ಕಾಂಗ್ರೆಸ್ ಪಕ್ಷದ ಯುವ ಮುಖಂಡ ಬಾಪೂಗೌಡ ಎಂ ಪಾಟೀಲ್ (ಕಣ್ಣಗುಡ್ಡಿಹಾಳ್) ಒತ್ತಾಯ
ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಮತಕ್ಷೇತ್ರದ ಶಾಸಕ ಅಶೋಕ ಮನಗೂಳಿ ಅವರಿಗೆ ಸಚಿವ ಸ್ಥಾನಮಾನ ನೀಡಬೇಕು ಎಂದು ಕಾಂಗ್ರೆಸ್ ಪಕ್ಷದ ಮುಖಂಡ ಬಾಪೂಗೌಡ ಎಂ ಪಾಟೀಲ್ (ಕಣ್ಣಗುಡ್ಡಿಹಾಳ್) ಆಗ್ರಹಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ ಅವರು, ಕಳೆದ 20 ವರ್ಷಗಳಿಂದ ಸಿಂದಗಿ ಮತಕ್ಷೇತ್ರದಲ್ಲಿ ಕಾಂಗ್ರೆಸ್ ತನ್ನ ಅಸ್ತಿತ್ವವನ್ನೇ ಕಳೆದುಕೊಂಡ ಇಲ್ಲಿ ಬಿಜೆಪಿ ಮತ್ತು ಜೆಡಿಎಸ್ ಬಲಾಡ್ಯಾ ಸಾದಿಸಿ ಅಧಿಕಾರದಲ್ಲಿದ್ದವು. ಇಂತಹ ಬಿಜೆಪಿ ಬದ್ರ ಕೋಟೆ ಎಂದು 4 ಬಾರಿ ಆಡಳಿತ ಹೊಂದಿರುವ ಸಿಂದಗಿ ಮತಕ್ಷೇತ್ರದಲ್ಲಿ ಉಪಚುನಾವಣೆಯಲ್ಲಿ ಸುಮಾರು 63000 ಮತ ಪಡೆಯುವ ಮೂಲಕ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರನ್ನು ಕಟ್ಟಿಕೊಂಡರು. ಮುಂದೆ 2023 ಸಾರ್ವಜನಿಕ ಚುನಾವಣೆಯಲ್ಲಿ 8600 ಮತಗಳನ್ನ ಪಡೆಯುವ ಮೂಲಕ 31000 ಸಾವಿರ ಅಂತರದಲ್ಲಿ ಸೋತಿರುವ ಕಾಂಗ್ರೆಸ್ ಪಕ್ಷವನ್ನು ಇತಿಹಾಸ ಸೃಷ್ಟಿಸಿ ಸಿಂದಗಿಯಲ್ಲಿ ಕಾಂಗ್ರೆಸ್ ಪಕ್ಷದ ಬಾವುಟ ಹಾರಿಸಿದರು. ಅತ್ಯಂತ ಕಡಿಮೆ ಅವಧಿಯಲ್ಲಿ ಸಾಕಷ್ಟು ಅನುದಾನ ತಂದು ಸಿಂದಗಿಯನ್ನು ಮಾದರಿಯ ಮತಕ್ಷೇತ್ರವನ್ನಾಗಿ ಮಾಡಲು ಇನ್ನಷ್ಟು ಶಕ್ತಿಯ ಅವಶ್ಯಕತೆ ಇದೆ. ಆದ್ದರಿಂದ ಕಾಂಗ್ರೆಸ್ ಹೈ ಕಮಾಂಡ್ ಸಿಂದಗಿ ಜನಪ್ರಿಯ ಶಾಸಕರು ಆಗಿರುವ ಅಶೋಕ್ ಮನಗೂಳಿ ಅವರಿಗೆ ಸಚಿವ ಸ್ಥಾನಮಾನ ನೀಡಬೇಕು ಎಂದು ಇಡೀ ಸಿಂದಗಿ ಮತಕ್ಷೇತ್ರದ ಜನರು ಒತ್ತಾಯಿಸುತ್ತೇವೆ ಎಂದು ಬಾಪುಗೌಡ ಪ್ರಕಟಣೆಯಲ್ಲಿ ಕೋರಿದ್ದಾರೆ.

