ಉದಯರಶ್ಮಿ ದಿನಪತ್ರಿಕೆ
ತಿಕೋಟಾ: ತಾಲೂಕು ಪಂಚಾಯತಿಯ ನೂತನ ಕಾರ್ಯನಿರ್ವಾಹಕ ಅಧಿಕಾರಿಗಳಾಗಿ ಆನಂದಕುಮಾರ ಮ್ಯಾಗೇರಿ ಅವರು ಅಧಿಕಾರ ಸ್ವೀಕಾರ ಮಾಡಿದರು.
ನಿರ್ಗಮಿತ ಕಾರ್ಯನಿರ್ವಾಹಕ ಅಧಿಕಾರಿಗಳಾದ ಬಸವಂತರಾಯಗೌಡ ಬಿರಾದಾರ ಅವರು ನೂತನವಾಗಿ ಆಗಮಿಸಿದ ಆನಂದಕುಮಾರ ಮ್ಯಗೇರಿ ಅವರಿಗೆ ಅಧಿಕಾರ ಹಸ್ತಾಂತರ ಮಾಡಿ, ಶುಭ ಕೋರಿದರು.
ನಂತರ ಇಬ್ಬರು ಅಧಿಕಾರಿಗಳಿಗೆ ಮಹಾತ್ಮ ಗಾಂಧಿ ನರೇಗಾ ನೌಕರರ ಸಂಘದಿಂದ ಗೌರವಿಸಿ, ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಸಹಾಯಕ ನಿರ್ದೇಶಕರಾದ ಬಸವರಾಜ ಸಂಕಗೊಂಡ, ಟಿಪಿಓ ಮಹಾಂತೇಶ ಬಾಗೇವಾಡಿ, ಮಹಾತ್ಮ ಗಾಂದಿ ನರೇಗಾ ನೌಕರರ ಸಂಘದ ಜಿಲ್ಲಾ ಉಫಾಧ್ಯಕ್ಷರಾದ ಕಲ್ಲಪ್ಪ ನಂದರಗಿ, ತಾಂತ್ರೀಕ ಸಂಯೋಜಕ ನಾಗರಾಜ ಕಲಕೇರಿ, ತಾಲೂಕು ಎಮ್.ಐ.ಎಸ್ ಸಂಯೋಜಕರಾದ ಅಪರ್ಣಾ ಬದಾಮಿ, ಆಡಳಿತ ಸಹಾಯಕ ಸುನೀಲ ಬನಸೋಡೆ, ಎನ್.ಆರ್.ಎಲ್.ಎಮ್ ಯೋಜನೆಯ ವಲಯ ಮೇಲ್ವಿಚಾರಕರಾದ ಶ್ರೀಮಂತ ಕಟ್ಟಿ ಸೇರಿದಂತೆ ಇತರರು ಹಾಜರಿದ್ದರು.

