ಉದಯರಶ್ಮಿ ದಿನಪತ್ರಿಕೆ
ಹಂಪಿ ವಿಶ್ವ ವಿದ್ಯಾಲಯದ ಪ್ರಾಧ್ಯಾಪಕ ಪ್ರೊ ವಾಸುದೇವ ಬಡಿಗೇರ ಅವರ ದೇವರ ದಾಸಿಮಯ್ಯನವರ ಮರು ಚಿಂತನೆ ವಿಷಯ ನಿಜಕ್ಕೂ ಅರ್ಥರಹಿತ ಪೂರ್ವಾಗ್ರಹಪೀಡಿತ ವಿಚಾರಗಳೇ ಹೊರತು ಅವರ ಯಾವ ವಿಚಾರಗಳು ಸತ್ಯದ ನಿಲುವಿಗೆ ನಿಲ್ಲುವುದಿಲ್ಲ.
ಇನ್ನು ಮೈಸೂರಿನ ಪ್ರೊ ವಸಂತಕುಮಾರ ಅವರು ಇದೆ ರಾಗದ ಪುನರಾವರ್ತನೆ ಮಾಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ದೇವರ ದಾಸಿಮಯ್ಯ ಮತ್ತು ಜೇಡರ ದಾಸಿಮಯ್ಯ ಇಬ್ಬರೂ ಒಬ್ಬರೇ ಎಂದು ಹಂಚಿಕೊಂಡಿದ್ದಾರೆ
ಓತಿಕ್ಯಾತಕ್ಕೆ ಬೇಲಿ ಸಾಕ್ಷಿ ಎನ್ನುವ ಹಾಗಿದೆ ಎಂದು ಪುಣೆ ಬಸವ ತಿಳುವಳಿಕೆ ಮತ್ತು ಸಂಶೋಧನಾ ಕೇಂದ್ರದ ಅಧ್ಯಕ್ಷ ಡಾ.ಶಶಿಕಾಂತ ಪಟ್ಟಣ (ರಾಮದುರ್ಗ) ಕಟುವಾಗಿ ಟೀಕಿಸಿದ್ದಾರೆ.
ಈ ಕುರಿತು ಮಂಗಳವಾರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ ಅವರು, ಡಾ ಏಚ್ ದೇವೀರಪ್ಪ, ಡಾ ತಿಪ್ಪೇರುದ್ರಸ್ವಾಮಿ, ಡಾ ಎಂ ಚಿದಾನಂದ ಮೂರ್ತಿ, ಡಾ ವೃಷಭೇಂದ್ರಸ್ವಾಮಿ, ಡಾ ಎಂ ಎಂ ಕಲಬುರ್ಗಿ, ಪ್ರೊ ವಿದ್ಯಾಶಂಕರ, ಡಾ ವೀರಣ್ಣ ರಾಜೂರ, ಡಾ ವೀರಣ್ಣ ದಂಡೆ, ಡಾ ಜಯಶ್ರೀ ದಂಡೆ, ಪ್ರೊ. ಬಿ ಆರ್ ಪೊಲೀಸ ಪಾಟಿಲ, ಪ್ರೊ ವಿ ಸಿ ಸವಡಿ ಸಿಂಡಿಕೇಟ್ ಸದಸ್ಯರು, ಪ್ರೊ ಹನುಮಾಕ್ಷಿ ಗೋಗಿ, ಡಾ ಕೆ ರವೀಂದ್ರನಾಥ, ಡಾ ಶಶಿಕಾಂತ ಪಟ್ಟಣ, ಡಾ ತಾರಾ ಬಿಎನ್, ಡಾ ವೀಣಾ ಯಲಿಗಾರ, ಪ್ರೊ ನಾಗರಾಜ ಕೊಟಗಾರ ಸೇರಿದಂತೆ ಅನೇಕ ಸಂಘ ಸಂಸ್ಥೆಗಳು
ದೇವರ ದಾಸಿಮಯ್ಯ ಮತ್ತು ಜೇಡರ ದಾಸಿಮಯ್ಯ ಇಬ್ಬರೂ ಬೇರೆ ಬೇರೆ ಅವರ ಕಾಲವೂ ಬೇರೆ ಎಂದು ನಿರೂಪಿಸಿವೆ. ಸತ್ಯವನ್ನು ಮರೆ ಮಾಚಿ ಸುಳ್ಳಿಗೆ ಪಟ್ಟ ಕಟ್ಟುವ ವಿಷಯ ಸಂಶೋಧನೆ ಆಗಲಾರದು.
ಇನ್ನು ಕಕ್ಕಯ್ಯ ಕುಂಬಾರ ಗುಂಡಯ್ಯ ಮಾದರ ಚೆನ್ನಯ್ಯ ಬಸವಣ್ಣನವರ ಸಮಕಾಲೀನ ಅಲ್ಲ ಅವರು ಬಸವಪೂರ್ವಯುಗದ ಶರಣರು ಎನ್ನುವ ಇನ್ನೊಂದು ಶುದ್ಧ ಸುಳ್ಳು ಹೇಳುತ್ತಾರೆ.
ಇದರ ವಿರುದ್ಧ ಬಸವ ತಿಳುವಳಿಕೆ ಮತ್ತು ಸಂಶೋಧನಾ ಕೇಂದ್ರ ಪುಣೆ ಪತ್ರ ಚಳುವಳಿ ಆರಂಭಿಸಿ ಇಂತಹ ಸುಳ್ಳು ವಿಚಾರಗಳನ್ನು ಸಂಶೋಧನೆ ಎಂದು ಹೇಳುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲು ಸರಕಾರವನ್ನು ಮತ್ತು ವಿಶ್ವ ವಿದ್ಯಾಲಯದ ಕುಲಪತಿಗಳನ್ನು ಡಾ.ಶಶಿಕಾಂತ ಪಟ್ಟಣ ಒತ್ತಾಯಿಸಿದ್ದಾರೆ.

