Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಉದಯರಶ್ಮಿ ಇಂದಿನ ದಿನಪತ್ರಿಕೆ ಜೂನ್ 04, 2026

ತಮಿಳುನಾಡು ರಾಜಕೀಯ ಚದುರಂಗದಾಟದಲ್ಲಿ ಹೊಸ ತಂತ್ರ

ಮುಳ್ಳಿನ ಹಾದಿಯಲಿ ಹೂ ನಗೆಯ ಪಯಣ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»ವಿಶೇಷ ಲೇಖನ»ಉತ್ತಮ ಭವಿಷ್ಯಕ್ಕಾಗಿ ಸೈಕಲ್ ಸವಾರಿ ಮಾಡಿ
ವಿಶೇಷ ಲೇಖನ

ಉತ್ತಮ ಭವಿಷ್ಯಕ್ಕಾಗಿ ಸೈಕಲ್ ಸವಾರಿ ಮಾಡಿ

By No Comments3 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಲೇಖನ
– ಮಲ್ಲಪ್ಪ. ಸಿ. ಖೊದ್ನಾಪೂರ (ತಿಕೋಟಾ)
ವಿಜಯಪುರ

ಉದಯರಶ್ಮಿ ದಿನಪತ್ರಿಕೆ

ಆಡಂ ಹಾರ್ಟ-ಡೇವಿಸ್ ಅವರು, “ಸೈಕಲ್ ಎಂದರೆ ಮನುಷ್ಯನ ಪಾರಂಪರಿಕ-ಸಾಂಪ್ರದಾಯಿಕ ಮತ್ತು ಅತ್ಯಂತ ಸುಲಭ ಮತ್ತು ಅಗ್ಗದ ಸಾರಿಗೆಯ ಸಾಧನ.
ಸೈಕಲ್ ತುಳಿಯುವುದರಿಂದ ನಿಮ್ಮ ದೇಹಕ್ಕೆ ಕಸರತ್ತು ಮತ್ತು ವ್ಯಾಯಾಮ ನೀಡುವ ಸವಾರಿಯಾಗಿದೆ” ಎಂದು ಹೇಳಿದ್ದಾರೆ. ಸೈಕಲ್ ಸವಾರಿ ಎಂದರೆ ಕೇವಲ ವ್ಯಾಯಾಮವಲ್ಲ. ಅದು ನಮ್ಮ ದೇಹ ಮತ್ತು ಮನಸ್ಸಿಗೆ ನವ ಚೈತನ್ಯವನ್ನು ನೀಡುವ ಒಂದು ಸಾಧನ. ನಾವು ಬಾಲ್ಯದಲ್ಲಿದ್ದಾಗ ಒಡನಾಡಿ ಇದ್ದಂತೆ. ಇದರಿಂದ ಪ್ರಕೃತಿಯ ಸೌಂದರ್ಯವನ್ನು ಸವಿಯಲು, ಆರೋಗ್ಯವನ್ನು ಕಾಪಾಡಲು ಮತ್ತು ಪರಿಸರವನ್ನು ಸಂರಕ್ಷಿಸಲು ಸಹಕಾರಿಯಾಗಿದೆ. ನಮ್ಮ ಪಾರಂಪರಿಕ-ಸಾಂಪ್ರದಾಯಿಕ ವಾಹನವಾದ ಈ ಸೈಕಲ್ ಅನ್ನು ಬಳಸಿ, ಮುಗಿದು ಹೋಗುತ್ತಿರುವ ಇಂಧನವನ್ನು ಉಳಿಸಿ. ನಾವು ಸಣ್ಣವರಿದ್ದಾಗ ಗೆಳೆಯರೊಂದಿಗೆ ಜೊತೆಗೂಡಿ ಸೈಕಲ್ ಸವಾರಿ ಮಾಡುತ್ತಾ ನಾ ಮುಂದು ತಾ ಮುಂದು ಎಂದು ಸ್ಪರ್ಧೆಗಿಳಿಯುತ್ತಿದ್ದ ಸಂದರ್ಭಗಳು ನೆನೆಪಿಗೆ ಬಂದರೆ ಮನಸ್ಸಿಗೆ ಆಹ್ಲಾದಕರವೆನಿಸುತ್ತದೆ. ಸೈಕಲ್ ಒಂದು ವ್ಯಕ್ತಿ ಚಾಲಿತ ವಾಹನವಾಗಿದ್ದು, ಮಾನವನಿಗೆ ದೈಹಿಕ ಕಸರತ್ತು ನೀಡಬಲ್ಲ ಸಾಧನ. ಯಾವುದೇ ದುಬಾರಿಯಲ್ಲದ, ನೈಸರ್ಗಿಕ ಪರಿಸರಕ್ಕೆ ಹಾನಿಯನ್ನುಂಟು ಮಾಡದಂತಹ ಪರಿಸರ ಸ್ನೇಹಿ ವಾಹನವಾಗಿದೆ. ಏನಪ್ಪ ಇವರು ಈ ಸೈಕಲ್ ಬಗ್ಗೆ ಇಷ್ಟೊಂದು ವರ್ಣನೆ ಮಾಡುತ್ತಿದ್ದೀರಿ ಅಂದುಕೊಂಡಿರಾ? ಎಂಬ ಬಗ್ಗೆ ಕುತೂಹಲ ನಿಮ್ಮ ಮನದಲ್ಲಿ ಮೂಡದೇ ಇರಲಾರದು.


ಜಾಗತಿಕ ಯುದ್ದದ ಸಂದರ್ಭದಲ್ಲಿ ಪೆಟ್ರೋಲ್, ಡಿಸೇಲ್ ಬೆಲೆಯು ಗಗನಕ್ಕೇರುತ್ತಿರುವ ಇಂದಿನ ದಿನಗಳಲ್ಲಿ ಪ್ರತಿ ಕುಟುಂಬದ ಆಶ್ರಯವಾಗಿದ್ದ ಸೈಕಲ್ ಬಳಕೆಯು ಮತ್ತೆ ಮುನ್ನಲೆಗೆ ಬರುತ್ತಿದೆ. ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾದಲ್ಲಿ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದ ಪೋಲಿಶ್ ಸೋಷಿಯಲ್ ಸೈಂಟಿಸ್ಟ್÷ಪ್ರೊ. ಲೆಸ್‌ಜೆಕ್ ಸಿಬಿಲ್ಸಿ÷್ಕ ಅವರು ಮೊಟ್ಟಮೊದಲು ತಮ್ಮ ಸೋ಼ಷಿಯಾಲಾಜಿ ತರಗತಿ ವಿದ್ಯಾರ್ಥಿಗಳೊಂದಿಗೆ ಸೇರಿ ಈ ಪರಿಸರ ಸ್ನೇಹಿಯಾಗಿರುವ ಸೈಕಲ್‌ನ ಮಹತ್ವ ಮತ್ತು ವಿಶೇಷತೆಯನ್ನು ಅಮೇರಿಕಾ ದೇಶದ ಜನರಲ್ಲಿ ತಿಳಿಸಲಿ ಜಾಗೃತಿಯನ್ನೇ ಆರಂಭಿಸಿದರು.
ದೈಹಿಕ ಕಸರತ್ತು ನೀಡುಚ ಮತ್ತು ಪರಿಸರ ಸ್ನೇಹಿ ಸೈಕಲ್
೨೦೧೫ ರಲ್ಲಿ ಹಮ್ಮಿಕೊಂಡ ಸೈಕಲ್ ಅಭಿಯಾನಕ್ಕೆ ತುರ್ಕಮೇನಿಸ್ಥಾನ ಮತ್ತು ಇತರ ೫೬ ರಾಷ್ಟçಗಳಿಂದ ಸಕರಾತ್ಮಕ ಬೆಂಬಲ ದೊರೆತು ಮುಂದೆ ಜಗತ್ತಿನ ವಿವಿಧ ರಾಷ್ಟçಗಳೆಡೆ ಜಾಗೃತಿ ಪಸರಿತು. ಮುಂದೆ ಏಪ್ರೀಲ್ ೧೨, ೨೦೧೮ ರಂದು ಅಂತಿಮವಾಗಿ ವಿಶ್ವಸಂಸ್ಥೆಯು ವಿಶೇಷ ಗೊತ್ತುವಳಿಯನ್ನು ಪಾಸು ಮಾಡಿ ಪ್ರತಿವರ್ಷ ಜೂನ್ ೩ ರಂದು ಜಗತ್ತಿನಾದ್ಯಂತ ‘ವಿಶ್ವ ಸೈಕಲ್ ದಿನ ’ ವನ್ನಾಗಿ ಆಚರಿಸುವಂತೆ ಕರೆ ಕೊಟ್ಟಿತು. ಇಂದು ಒಟ್ಟು ೧೯೩ ರಾಷ್ಟ್ರಗಳು ಸೈಕಲ್ ದಿನಾಚರಣೆಯನ್ನು ಆಚರಿಸುತ್ತಿವೆ.
ಈ ದಿನದ ಆಚರಣೆಯ ಪ್ರಮುಖ ಉದ್ಧೇಶವೆಂದರೆ ಸೈಕಲ್ ಎಂಬುದು ಎಲ್ಲ ವರ್ಗದವರ ಪಾಲಿಗೆ ಆಶಾಕಿರಣವಾಗಿದ್ದು, ಅಗ್ಗದ ದರದಲ್ಲಿ ಕೊಂಡು ತಮ್ಮ ಕೆಲಸ-ಕಾರ್ಯಗಳನ್ನು ನಿರ್ವಹಿಸಲು ಮತ್ತು ಮಾನವನ ದೈಹಿಕ ಕಸರತ್ತಿಗೆ ಅನುಕೂಲಕರ. ಅದರಲ್ಲೂ ವಿಶೇಷವಾಗಿ ಅತಿ ಅಮೂಲ್ಯವಾದ ಪರಿಸರಕ್ಕೆ ಹಾನಿ ಮಾಡದೇ ಪರಿಸರ ಸ್ಬೇಹಿ ಎಂಬುದನ್ನು ತಿಳಿಸುವುದಾಗಿದೆ.
ನೋ ವೆಹಿಕಲ್ ಓನ್ಲಿ ಸೈಕಲ್ ಎಂಬ ಜಾಗೃತಿ ಮೂಡಲಿ


ವಿಶ್ವದಾದ್ಯಂತ ಜೂನ್ ೩ ರಂದು ಸೈಕಲ್ ದಿನಾಚರಣೆಯನ್ನು ಆಚರಿಸುವ ಮೂಲಕ ‘ಸೈಕಲ್’ ನ ಮಹತ್ವವನ್ನು ಸಾರುತ್ತಾ, ಬಡವರಿಂದ ಹಿಡಿದು ಎಲ್ಲ ವರ್ಗದ ಜನರಿಗೆ ಸವಾರಿ ಮಾಡಬೇಕೆಂಬ ಬಯಕೆಯನ್ನು ಈಡೇರಿಸಬಲ್ಲ ಅಗ್ಗದ ಸವಾರಿ ಎಂದರೆ ಅದುವೇ ಸೈಕಲ್. ಅದರ ಜೊತೆಗೆ ಆಧುನಿಕತೆ ಮತ್ತು ವಿಜ್ಞಾನ-ತಂತ್ರಜ್ಞಾನ, ಕೈಗಾರಿಕೆಗಳ ಅಭಿವೃದ್ಧಿಯ ಹೆಸರಿನಲ್ಲಿ ಮತ್ತು ದಿನದಿಂದ ದಿನಕ್ಕೆ ಮಿತಿಮೀರುತ್ತಿರುವ ವಾಹನಗಳ ಬಳಕೆಯಿಂದ ಇಡೀ ಪರಿಸರವೇ ಕಲುಷಿತಗೊಳ್ಳುತ್ತಿದೆ. ಇದರಿಂದ ಪೆಟ್ರೋಲ್, ಡಿಸೆಲ್‌ನಂತಹ ನೈಸರ್ಗಿಕ ಸಂಪನ್ಮೂಲಗಳು ಖಾಲಿಯಾಗುತ್ತಿವೆ ಮತ್ತು ದುಬಾರಿಯಾಗುತ್ತಿವೆ. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ ವಿಶ್ವಸಂಸ್ಥೆಯು ವಿಶ್ವ ಸೈಕಲ್ ದಿನದ ಆಚರಿಸುವಂತೆ ಘೋಷಿಸಿತು.
ಈ ದಿನದ ಆಚರಣೆ ಇರುವ ಕಾರಣಗಳು ಅನೇಕ. ಜನರಿಗೆ ದೈಹಿಕ ವ್ಯಾಯಾಮದ ಜೊತೆಗೆ ರಸ್ತೆ ಸುರಕ್ಷತಾ ಕ್ರಮಗಳನ್ನು ಮತ್ತು ಸರಳ ಜೀವನದ ಬಗೆಗೆ ತಿಳಿಹೇಳುವುದು. ಶಾಲೆ-ಕಾಲೇಜುಗಳಲ್ಲಿ ಎನ್,ಎಸ್,ಎಸ್, ಇಕೋ ಕ್ಲಬ್ ಮತ್ತು ಪರಿಸರಾತ್ಮಕ ಜಾಗೃತಿ-ಅಭಿಯಾನ-ಜಾಥಾದಂತಹ ಸಾಮಾಜಿಕ ಚಟುವಟಿಕೆಗಳನ್ನು ಹಮ್ಮಿಕೊಂಡು ವಿದ್ಯಾರ್ಥಿ-ಸಾರ್ವಜನಿಕರಲ್ಲಿ ಸೈಕಲ್ ಬಳಕೆಯ ಕುರಿತು ಜಾಗೃತಿ ಮೂಡಿಸುವುದೇ ಆಗಿದೆ.
ಆಧುನಿಕತೆಯಿಂದ ಬಡವರ ಆಶಾಕಿರಣವಾಗಿದ್ದ ಸೈಕಲ್ ಮಾಯ
ಅದರಲ್ಲೂ ವಿಶೇಷವಾಗಿ ಕೋವಿಡ್-೧೯ ನಂತಹ ಈ ಕಾಲಘಟ್ಟದಲ್ಲಿ ಒಬ್ಬಗೊಬ್ಬರು ಕೂಡಿ ಚಲಿಸದಂತೆ, ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಬೇಕಾಗಿರುವದರಿಂದ ಈ ಸೈಕಲ್ ಎಂಬ ವ್ಯಕ್ತಿ ಚಾಲಿತ ಚಲಿಸುವ ವಾಹನವು ಮಹತ್ವವನ್ನು ಪಡೆದುಕೊಂಡಿದೆ. ಇಂದು ಶೇಕಡಾ ೧೨.೪% ಜನರು ಸೈಕಲ್ ಬಳಸುತ್ತಿದ್ದಾರೆ. ಡೆನ್ಮಾರ್ಕ ದೇಶದಲ್ಲಿ ಪರಿಸರ ಸಂರಕ್ಷಣೆಗಾಗಿ ಪ್ರತಿ ೧೦ ಜನರಲ್ಲಿ ೯ ಜನರು ಸೈಕಲ್ ಬಳಸುತ್ತಿರುವದು ಕಂಡರೆ ಅಲ್ಲಿನ ಜನರ ಪರಿಸರಾತ್ಮಕ ಪ್ರಜ್ಞೆಯನ್ನು ಎತ್ತಿ ತೋರಿಸುತ್ತದೆ. ಜಗತ್ತಿನೆಲ್ಲೆಡೆ ಸರಿ ಸುಮಾರು ಆಧುನಿಕತೆ ಹೆಚ್ಚಿದಂತೆ ಸೈಕಲ್ ನಮ್ಮಿಂದ ಕಣ್ಮರೆಯಾಗುತ್ತಿವೆ. ಇನ್ನು ನಮ್ಮ ಹಳ್ಳಿಗಾಡಿನ ಜನರು ಜಾತ್ರೆಯಂತಹ ಸಂದರ್ಭಗಳಲ್ಲಿ ಸೈಕಲ್ ರೇಸ್ ಆಯೋಜಿಸಿ ಈ ಸೈಕಲ್ ನ ಬಳಕೆ ಬಗೆಗೆ ಜಾಗೃತಿ ಮೂಡಿಸುತ್ತಿರುವದು ಕೊಂಚ ಸಂತೋಷದ ವಿಷಯ. ಆದರೆ ದುರಾದೃಷ್ಟವೆಂದರೆ ಇಂದು ಜನರ ಆದಾಯ ಮತ್ತು ಜೀವನಮಟ್ಟ ಸುಧಾರಿಸಿದಂತೆ ಜನರ ಆಶೋತ್ರರಗಳು ಹೆಚ್ಚಾಗುತ್ತಾ ಸೈಕಲ್‌ನಿಂದ ಬೈಕ್, ಕಾರ್… ಹೀಗೆ ಅತ್ಯಾಧುನಿಕ ಯಂತ್ರಚಾಲಿತ ವಾಹನಗಳತ್ತ ಮುಖ ಮಾಡುತ್ತಿರುವುದು ಈ ಸೈಕಲ್ ಮಾಯವಾಗುತ್ತಿರುವದು ಕಳವಳಕಾರಿ ಸಂಗತಿಯಾಗಿದೆ.
ಸೈಕಲ್ ಸವಾರಿಯಿಂದ ಪ್ರಯೋಜನಗಳು
ಈ ಸೈಕಲ್ ಸವಾರಿ ಮಾಡುವುದರಿಂದ ವ್ಯಕ್ತಿಗೆ ದೈಹಿಕ ಕಸರತ್ತು ನೀಡುವ ಮತ್ತು ಹೃದಯ ಸಂಬಂಧಿ ರೋಗಗಳು ಬರದಂತೆ ತಡೆಯುವ ಮತ್ತು ಗುಣಪಡಿಸುವುದು. ಇಡೀ ಶರೀರದ ಅವಯವಗಳಿಗೆ ಅಗತ್ಯ ವ್ಯಾಯಾಮ ನೀಡಬಲ್ಲ ಏಕೈಕ ಸಾಧನವಾಗಿದ್ದು, ಮಾನಸಿಕ ಒತ್ತಡದಿಂದ ದೂರ ಮಾಡುತ್ತಾ ಮನುಷ್ಯನಿಗೆ ಉತ್ತಮ ಆರೋಗ್ಯವನ್ನು ನೀಡುತ್ತದೆ. ಮಕ್ಕಳು ದೂರದ ಸ್ಥಳದಲ್ಲಿರುವ ಶಾಲೆ-ಕಾಲೇಜುಗಳಿಗೆ ಹೋಗಲು ಉಪಯೋಗಿಸುವ ಸಾಧನವಾಗಿದೆ.
ಕೊನೆಯ ನುಡಿ
ಖ್ಯಾತ್ ಸೈಕ್ಲಿಷ್ಟ್ ಫಿಲ್ ಕಿಯೋಗ್ಯಾಮ್ ರವರ ಪ್ರಕಾರ, “ಸೈಕಲ್ ಸವಾರಿ ಮಾಡುವುದೇಂದರೆ ಅದು ನಮ್ಮ ಮೂಲ ಸಂಪ್ರದಾಯವನ್ನು ಉಳಿಸಿಕೊಂಡು ಹೋಗುವುದು. ಅದು ನಮ್ಮ ಪರಿಸರ ಸ್ನೇಹಿ ಮತ್ತು ಮಿತ ಖರ್ಚಿನ ಚಲಿಸುವ ಸಾಧನವಾಗಿದೆ ಎಂದು ಹೇಳಿದ್ದಾರೆ. ಸಾಮಾನ್ಯ ಜನೋಪಯೋಗಿ ಸಾಧನವಾಗಿರುವ ಈ ಸೈಕಲ್ ಇಂದಿನ ಕಾಲದಲ್ಲಿ ಮರುಬಳಕೆ ಮಾಡಬೇಕಾಗಿರುವ ಅಗತ್ಯತೆಯಿದ್ದು, ಪರಿಸರದಲ್ಲಿ ಸ್ವಚ್ಛತೆ, ಸ್ವಾಸ್ಥ್ಯ ಮತ್ತು ಉತ್ತಮ ಪರಿಸರದಂತಹ ವಾತಾವರಣವನ್ನು ನಿರ್ಮಿಸಬೇಕಾಗಿರುವುದು ಇಂದಿನ ಅಗತ್ಯತೆಗಳಲ್ಲೊಂದು. ಸಮತೋಲಿತ ಮತ್ತು ಸುಸ್ಥಿರವಾದ ಪರಿಸರವನ್ನು ಕಾಯ್ದುಕೊಳ್ಳಲು ಈ ಸೈಕಲ್ ಬಳಕೆಯು ಅತಿ ಮುಖ್ಯವಾಗಿದೆ. ಇದು ಒಂದು ಪರಿಸರ ಸ್ನೇಹಿಯಾಗಿರುವ ಸವಾರಿಯಾಗಿದ್ದು, ಇದರಿಂದ ಯಾವುದೇ ಪ್ರಕೃತಿ-ಪರಿಸರ ಮತ್ತು ಇಡೀ ಮಾನವ ಸಂಕುಲಕ್ಕೆ ಹಾನಿಯಿಲ್ಲವೆಂಬುದು ವಿಶೇಷ. ಸೈಕಲ್ ನಮ್ಮ ಸಂಪ್ರದಾಯದ ಪ್ರತೀಕವಾಗಿದೆ. ಸೈಕಲ್ ಸವಾರಿ ಮಾಡಿ, ದುಬಾರಿ ಮತ್ತು ಬರಿದಾಗುವ ಸಂಪನ್ಮೂಲ ಇಂಧನವನ್ನು ಉಳಿಸುವ ಕಾರ್ಯಕ್ಕೆ ಕೈ ಜೋಡಿಸಿ..

BIJAPUR NEWS bjp public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಉದಯರಶ್ಮಿ ಇಂದಿನ ದಿನಪತ್ರಿಕೆ ಜೂನ್ 04, 2026

ತಮಿಳುನಾಡು ರಾಜಕೀಯ ಚದುರಂಗದಾಟದಲ್ಲಿ ಹೊಸ ತಂತ್ರ

ಮುಳ್ಳಿನ ಹಾದಿಯಲಿ ಹೂ ನಗೆಯ ಪಯಣ

ಸದೃಢ ಆರೋಗ್ಯಕ್ಕೆ ಸೈಕ್ಲಿಂಗ್ ಅಗತ್ಯ :ರಾಜು ಬಿರಾದಾರ

Add A Comment
Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Helldivers
  • Typora
  • Uncategorized
  • Wemod
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಉದಯರಶ್ಮಿ ಇಂದಿನ ದಿನಪತ್ರಿಕೆ ಜೂನ್ 04, 2026
    In ದಿನಪತ್ರಿಕೆ
  • ತಮಿಳುನಾಡು ರಾಜಕೀಯ ಚದುರಂಗದಾಟದಲ್ಲಿ ಹೊಸ ತಂತ್ರ
    In ವಿಶೇಷ ಲೇಖನ
  • ಮುಳ್ಳಿನ ಹಾದಿಯಲಿ ಹೂ ನಗೆಯ ಪಯಣ
    In ವಿಶೇಷ ಲೇಖನ
  • ಸದೃಢ ಆರೋಗ್ಯಕ್ಕೆ ಸೈಕ್ಲಿಂಗ್ ಅಗತ್ಯ :ರಾಜು ಬಿರಾದಾರ
    In (ರಾಜ್ಯ ) ಜಿಲ್ಲೆ
  • ತಾಯಿ-ತಂದೆ ಋಣ ತೀರಿಸುವುದು ಅಸಾಧ್ಯ :ಪ್ರೊ.ಕಡ್ಡಿ
    In (ರಾಜ್ಯ ) ಜಿಲ್ಲೆ
  • ತಂಬಾಕು ಸೇವನೆ ಜೀವಕ್ಕೆ ಆಪತ್ತು :ಡಾ.ತರನ್ನುಮ್
    In (ರಾಜ್ಯ ) ಜಿಲ್ಲೆ
  • ಯುವಕರು ದುಶ್ಚಟಗಳಿಂದ ದೂರವಿದ್ದು ಸ್ವಾಸ್ಥ್ಯ ಸಮಾಜ ನಿರ್ಮಿಸಿ
    In (ರಾಜ್ಯ ) ಜಿಲ್ಲೆ
  • ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ ಪಾಸ್: ಅರ್ಜಿ ಆಹ್ವಾನ
    In (ರಾಜ್ಯ ) ಜಿಲ್ಲೆ
  • ನೂತನ ಡಿಡಿಪಿಯು ಉಪ್ಪಾರ ರಿಗೆ ಸನ್ಮಾನ
    In Uncategorized
  • ೬೦ ದಿನಗಳ ಬೇಸಿಗೆ ತರಬೇತಿ ಶಿಬಿರ ಮುಕ್ತಾಯ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.