ಎಕ್ಸಲಂಟ್ ಸಮೂಹ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ ಚೇರಮನ್ ಬಸವರಾಜ್ ಕೌಲಗಿ ವಿಶ್ವಾಸ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ತನ್ನ ಪರಿಣಾಮಕಾರಿ ಬೋಧನೆ ಹಾಗೂ ಅತ್ಯುತ್ತಮ ಫಲಿತಾಂಶದ ಮೂಲಕ ಮನೆ ಮಾತಾಗಿರುವ ಸಂಸ್ಥೆ ಇದೀಗ ನೀಟ್ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕಗಳನ್ನು ಪಡೆದುಕೊಂಡು ಮತ್ತೊಂದು ಮೈಲಿಗಲ್ಲು ನೆಡಲು ಸಜ್ಜಾಗಿದೆ ಎಂದು ಎಕ್ಸಲಂಟ್ ಸಮೂಹ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ ಚೇರಮನ್ ಬಸವರಾಜ್ ಕೌಲಗಿ ಹೇಳಿದರು.
ಗುರುವಾರ ಪತ್ರಿಕೆಯೊಂದಿಗೆ ಮಾಹಿತಿ ಹಂಚಿಕೊಂಡ ಅವರು, ಈ ಬಾರಿ ನೀಟ್ ಪರೀಕ್ಷೆಯ ನಂತರದಲ್ಲಿ ವಿದ್ಯಾರ್ಥಿಗಳು ಕೀ ಉತ್ತರವನ್ನು ಪರಿಶೀಲಿಸಿಕೊಂಡಿದ್ದು ನಿರೀಕ್ಷೆಗಳು ಗರಿಗೆದರಿವೆ. ಎಕ್ಸಲಂಟ್ ವಿಜ್ಞಾನ ಪದವಿ ಪೂರ್ವ ಕಾಲೇಜು ಪ್ರಾರಂಭಗೊಂಡ ಮರು ವರ್ಷದಿಂದಲೇ ತನ್ನ ಸಾಧನೆಯ ಪತಾಕೆಯನ್ನು ಸಂಸ್ಥೆಯು ಹಾರಿಸುತ್ತಲೇ ಬಂದಿದೆ. ಶ್ರೀಧರ ದೊಡಮನಿ ಎನ್ನುವ ವಿದ್ಯಾರ್ಥಿಯು ನೀಟ್ ಹಾಗೂ ಕೆ-ಸಿಇಟಿ ನಲ್ಲಿ ರಾಜ್ಯಕ್ಕೆ ಮೊದಲ ರ‍್ಯಾಂಕ್ ಪಡೆಯುವ ಮೂಲಕ ಸಾಧನೆಯ ಹಾದಿಯಲ್ಲಿ ಮೊದಲ ಹೆಜ್ಜೆ ಗಟ್ಟಿಯಾಗಿ ಊರಿದನು. ತದ ನಂತರದ ಬ್ಯಾಚ್‌ಗಳಲ್ಲಿ ಬಂದಂತ ಅತ್ಯುತ್ತಮ ಫಲಿತಾಂಶವು ಜನತೆಗೆ ಎಕ್ಸಲಂಟ್ ಮೇಲಿದ್ದ ನಂಬಿಕೆಯನ್ನು ಇನ್ನಷ್ಟು ಗಟ್ಟಿಗೊಳಿಸಿತು ಎಂದರು.
ಅದೇ ರೀತಿ ಈ ಬಾರಿಯ ನೀಟ್ ಪರೀಕ್ಷೆಯನ್ನು ಮುಗಿಸಿದ ವಿದ್ಯಾರ್ಥಿಗಳ ಕೀ ಉತ್ತರಗಳಿಗೆ ಅನುಗುಣವಾಗಿ ನೋಡಿದರೆ ಚನ್ನವೀರೇಶ ಕುಂಬಾರ ೭೦೦, ಸಲ್ಮಾನ ಗೋಡಿಹಾಳ ೬೮೫, ಸಾಗರ ಬನಹಟ್ಟಿ ೬೮೨, ಗಂಗಾಧರ ಮುತ್ತಗಿ ೬೮೦, ಅನುಷ್ಕಾ ೬೬೨, ಸುಮಿತ ಎ ಪಿ ೬೫೭, ಬಸವನಗೌಡ ಬೈರವಾಡಗಿ ೬೪೫, ಪ್ರತೀಕ ಚವ್ಹಾಣ ೬೪೦, ಸ್ವಾತಿ ಮಲೆದ ೬೦೦ ಅಂಕಗಳನ್ನು ಪಡೆದುಕೊಳ್ಳುವ ನಿರೀಕ್ಷೆ ಇದ್ದು ಕಳೆದ ಬಾರಿಗಿಂತ ಈ ಬಾರಿ ಫಲಿತಾಂಶ ಇನ್ನು ಹೆಚ್ಚಾಗುವ ನಂಬಿಕೆ ಇದೆ ಎಂದು ಹೇಳಿದರು.
ಈ ಬಾರಿಯೂ ನೀಟ್ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶದ ನಿರೀಕ್ಷೆಯಲ್ಲಿದ್ದು ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ರ‍್ಯಾಂಕ್‌ಗಳನ್ನು ನೀಡುವ ಮೂಲಕ ಪಾಲಕರು ನಮ್ಮ ಮೇಲೆ ಇಟ್ಟಿರುವ ನಂಬಿಕೆಯನ್ನು ಗಟ್ಟಿಗೊಳಿಸುತ್ತೇವೆ ಎಂದು ಎಕ್ಸಲಂಟ್ ಸಮೂಹ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ ಚೇರಮನ್ ಬಸವರಾಜ್ ಕೌಲಗಿ ವಿಶ್ವಾಸ ವ್ಯಕ್ತಪಡಿಸಿದರು.

