ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ವಿಶ್ವ ಪರಿಸರ ದಿನಾಚರಣೆಯ ಪ್ರಯುಕ್ತ ಭಾರತೀಯ ಜನತಾ ಪಾರ್ಟಿ ವಿಜಯಪುರ ನಗರ ಯುವ ಮೋರ್ಚಾ ಆಯೋಜಿಸಿದ ಸಸಿ ನೆಡುವ ಕಾರ್ಯಕ್ರಮ ವಿಜಯಪುರ ನಗರ ಕರಾಡದೊಡ್ಡಿ ಹತ್ತಿರ ಇರುವ ಹನುಮಗಿರಿ ದೇವಸ್ಥಾನದಲ್ಲಿ ನಡೆಯಿತು.
ಈ ವಿಶ್ವ ಪರಿಸರ ದಿನಾಚರಣೆಯಲ್ಲಿ ಭಾಗವಹಿಸಿದ ಮಾಜಿ ಕೇಂದ್ರ ಸಚಿವ, ಸಂಸದ ರಮೇಶ ಜಿಗಜಿಣಗಿ, ಮಾಜಿ ಸಚಿವರಾದ ಅಪ್ಪಾಸಾಹೇಬ ಪಟ್ಟಣಶೆಟ್ಟಿ, ಮಹಾನಗರ ಪಾಲಿಕೆಯ ಸದಸ್ಯರಾದ ರಾಜು ಮಗೀಮಠ, ಜಿಲ್ಲೆಯ ಪ್ರಧಾನ ಕಾರ್ಯದರ್ಶಿಗಳಾದ ಈರಣ್ಣ ರಾವೂರ, ಜಿಲ್ಲೆಯ ಕಾರ್ಯದರ್ಶಿಗಳಾದ ಶ್ರೀ ಕೃಷ್ಣಾ ಗುನ್ನಾಳಕರ, ಜಿಲ್ಲೆಯ ಕಾರ್ಯದರ್ಶಿಗಳಾದ ರಮೇಶ ಬಿದನೂರ, ಚಿನ್ನು ಚಿನಗುಂಡಿ, ಎಸ್.ಸಿ. ಮೋರ್ಚಾದ ಅಧ್ಯಕ್ಷರಾದ ಮಂಜುನಾಥ ಮೀಸಿ, ವಿಜಯ ಜೋಶಿ, ರಾಮಚಂದ್ರ ಚೌಹಾಣ, ಯುವ ಮೋರ್ಚಾ ಅಧ್ಯಕ್ಷರಾದ ಆನಂದ ಮುಚ್ಚಂಡಿ, ವಿವೇಕ ತಾವರಗೇರಿ, ಮಂಥನ ಗಾಯಕವಾಡ, ಮಹಿಳಾ ಮೋರ್ಚಾ ಅಧ್ಯಕ್ಷೆ ಶ್ರೀಮತಿ ಭಾರತಿ ಭೂಯಾರ, ಮಹಿಳಾ ಮೋರ್ಚಾ ಉಪಾಧ್ಯಕ್ಷೆ ಜಯಶ್ರೀ ಅಫಜಲ್ಲಪೂರ ಹಾಗೂ ಕಾರ್ಯಕಾರಿಣಿ ಕಲ್ಪನಾ ಶಾಬಾದಿ, ಸೇರಿದಂತೆ ಪಕ್ಷದ ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದರು.

