ಉದಯರಶ್ಮಿ ದಿನಪತ್ರಿಕೆ
ಚಡಚಣ: ನಾಗಠಾಣ ಮತಕ್ಷೇತ್ರ ಅಭಿವೃದ್ಧಿ ಕ್ಷೇತ್ರ ವಾಗಬೇಕೆಂದರೆ ನಾಗಠಾಣ ಶಾಸಕರಾದ ವಿಠ್ಠಲ ಕಟಕಧೋಂಡ ಅವರಿಗೆ ಸಚಿವ ಸ್ಥಾನದ ಅಧಿಕಾರ ಕೊಟ್ಟಾಗ ಮಾತ್ರ ಸಾಧ್ಯವಾಗಲಿದೆ, ಆ ನಿಟ್ಟಿನಲ್ಲಿ ಶಾಸಕ ವಿಠ್ಠಲ ಕಟಕಧೋಂಡ ಅವರಿಗೆ ನೂತನ ಮುಖ್ಯಮಂತ್ರಿ ಡಿ.ಕೆ ಶಿವುಕುಮಾರ ಅವರ ಮಂತ್ರಿ ಮಂಡಲದಲ್ಲಿ ಸಚಿವ ಸ್ಥಾನದ ಅವಕಾಶ ನೀಡಿ ಎಂದು ಕಾಂಗ್ರೆಸ್ ಧುರಿಣ ವಾಸಿಮ್ ಮುಲ್ಲಾ ಒತ್ತಾಯಿಸಿದ್ದಾರೆ.
ನಾಗಠಾಣ ಮತಕ್ಷೇತ್ರಕ್ಕೆ ಇಲ್ಲಿಯ ವರೆಗೆ ಸಚಿವ ಸ್ಥಾನ ಸಿಕ್ಕಿಲ್ಲ. ನೂತನ ಮುಖ್ಯ ಮಂತ್ರಿ ಡಿ.ಕೆ.ಶಿವಕುಮಾರ ಅವರು ನಾಗಠಾಣ ಮತಕ್ಷೇತ್ರಕ್ಕೆ ಸಚಿವ ಸ್ಥಾನ ನೀಡಿದರೆ ಕರ್ನಾಟಕ ಹಾಗೂ ನಾಗಠಾಣ ಕ್ಷೇತ್ರದ ಇತಿಹಾಸದ ಪುಟದಲ್ಲಿ ನೀವು ಶಾಶ್ವತವಾಗಿ ಉಳಿಯಲಿದ್ದಿರಿ ಎಂದು ಚಡಚಣ ಪಟ್ಟಣದ ಕಾಂಗ್ರೆಸ್ ಧುರಿಣ ವಾಸಿಮ್ ಮುಲ್ಲಾ ಅವರು ಶಾಸಕ ವಿಠ್ಠಲ.ಧೋ ಕಟಕಧೋಂಡ ಅವರಿಗೆ ಸಚಿವ ಸ್ಥಾನ ನೀಡುವಂತೆ ಮುಖ್ಯಮಂತ್ರಿ ಹೈಕಮಾಂಡಗೆ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನವರಿಗೂ ಮನವಿ ಮಾಡಿದ್ದಾರೆ.

