ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ದಾಸೋಹ ಮತ್ತು ಪರೋಪಕಾರ ಮಾಡುವುದರ ಮೂಲಕ ತಂದೆ ತಾಯಿ,ಗುರು ಹಿರಿಯರ ಋಣಭಾರದಿಂದ ಸ್ವಲ್ಪಮಟ್ಟಿನ ಮುಕ್ತಿ ಪಡೆಯಬಹುದು. ಶರಣರು ಕಲಿಸಿಕೊಟ್ಟ ದಾಸೋಹ ಸಂಸ್ಕ್ರತಿಯಿಂದ ಜ್ಞಾನಾಭಿವೃದ್ಧಿಯಾಗುವುದಲ್ಲದೆ ವರ್ಗಭೇದವಳಿದು ಶಾಂತಿ ನೆಮ್ಮದಿಗಳು ನೆಲೆಸುತ್ತವೆ.ಆಗ ಬದುಕು ಸುಂದರವಾಗುವುದೆಂದು ಪ್ರೊ.ಬಸವರಾಜ ಕಡ್ಡಿಯವರು ಹೇಳಿದರು.
ಅವರು ನಗರದ ವೀರಶೈವ ಲಿಂಗಾಯತ ಮಹಾಸಭಾ ಭವನದಲ್ಲಿ ಹಮ್ಮಿಕೊಂಡಿದ್ದ ಲಿಂ.ಪಾರ್ವತಿ ಗುರುಪಾದಪ್ಪ ಕೋರಿ ಅವರ ಸ್ಮರಣಾರ್ಥ ನಡೆದ ದತ್ತಿ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.
ವಿ.ಸಿ.ನಾಗಠಾಣ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಡಾ.ವಿ.ಡಿ.ಐಹೊಳ್ಳಿ ಸ್ವಾಗತಿಸಿದರು. ಜಂಬುನಾಥ ಕಂಚ್ಯಾಣಿಯವರು ಪ್ರಾಸ್ತಾವಿಕ ವಾಗಿ ಮಾತನಾಡಿದರು.
ವೇದಿಕೆಯ ಮೇಲಿದ್ದ ಈಶ್ವರಪ್ಪ ಕೋರಿ, ಕೋರಿ ಜಗದೀಶ ಮತ್ತು ಶರಣಪ್ಪ ಮಾತನಾಡಿದರು.
ಈರಣ್ಣ ತೊಂಡಿಕಟ್ಟಿ ಕಾರ್ಯಕ್ರಮ ನಿರೂಪಿಸಿದರು. ಮ.ಗು.ಯಾದವಾಡ ವಂದಿಸಿದರು.
ಕಾರ್ಯಕ್ರಮದಲ್ಲಿ ದೊಡ್ಡಣ್ಣ ಬಜಂತ್ರಿ, ಶಶಿಕಾಂತ ಸಾತಿಹಾಳ, ಸುಜಾತಾ ಪಾಟೀಲ, ಎಸ್.ಎಸ್.ಪಾಟೀಲ, ಪ್ರೊ.ಬಿ.ಜಗದೀಶ, ಎಸ್,ಬಿ. ದೊಡಮನಿ ದಂಪತಿಗಳು , ಎಸ್.ವಾಯ್.ಗದಗ, ನೂತನ ಬ್ಯಾಕೋಡ, ಮುಂತಾದವರು ಉಪಸ್ಥಿತರಿದ್ದರು.

