ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ಯಜ್ಞ, ಯಾಗಾದಿಗಳು, ಅದ್ದೂರಿ, ಆಡಂಬರದ ಖರ್ಚುಗಳ ಮೂಲಕ ಜನಸಾಮಾನ್ಯರಿಗೆ ನಿಲುಕದ ಗಗನ ಕುಸುಮವಾಗಿದ್ದ ದೇವರ ಅಸ್ತಿತ್ವವನ್ನು ೧೨ ನೇ ಶತಮಾನದ ಬಸವಾದಿ ಶರಣರು ತಮ್ಮ ನಡೆ, ನುಡಿ, ವಚನಗಳ ಮೂಲಕ ಸರಳಗೊಳಿಸಿದರು ಎಂದು ಮಹಾಮನೆ ಬಳಗದ ಅಧ್ಯಕ್ಷರಾದ ಎಸ್.ಎ.ಬೇವಿನಗಿಡದ ಹೇಳಿದರು.
ಪಟ್ಟಣದ ವಿಶ್ವಕರ್ಮ ಬಡಾವಣೆಯಲ್ಲಿರುವ ಮಹಾಬಲೇಶ್ವರ ಗಡೇದ ಅವರ ಮನೆಯಲ್ಲಿ ಹಮ್ಮಿಕೊಂಡಿದ್ದ ೧೦೫೭ ನೇ “ಮಹಾಮನೆ” ಕಾರ್ಯಕ್ರಮದಲ್ಲಿ ಶರಣ ಗುರುಪುರದ ಮಲ್ಲಯ್ಯನವರ ವಚನ ವಿಶ್ಲೇಷಿಸಿ ಅವರು ಮಾತನಾಡಿದರು.
ಕನ್ನಡದ ನೆಲದಲ್ಲಿ ಅಚ್ಚಳಿಯದ ತಿರುವು ಪಡೆದುಕೊಂಡ ಯುಗ. ಸಾಮಾಜಿಕ, ಧಾರ್ಮಿಕ ಚಿಂತನೆಗಳಿಗೆ ತಿರುವು ಕೊಟ್ಟ ಕಾಲ ೧೨ನೇ ಶತಮಾನ. ಶ್ರೀಮಂತರ ಸ್ವತ್ತಾಗಿದ್ದ ದೇವರು, ಆಚಾರ, ವಿಚಾರ, ಸಂಪ್ರದಾಯ, ಆಧ್ಯಾತ್ಮಿಕ ನೆಲೆಯನ್ನು ಶರಣರು ಬದಲಿಸಿದರು. ಏನೊಂದೂ ಓದದ ಜನ ಸಾಮಾನ್ಯರು, ಮಹಿಳೆಯರು ಶ್ರೇಷ್ಠ ಮಟ್ಟದ ವಚನಗಳನ್ನು ಬರೆದರು. ಬರೆದಂತೆಯೇ ತಮ್ಮ ಜೀವನ ರೂಪಿಸಿಕೊಂಡರು ಎಂದು ಹೇಳಿದರು.
ಈ ವೆಳೆ ಶರಣಬಸಪ್ಪ ಗಡೇದ ಮಾತನಾಡಿದರು. “ಕಾಯಕ ಯೋಗಿ” ಪ್ರಶಸ್ತಿ ಪಡೆದ ಮಹಾಬಲೇಶ್ವರ ಗಡೇದ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ದಾನಪ್ಪ ನಾಗಠಾಣ, ಹಸಿರು ತೋರಣ ಬಳಗದ ಅಧ್ಯಕ್ಷ ಅಮರೇಶ ಗೂಳಿ, ಎನ್.ಎಸ್.ಹಿರೇಮಠ, ಬಸವರಾಜ ನಾಲತವಾಡ, ಬಸವರಾಜ ಕೋರಿ, ಎಸ್.ಎಚ್.ಪಾಟೀಲ, ಎಚ್.ಬಿ.ದಳವಾಯಿ, ಸಂಗಣ್ಣ ಕಂಚ್ಯಾಣಿ, ಎಸ್.ಆರ್.ಗೌಡರ, ಎಂ.ಎಸ್.ಬಿರಾದಾರ, ಚಂದ್ರಶೇಖರ ಪ್ಯಾಟಿಗೌಡರ, ಶ್ರೀಶೈಲ ಕತ್ತಿ, ಕೆ.ಆರ್.ಕಾಮಟೆ, ಬಿ.ಎಂ.ಪಲ್ಲೇದ, ಎನ್.ಎಸ್.ಮಠ, ಜಿ.ಆರ್.ಕಲಬುರ್ಗಿ, ಈರಣ್ಣ ಶಿರವಾಳ, ಅಶೋಕ ರೇವಡಿ, ನಾಗಭೂಷಣ ನಾವದಗಿ, ರವಿ ಗೂಳಿ, ಶ್ರೀ ಶೈಲ ಮರೋಳ, ಅಮರೇಶ ಐಹೊಳೆ, ಬಸಲಿಂಗಪ್ಪ ಕಟ್ಟಿ, ಎಂ.ಬಿ. ಪಾಟೀಲ, ದೇವೇಂದ್ರ ಪತ್ತಾರ, ಡಾ.ಬೋರಮ್ಮ ಪೊಲೀಸ್ ಪಾಟೀಲ, ಸುಲೋಚನ ಸಜ್ಜನ ಮತ್ತಿತರರು ಇದ್ದರು. ಸಂಗಮೇಶ ಶಿವಣಗಿ, ಬಾಪುಗೌಡ ಪಾಟೀಲ, ಎನ್.ಆರ್.ಮೊಕಾಶಿ ಮತ್ತು ಎಸ್.ಎಸ್.ಹುನಗುಂದ ಬಸವ ನೆನಹು, ಪ್ರಾರ್ಥನೆ ನಡೆಸಿದರು. ಮಲ್ಲಿಕಾರ್ಜುನ ಗಡೇದ ಸ್ವಾಗತಿಸಿದರು. ಬಿ.ಎಸ್.ಮೇಟಿ ನಿರೂಪಿಸಿದರು.

