ಉದಯರಶ್ಮಿ ದಿನಪತ್ರಿಕೆ
ಎಚ್.ಡಿ.ಕೋಟೆ: ಓದಬೇಕೆಂಬ ಹಸಿವು ಇದ್ದಾಗ ಮಾತ್ರ, ಬಡತನವನ್ನು ಮೆಟ್ಟಿನಿಂತು ಜೀವನದಲ್ಲಿ ಏನಾದರು ಸಾಧನೆ ಮಾಡಲು ಸಾಧ್ಯ. ಶಿಕ್ಷಣದ ಮೂಲಕ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯ ಎಂದು ಪದವಿ ಪೂರ್ವ ಶಿಕ್ಷಣ ಉಪ ನಿರ್ದೇಶಕರಾದ ಸಿ. ಚಲುವಯ್ಯ ಹೇಳಿದರು.
ತಾಲೂಕಿನ ಚಕ್ಕೋಡನಹಳ್ಳಿ ಗ್ರಾಮದಲ್ಲಿ ಆಯೋಜನೆ ಮಾಡಿದ ವಯೋ ನಿವೃತ್ತಿ ಸೇವಾ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನನಗೆ ವಿದ್ಯೆ ಕೊಟ್ಟವರು, ತುತ್ತು ಅನ್ನಕ್ಕೆ ಕಾರಣರಾದವರು ವೆಂಕಟ ತಿಮ್ಮಪ್ಪ ಮೇಷ್ಟ್ರು, ಭೂಮಿ ಮೇಲೆ ಹುಟ್ಟಿದ ಮೇಲೆ ತಂದೆ, ತಾಯಿ, ಗುರು, ದೇವರು, ಬಂಧು ಬಳಗ, ಸಮಾಜದ ಋಣವನ್ನು ತೀರಿಸಬೇಕು. ಆಗ ಮಾತ್ರ ಸ್ವರ್ಗ ಸಿಗುತ್ತದೆ. ನಾನು ಸ್ನಾತಕೋತ್ತರ ಪದವಿ ವಿದ್ಯಾಭ್ಯಾಸ ಮುಗಿದ ಮೇಲೆ ವ್ಯವಸಾಯ ಕೂಲಿ ಕೆಲಸ ಮಾಡುತ್ತಿದ್ದೆ. ಓದುವುದಕ್ಕೆ ಮೂಲ ಕಾರಣ ಹಸಿವು . ಕಷ್ಟಪಟ್ಟು ಓದುವುದರ ಜೊತೆಗೆ ಬಡತನವನ್ನು ಮೆಟ್ಟಿನಿಂತು ಶಿಕ್ಷಣವನ್ನು ಗಳಿಸಿ ಉದ್ಯೋಗ ಪಡೆದುಕೊಂಡು ನಾನು ಮಾಡಿದ ಸೇವೆ, ನಡೆ-ನುಡಿ ಗಮನಿಸಿದ ಜಿಲ್ಲಾಡಳಿತ ನನಗೆ ಸರ್ವೋತ್ತಮ ಪ್ರಶಸ್ತಿ ನೀಡಿದೆ. ನಾನು ಹಣ, ಪ್ರಶಸ್ತಿಯ ಹಿಂದೆ ಹೋದವನಲ್ಲ ಇರುವಷ್ಟು ದಿನ ಪ್ರಾಮಾಣಿಕವಾಗಿ ಕೆಲಸ ಮಾಡಿ ನಿವೃತ್ತಿಯ ನಂತರ ಸಾಮಾಜಿಕ ಕೆಲಸಗಳನ್ನು ಮಾಡಬೇಕು ಎಂದು ನಿರ್ಧರಿಸಿದ್ದೇನೆ. ವಿದ್ಯಾರ್ಥಿಗಳಿಗೆ ಐಎಎಸ್, ಕೆಎಎಸ್ ಪರೀಕ್ಷೆಗೆ ಬೇಕಾದ ಮಾರ್ಗದರ್ಶನವನ್ನು ನೀಡುವ ಮೂಲಕ ಸಾಮಾಜಿಕ ಸೇವೆಯನ್ನು ಮಾಡುತ್ತೇನೆ ಎಂದು ಸಿ. ಚಲುವಯ್ಯ ಹೇಳಿದರು.
ಕಾರ್ಯಕ್ರಮದಲ್ಲಿ ಶಾಂತ ಚಲುವಯ್ಯ, ನರಸಿಂಹೇಗೌಡ, ಪರಶಿವಮೂರ್ತಿ, ಪ್ರಕಾಶ್, ಪಿ. ನಾಗರಾಜ್, ಯೋಗ ನರಸಿಂಹೇಗೌಡ, ಕೃಷ್ಣೇಗೌಡ, ಯೋಗೇಂದ್ರೇಗೌಡ, ಪ್ರಾಂಶುಪಾಲ ಶಿವಪ್ಪನಾಯಕ, ಬೆಟ್ಟಸ್ವಾಮಿ, ಶಿವರಾಜ್, ಬೂದನೂರು ರವೀಶ್, ಸಂಪತ್ ಕುಮಾರ್, ನಾಗರಾಜ್, ಚೆಲುವರಾಜು, ವೆಂಕಟೇಶ್, ಶಿವಯ್ಯ, ಡಿ. ನಾಗರಾಜು, ರಂಗೇಗೌಡ, ನಾಗೇಗೌಡ, ಗಿರಿ ಪ್ರಸಾದ್, ರಾಜೇಗೌಡ, ಸುಭಾಷ್, ಕಾಳಪ್ಪಾಜಿ, ಶಿವರಾಜು, ವಕೀಲ ಮಹೇಶ್, ಎಡತೊರೆ ಶಿವರಾಜ್, ಅಂಕಯ್ಯ, ಸ್ವಾಮಿಗೌಡ, ಶಿವಣ್ಣ, ಯೋಗೇಶ್, ಲೋಕೇಶ್, ನಾಗೇಶ್, ಸ್ವಾಮಿ, ಮಂಜು, ಮಹೇಶ್, ನಿಂಗರಾಜಯ್ಯ, ಮಾದಯ್ಯ, ಗೋವಿಂದರಾಜ್, ಬ್ಯಾಂಕ್ ಆನಂದ್, ಶಿವರಾಜ್, ಶಿವಾಜಿ, ಶಿವರಾಜು, ಶೇಖರ್, ಶಾಂತಿ, ಸೋಮಶೇಖರ್, ರವಿಕುಮಾರ್, ರಘು, ಜಯಪ್ಪ, ಕೃಷ್ಣ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.

