Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಡಾ.ಸುರೇಖಾ ರಾಠೋಡ ಗೆ “ಸಾಹಿತ್ಯ ರತ್ನ” ಪ್ರಶಸ್ತಿ ಪ್ರದಾನ

ಯುಕೆಪಿ ಎಂ.ಡಿ. ಕಚೇರಿಯ ಕಂಪ್ಯೂಟರ್ ಜಪ್ತಿ!

ದೋಷರಹಿತ ಮತದಾರರ ಪಟ್ಟಿಗೆ ರಾಜಕೀಯಪಕ್ಷಗಳ ಸಹಕಾರ ಅಗತ್ಯ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ಬೈಕ್‌ನಿಂದ ಬಿದ್ದು ಸ್ಥಳದಲ್ಲಿಯೆ ಮಹಿಳೆ ಸಾವು!
(ರಾಜ್ಯ ) ಜಿಲ್ಲೆ

ಬೈಕ್‌ನಿಂದ ಬಿದ್ದು ಸ್ಥಳದಲ್ಲಿಯೆ ಮಹಿಳೆ ಸಾವು!

By No Comments2 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಅವೈಜ್ಞಾನಿಕ ವೇಗ ನಿಯಂತ್ರಕದಿಂದ ಅಪಘಾತ | ಸಾರ್ವಜನಿಕರ ಆಕ್ರೋಶ

ಉದಯರಶ್ಮಿ ದಿನಪತ್ರಿಕೆ

ಚಡಚಣ: ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ಬರಡೋಲ ಗ್ರಾಮದ ಸಮೀಪ ಅವೈಜ್ಞಾನಿಕವಾಗಿ ನಿರ್ಮಿಸಲಾಗಿರುವ ರಸ್ತೆ ವೇಗ ನಿಯಂತ್ರಕ (ಹಂಪ್) ಕಾರಣದಿಂದ ಸಂಭವಿಸಿದ ಅಪಘಾತದಲ್ಲಿ ಮಹಿಳೆಯೊಬ್ಬರು ಮೃತಪಟ್ಟಿರುವ ಘಟನೆ ಸೋಮವಾರ ನಡೆದಿದೆ.
ಈ ಘಟನೆ ಸ್ಥಳೀಯರಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದು, ಸಂಬಂಧಿಸಿದ ಅಧಿಕಾರಿಗಳ ನಿರ್ಲಕ್ಷದ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಲಾಗಿದೆ.
ಮಹಾರಾಷ್ಟ್ರ ರಾಜ್ಯದ ಇಸ್ಲಾಂಪುರ ನಿವಾಸಿ ಮುಮ್ತಾಜ್ ಅಬ್ದುಲ್ ಶೇಖ್ (55) ಮೃತಪಟ್ಟ ಮಹಿಳೆ. ಅವರು ತಮ್ಮ ಪತಿ ಅಬ್ದುಲ್ ಶೇಖ್ ಅವರೊಂದಿಗೆ ಮೈನಳ್ಳಿ ಗ್ರಾಮದಿಂದ ಬೈಕ್‌ನಲ್ಲಿ ಇಸ್ಲಾಂಪುರಕ್ಕೆ ತೆರಳುತ್ತಿದ್ದ ವೇಳೆ ಬರಡೋಲ ಗ್ರಾಮದ ಬಳಿ ರಸ್ತೆ ಮಧ್ಯೆ ನಿರ್ಮಿಸಲಾಗಿದ್ದ ಅವೈಜ್ಞಾನಿಕ ವೇಗ ನಿಯಂತ್ರಕದಿಂದಾಗಿ ಬೈಕ್ ನಿಯಂತ್ರಣ ತಪ್ಪಿ ಕೆಳಗೆ ಬಿದ್ದಿದೆ. ಪರಿಣಾಮ ಮುಮ್ತಾಜ್ ಅವರ ತಲೆಗೆ ಪೆಟ್ಟು ಬಿದ್ದ ಪರಿಣಾಮವಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಮೃತೆಯ ಪತಿ ಅಬ್ದುಲ್ ಶೇಖ್ ಮಾತನಾಡಿ, “ರಸ್ತೆಯ ಮೇಲಿನ ವೇಗ ನಿಯಂತ್ರಕಕ್ಕೆ ಯಾವುದೇ ಮುನ್ನೆಚ್ಚರಿಕೆ ಫಲಕ, ಬಣ್ಣದ ಗುರುತು ಅಥವಾ ಸೂಚನಾ ಫಲಕದ ವ್ಯವಸ್ಥೆ ಕೂಡ ಮಾಡಿಲ್ಲ್ಲ. ಏಕಾಏಕಿ ಹಂಪ್ ಎದುರಾದ ಕಾರಣ ಬೈಕ್ ಸಮತೋಲನ ಕಳೆದುಕೊಂಡು ಅಪಘಾತ ಸಂಭವಿಸಿದೆ. ಈ ದುರಂತಕ್ಕೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಮತ್ತು ರಸ್ತೆ ಕಾಮಗಾರಿ ಮಾಡಿದ ಕಾಂಟ್ರ್ಯಾಕ್ಟರ ನೇರ ಹೊಣೆ” ಎಂದು ಆರೋಪಿಸಿದರು.
ಸ್ಥಳೀಯರ ಪ್ರಕಾರ, ಕೆಲವು ತಿಂಗಳ ಹಿಂದೆ ನಿರ್ಮಿಸಲಾದ ಈ ವೇಗ ನಿಯಂತ್ರಕ ಅವೈಜ್ಞಾನಿಕವಾಗಿದ್ದು, ಈಗಾಗಲೇ ಇದೇ ಸ್ಥಳದಲ್ಲಿ 15ಕ್ಕೂ ಹೆಚ್ಚು ಅಪಘಾತಗಳು ಸಂಭವಿಸಿವೆ. ಬರಡೋಲ ಗ್ರಾಮದ ಸುಮಾರು ಸ್ಥಳಗಳಲ್ಲಿ ದೊಡ್ಡ ದೊಡ್ಡ ರಸ್ತೆ ವೇಗ ನಿಯಂತ್ರಕ (ಹಂಪ್) ಅಳವಡಿಸಿದ್ದು ಅವನ್ನು ವೈಜ್ಞಾನಿಕವಾಗಿ ಅಳವಡಿಸುವಂತೆ ಅನೇಕ ಬಾರಿ ಅಧಿಕಾರಿಗಳ ಗಮನಕ್ಕೆ ತಂದರೂ ಸಮಸ್ಯೆ ಪರಿಹರಿಸಲು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಅಪಘಾತದ ನಂತರ ಸ್ಥಳಕ್ಕೆ ಚಡಚಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು,ಮರಣೋತ್ತರ ಪರೀಕ್ಷೆಗೆ ಗಾಯಾಳುವನ್ನು ಸಮುದಾಯ ಆರೋಗ್ಯ ಕೇಂದ್ರ ಚಡಚಣಕ್ಕೆ ಸಾಗಿಸಲಾಯಿತು.
ರಸ್ತೆ ಸುರಕ್ಷತಾ ನಿಯಮಗಳನ್ನು ಪಾಲಿಸದೆ ನಿರ್ಮಿಸಿರುವ ವೇಗ ನಿಯಂತ್ರಕಗಳನ್ನು ತಕ್ಷಣ ತೆರವುಗೊಳಿಸಿ, ಮತ್ತು ಅವಶ್ಯಕತೆ ಇದ್ದಲ್ಲಿ ಮಾತ್ರ ವೈಜ್ಞಾನಿಕ ರೀತಿಯಲ್ಲಿ ರಸ್ತೆ ಸುರಕ್ಷತಾ (ಹಂಪ)ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ಈ ಘಟನೆ ರಸ್ತೆ ಕಾಮಗಾರಿಗಳಲ್ಲಿನ ನಿರ್ಲಕ್ಷ ಹಾಗೂ ಅವೈಜ್ಞಾನಿಕ ನಿರ್ಮಾಣಗಳು ಸಾರ್ವಜನಿಕರ ಜೀವಕ್ಕೆ ಹೇಗೆ ಅಪಾಯವಾಗುತ್ತವೆ ಎಂಬುದಕ್ಕೆ ಮತ್ತೊಂದು ಉದಾಹರಣೆಯಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಕ್ರಮ ಕೈಗೊಂಡು ಇಂತಹ ದುರ್ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ
ಈ ಕುರಿತು ಚಡಚಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

BIJAPUR NEWS bjp public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಡಾ.ಸುರೇಖಾ ರಾಠೋಡ ಗೆ “ಸಾಹಿತ್ಯ ರತ್ನ” ಪ್ರಶಸ್ತಿ ಪ್ರದಾನ

ಯುಕೆಪಿ ಎಂ.ಡಿ. ಕಚೇರಿಯ ಕಂಪ್ಯೂಟರ್ ಜಪ್ತಿ!

ದೋಷರಹಿತ ಮತದಾರರ ಪಟ್ಟಿಗೆ ರಾಜಕೀಯಪಕ್ಷಗಳ ಸಹಕಾರ ಅಗತ್ಯ

ಆಲಮಟ್ಟಿ ಉದ್ಯಾನಗಳಿಗೆ ಶಾಲಾ ಮಕ್ಕಳಿಗೆ ಉಚಿತ ಪ್ರವೇಶಕ್ಕೆ ಮನವಿ

Add A Comment
Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Helldivers
  • Typora
  • Uncategorized
  • Wemod
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಡಾ.ಸುರೇಖಾ ರಾಠೋಡ ಗೆ “ಸಾಹಿತ್ಯ ರತ್ನ” ಪ್ರಶಸ್ತಿ ಪ್ರದಾನ
    In (ರಾಜ್ಯ ) ಜಿಲ್ಲೆ
  • ಯುಕೆಪಿ ಎಂ.ಡಿ. ಕಚೇರಿಯ ಕಂಪ್ಯೂಟರ್ ಜಪ್ತಿ!
    In (ರಾಜ್ಯ ) ಜಿಲ್ಲೆ
  • ದೋಷರಹಿತ ಮತದಾರರ ಪಟ್ಟಿಗೆ ರಾಜಕೀಯಪಕ್ಷಗಳ ಸಹಕಾರ ಅಗತ್ಯ
    In (ರಾಜ್ಯ ) ಜಿಲ್ಲೆ
  • ಆಲಮಟ್ಟಿ ಉದ್ಯಾನಗಳಿಗೆ ಶಾಲಾ ಮಕ್ಕಳಿಗೆ ಉಚಿತ ಪ್ರವೇಶಕ್ಕೆ ಮನವಿ
    In (ರಾಜ್ಯ ) ಜಿಲ್ಲೆ
  • ಆಲಮಟ್ಟಿ ಎತ್ತರ ಹೆಚ್ಚಳ ೩ ವರ್ಷದಲ್ಲಿ ಪೂರ್ಣಗೊಳಿಸಲು ಬದ್ಧ
    In (ರಾಜ್ಯ ) ಜಿಲ್ಲೆ
  • ೧ ರಿಂದ ೫ ವರೆಗೆ ಶಿಕ್ಷಣ ಕಡ್ಡಾಯವಾಗಿ ಮಾತೃಭಾಷೆಯಲ್ಲಿರಲಿ
    In (ರಾಜ್ಯ ) ಜಿಲ್ಲೆ
  • 21ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಹ.ಮ.ಪೂಜಾರ
    In ವಿಶೇಷ ಲೇಖನ
  • ಶೇ.೭೭.೬೮ ರಷ್ಟು ಮತದಾರರ ಮ್ಯಾಪಿಂಗ್ ಪೂರ್ಣ
    In (ರಾಜ್ಯ ) ಜಿಲ್ಲೆ
  • ಮಾದಕ ವಸ್ತುಗಳಿಂದ ಶರೀರದ ಮೇಲೆ ನೇರ ಪರಿಣಾಮ :ಪಿಎಸೈ ಸಚೀನ
    In (ರಾಜ್ಯ ) ಜಿಲ್ಲೆ
  • ಗ್ರಾಮದೇವತಾ ಜಾತ್ರಾಮಹೋತ್ಸವದಲ್ಲಿ ಗೀಗೀ ಪದಗಳ ಸಂಭ್ರಮ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.