ಮಾನ್ ಗೋಡಿಹಾಳ (ಇಂಜಿನಿಯರಿಂಗ್, ಬಿ.ಎಸ್.ಸಿ ಅಗ್ರಿ-೨೩೨, ವೆಟರ್ನರಿ-೨೯೧), ಪ್ರತೀಕ ಪಿ ಚವ್ಹಾಣ (ಇಂಜಿನಿಯರಿಂಗ್, ಬಿ.ಎಸ್.ಸಿ ಅಗ್ರಿ-೨೬೪, ವೆಟರ್ನರಿ-೧೫೪೧), ಚೇತನ್ ಮಠದ(ಬಿ.ಎಸ್.ಸಿ ಅಗ್ರಿ-೫೪, ವೆಟರ್ನರಿ-೧೪೧), ಸಂಕೇತ ಜಿ ಬಿರಾದಾರ(ಇಂಜಿನಿಯರಿಂಗ್), ಅನುಷ್ಕಾ ಮಹಿಶಾಳೆ (ಇಂಜಿನಿಯರಿಂಗ್, ಬಿ.ಎಸ್.ಸಿ ಅಗ್ರಿ-೫೫೨, ವೆಟರ್ನರಿ-೨೦೯), ರುಮೇಜಾ ಶೇಖ್(ಇಂಜಿನಿಯರಿಂಗ್, ಬಿ.ಎಸ್.ಸಿ ಅಗ್ರಿ-೫೬೦, ವೆಟರ್ನರಿ-೭೮೭), ಮಂಜುನಾಥ ಹೊನವಾಡ (ಇಂಜಿನಿಯರಿಂಗ್-೩೫೧೯), ಆಕಾಶ ಗೊರನಾಳ(ಇಂಜಿನಿಯರಿಂಗ್-೩೫೮೮), ಶೈಲೇಶ ಕುಲಕರ್ಣಿ(ಇಂಜಿನಿಯರಿಂಗ್-೩೬೮೦), ರಜತ ಎನ್ (ಇಂಜಿನಿಯರಿಂಗ್-೩೬೮೫), ರವಿ ಹಳ್ಳೂರ(ಇಂಜಿನಿಯರಿಂಗ್-೪೧೦೭, ಬಿ.ಎಸ್.ಸಿ ಅಗ್ರಿ -೧೮೮೭, ವೆಟರ್ನರಿ – ೧೮೫೬), ನಿಖಿಲ್ ಕಿತ್ತೂರ (ಇಂಜಿನಿಯರಿಂಗ್-೪೩೧೪), ಅಮೋಘ ಬೊಂಬಳೇಕರ್(ಇಂಜಿನಿಯರಿಂಗ್-೪೫೧೭, ಬಿ.ಎಸ್.ಸಿ ಅಗ್ರಿ-೨೯೦೭, ವೆಟರ್ನರಿ-೯೩೫), ಅನುಷಾ ಹೊಸುರ (ಇಂಜಿನಿಯರಿಂಗ್-೪೬೪೮), ಮಲ್ಲಿಕಾರ್ಜುನ ಹೂಗಾರ (ಇಂಜಿನಿಯರಿಂಗ್-೪೮೬೫ ಬಿ.ಎಸ್.ಸಿ ಅಗ್ರಿ-೧೨೩೨, ವೆಟರ್ನರಿ-೪೩೭), ಸಹಾನಾ ಮಾವಿನಗಿಡದ (ಇಂಜಿನಿಯರಿಂಗ್-೫೦೪೩), ಮಲ್ಲಿಕಾರ್ಜುನ ಮುಚ್ಚಂಡಿ (ಇಂಜಿನಿಯರಿಂಗ್-೫೧೪೫), ಅನುಷಾ ಎಡವಣ್ಣವರ(ಇಂಜಿನಿಯರಿಂಗ್-೫೩೧೨), ನಿವೇಶ ಮೋಗಲಿ (ಇಂಜಿನಿಯರಿಂಗ್-೫೪೦೯), ರುಚಿತಾ ಘಟನಟ್ಟಿ(ಇಂಜಿನಿಯರಿಂಗ್-೫೫೦೨), ಚನ್ನವೀರೇಶ ಕುಂಬಾರ (ಇಂಜಿನಿಯರಿಂಗ್-೫೭೬೧)ಬಸವ ಗೊಳಸಂಗಿ(ಇಂಜಿನಿಯರಿಂಗ್-೫೯೯೩) ವಿದ್ಯಾರ್ಥಿಗಳ ಈ ಸಾಧನೆಗೆ ಪ್ರಾಂಶುಪಾಲರಾದ ಮಂಜುನಾಥ ಮ ಜುನಗೊಂಡ, ಶೈಕ್ಷಣಿಕ ಸಂಯೋಜಕ ಮಂಜುನಾಥ ತುಮ್ಮರಮಟ್ಟಿ ಸೇರಿದಂತೆ ಆಡಳಿತ ಮಂಡಳಿಯ ಸರ್ವ ಸದಸ್ಯರು ಹಾಗೂ ಎಲ್ಲ ಬೋಧಕ ಬೋಧಕೇತರ ಸಿಬ್ಬಂದಿ ಹರ್ಷ ವ್ಯಕ್ತಪಡಿಸಿದ್ದಾರೆ.

BIJAPUR NEWS public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಉದಯರಶ್ಮಿ ಇಂದಿನ ದಿನಪತ್ರಿಕೆ ಜೂನ್ 14, 2026

ಕೋವಿಡ್ ಸಂದರ್ಭ ಸೇವೆಗೈದ ಆಯುಷ್ಯ ವೈದ್ಯರ ನೇಮಕವಾಗಲಿ

ವಸತಿಯುಕ್ತ ಸರಕಾರಿ ಪ್ರಥಮ ದರ್ಜೆ ಕಾಲೇಜಿಗೆ ೨(ಈ) ಮಾನ್ಯತೆ

ಶಿವನ ಉರಿಗಣ್ಣನ್ನು ಪಡೆದು ಲೋಕೋದ್ಧಾರ ಮಾಡಿದ ಶಿವದಾಶಿಮಯ್ಯ

Add A Comment
Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Helldivers
  • Typora
  • Uncategorized
  • Wemod
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಉದಯರಶ್ಮಿ ಇಂದಿನ ದಿನಪತ್ರಿಕೆ ಜೂನ್ 14, 2026
    In ದಿನಪತ್ರಿಕೆ
  • ಕೋವಿಡ್ ಸಂದರ್ಭ ಸೇವೆಗೈದ ಆಯುಷ್ಯ ವೈದ್ಯರ ನೇಮಕವಾಗಲಿ
    In (ರಾಜ್ಯ ) ಜಿಲ್ಲೆ
  • ವಸತಿಯುಕ್ತ ಸರಕಾರಿ ಪ್ರಥಮ ದರ್ಜೆ ಕಾಲೇಜಿಗೆ ೨(ಈ) ಮಾನ್ಯತೆ
    In (ರಾಜ್ಯ ) ಜಿಲ್ಲೆ
  • ಶಿವನ ಉರಿಗಣ್ಣನ್ನು ಪಡೆದು ಲೋಕೋದ್ಧಾರ ಮಾಡಿದ ಶಿವದಾಶಿಮಯ್ಯ
    In (ರಾಜ್ಯ ) ಜಿಲ್ಲೆ
  • ಜೂ.30ರಿಂದ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ
    In (ರಾಜ್ಯ ) ಜಿಲ್ಲೆ
  • ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರವೇಶಾತಿ ಆರಂಭ
    In (ರಾಜ್ಯ ) ಜಿಲ್ಲೆ
  • ಅನಿಲ್ ಚಿಕ್ಕಮಾದುಗೆ ಸಚಿವ ಸ್ಥಾನ ನೀಡದಿದ್ದರೆ ಹೋರಾಟದ ಎಚ್ಚರಿಕೆ
    In (ರಾಜ್ಯ ) ಜಿಲ್ಲೆ
  • ಮತಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ :ಮನಗೂಳಿ
    In (ರಾಜ್ಯ ) ಜಿಲ್ಲೆ
  • ಅಮೃತ ೨ ಯೋಜನೆಯಡಿ ರೂ.೩.೦೪ಕೋಟಿ ಮಂಜೂರು :ಮನಗೂಳಿ
    In (ರಾಜ್ಯ ) ಜಿಲ್ಲೆ
  • ಎಸ್.ಕೆ ಹೂಗಾರಗೆ ಪಿಎಚ್ಡಿ ಪದವಿ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.