ಉದಯರಶ್ಮಿ ದಿನಪತ್ರಿಕೆ
ಬೂದಿಹಾಳ ಡೋಣ(ದೇವರಹಿಪ್ಪರಗಿ): ಗುರು ಮತ್ತು ಶಿಷ್ಯರ ಸಂಬಂಧ ಜಗತ್ತಿನ ಶ್ರೇಷ್ಠ ಹಾಗೂ ದೊಡ್ಡ ಸಂಬಂಧವಾಗಿದೆ ಎಂದು ದೇವೂರ ಹಿರೇಮಠದ ಮರುಳಾರಾಧ್ಯ ಶಿವಾಚಾರ್ಯರು ಹೇಳಿದರು.
ತಾಲ್ಲೂಕಿನ ಬೂದಿಹಾಳ ಡೋಣ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಭಾನುವಾರ ಜರುಗಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿ, ವಿದ್ಯಾರ್ಥಿನೀಯರ ಗುರುವಂದನಾ ಹಾಗೂ ಅಭಿನಂದನಾ ಸಮಾರಂಭದ ಸಾನಿಧ್ಯ ವಹಿಸಿ ಮಾತನಾಡಿದರು.
ಜಗತ್ತಿನಲ್ಲಿ ಗುರುವಿಗೆ ಉನ್ನತ ಸ್ಥಾನವಿದೆ. ಇಲ್ಲಿ ಗುರು ಶಿಷ್ಯರ ಸ್ನೇಹ ಸಂಬಂಧ ಅತ್ಯಂತ ಪವಿತ್ರವಾದದು ಎಂದರು.
ಕೆರೂಟಗಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯಶಿಕ್ಷಕ ಎಸ್.ಎಸ್.ಸಾತಿಹಾಳ ಮಾತನಾಡಿ, ಅಕ್ಷರಜ್ಞಾನ ನೀಡಿದ ಗುರುಗಳ ಉಪಕಾರವನ್ನು ಸ್ಮರಿಸುವ ಮೂಲಕ ಗುರುವಂದನಾ ಕಾರ್ಯಕ್ರಮ ಜರುಗುತ್ತಿರುವು ಅತ್ಯಂತ ಶ್ಲಾಘನೀಯ ಎಂದರು.
ಶಿಕ್ಷಕರಾದ ಜಿ.ಬಿ.ಹೊಕ್ಕುಂಡಿ, ಶೇಖಸಾಬ್ ಪಾನಪರೋಶ, ಎನ್.ಎಸ್.ಸಜ್ಜನ, ಪಿ.ಸಿ.ತಳಕೇರಿ, ಆರ್.ಜಿ.ಬನಸಿ, ಬಿ.ಎಂ.ಕಠಾರೆ, ಶಿವನಗೌಡ ಪಾಟೀಲ, ವಿ.ಎಸ್.ಅಗ್ನಿ, ಪಿ.ಎಸ್.ಓತಿಹಾಳ, ಎಸ್.ಎಸ್.ಇನಾಮದಾರ, ಜಿ.ಎ.ಪಾಟೀಲ, ಎಂ.ಎನ್.ಮಯೂರ, ಪಿ.ಆಯ್.ಕಾಳೆ, ಶಕುಂತಲಾ ಗುಬ್ಬೇವಾಡ ಮಾತನಾಡಿದರು. ಎಸ್‌ಡಿಎಮ್‌ಸಿ ಅಧ್ಯಕ್ಷ ಗುರುಬಾಳಯ್ಯ ಹಿರೇಮಠ ಅಧ್ಯಕ್ಷತೆ ವಹಿಸಿದ್ದರು. ಭೂದಾನಿ ದಿ.ಬಸವಂತ್ರಾಯಗೌಡ ಬಿರಾದಾರ ಹಾಗೂ ಎಸ್‌ಡಿಎಮ್‌ಸಿ ಮಾಜಿಅಧ್ಯಕ್ಷ ದಿ.ಗುರಣ್ಣ ಸಾವಳಗಿ ಅವರಿಗೆ ಗೌರವ ಸಮರ್ಪಣೆ ಜರುಗಿತು.
ಪ್ರಕಾಶ ಪಾಟೀಲ, ಮಹಾದೇವ ಸತ್ಯಪ್ಪಗೋಳ, ಮಹಾಂತೇಶ ಬಿರಾದಾರ, ಭೀರಲಿಂಗ ಪೂಜೇರಿ, ಈರಣ್ಣ ಇಜೇರಿ, ಅನೀಲ ಬಿರಾದಾರ, ಮಂಜುನಾಥ ಸಾವಳಗಿ, ನಾನಾಗೌಡ ಬಿರಾದಾರ, ಶಿವರಾಜ ತಾಳಿಕೋಟಿ, ಸುಧಾಕರ ಬಿರಾದಾರ, ಈರಣ್ಣ ಬಡಿಗೇರ, ಅಂಬರೀಷ್ ಮಸಬಿನಾಳ, ನಾಗೇಶ ದೇವತಗಲ್ ಸೇರಿದಂತೆ ಇತರರು ಇದ್ದರು.

