ಉದಯರಶ್ಮಿ ದಿನಪತ್ರಿಕೆ
ಕೊಲ್ಹಾರ: ರಾಜ್ಯದ ನಗರಾಭಿವೃದ್ದಿ ಸಚಿವರಾಗಿ ಪ್ರಪಥಮ ಬಾರಿಗೆ ವಿಜಯಪೂರ ಜಿಲ್ಹೆಗೆ ರವಿವಾರ ಆಗಮಿಸಿರುವ ಡಾ|| ಯತೀಂದ್ರ ಸಿದ್ದರಾಮಯ್ಯನವರನ್ನು ಕೊರ್ತಿಕೊಲ್ಹಾರ ಸೇತುವೆಯ ಕೊರೆಮ್ಮ ದೇವಸ್ಥಾನ ಹತ್ತಿರ ಕೊಲ್ಹಾರ ಪಟ್ಟಣದ ಕಾಂಗ್ರೇಸ್ ಕಾರ್ಯಕರ್ತರು ಆದ್ದೂರಿಯಾಗಿ ಬರಮಾಡಿಕೊಂಡರು.
ರಾಜ್ಯ ಕಾಂಗ್ರೇಸ್ ಅಲ್ಪಸಂಖ್ಯಾತರ ಘಟಕದ ಉಪಾಧ್ಯಕ್ಷ ಉಸ್ಮಾನಸಾಬ ಪಟೇಲ ಹೂ ಗುಚ್ಛ ನೀಡಿ ಬರಮಾಡಿಕೊಂಡು ಕೊರ್ತಿ ಕೊಲ್ಹಾರ ಸೇತುವೆಯ ಹಾಗೂ ಕೃಷ್ಣಾ ನದಿಯ ಮಹತ್ವ ಮತ್ತು ಇತಿಹಾಸ ಪರಂಪರೆಯ ಉಳ್ಳ ಪಟ್ಟಣದ ಕೆನೆಮೋಸರ ಸವಿಯ ರುಚಿ ಬಗ್ಗೆ ವಿವರಣೆಯನ್ನು ತಿಳಿಸಿದರು.
ಹುಬ್ಬಳ್ಳಿ ಮಾರ್ಗವಾಗಿ ವಿಜಯಪೂರ ಜಿಲ್ಹೆಗೆ ಬರುವಾಗ ಕೊಲ್ಹಾರ ಊರು ಹೆಬ್ಬಾಗಿಲು ಇದ್ದಂತೆ ಆಲಮಟ್ಟಿ ಆಣೆಕಟ್ಟಿನ ಹಿನ್ನೀರಿನಲ್ಲಿ ನದಿ ದಂಡೆಯ ಜನರು ಮನೆಮಠ ಜಮೀನು ಕಳೆದುಕೊಂಡು ರಾಷ್ಟ್ರದ ಹಿತಕ್ಕಾಗಿ ತ್ಯಾಗ ಮಾಡಿರುವ ಬಗ್ಗೆ ಸಚಿವರಿಗೆ ಉಸ್ಮಾನ ಪಟೇಲ ಈರಣಗೌಡ ಕೋಮಾರ ಮಾಹಿತಿ ಕೊಟ್ಟಾಗ ಸಚಿವರು ಸಂತ್ರಸ್ತರಿಗೆ ಸೂಕ್ತವಾದ ಪರಿಹಾರ ಸಿಗಲು ನಮ್ಮ ಸರಕಾರ ಕ್ರಮಕೈಗೊಳ್ಳುತ್ತದೆ ನ್ಯಾಯವನ್ನು ದೊರಕಿಸುತ್ತದೆ ಎಂದರು.
ಈ ಸಂದರ್ಭದಲ್ಲಿ ಉಸ್ಮಾನಸಾಬ ಪಟೇಲ, ಈರಣಗೌಡ ಬ ಕೊಮಾರ, ಮುಸ್ತಪಾ ಮುಲ್ಲಾ, ಬಾಬುಸಾಬ ಕೂಡಗಿ, ಮಸಾಕಸಾಬ ಬಳಿಗಾರ, ಪಟೇಲ ಬಂದುಗಳು, ಶರಣು ಮಾದರ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

