ಉದಯರಶ್ಮಿ ದಿನಪತ್ರಿಕೆ
ತಿಕೋಟಾ: ಬಹು ಭಾಷಾ ಕಥಾ ಸಾಹಿತ್ಯ ಪರಂಪರೆಯ ಮತ್ತು ವಿವಿಧ ಭಾಷೆಯ ಕಥಾ ಸಾಹಿತ್ಯ ವೈಭವವನ್ನು ಅರಿತುಕೊಳ್ಳುವುದು ಮುಖ್ಯ. ಅದಕ್ಕಾಗಿ ಪಟ್ಟಣದ ಬಿಎಲ್‌ಡಿಇ ಸಂಸ್ಥೆಯ ನೂತನ ಕಲಾ ಮಹಾವಿದ್ಯಾಲಯದಲ್ಲಿ ಮೇ.೧೨ ರಂದು ರಾಷ್ಟ್ರೀಯ ವಿಚಾರ ಸಂಕಿರಣ ಏರ್ಪಡಿಸಲಾಗಿದೆ ಎಂದು ಐ.ಕ್ಯೂ.ಎ.ಸಿ ಸಂಯೋಜಕ ಬಿ ಎಸ್ ಬೆಳಗಲಿ ಹೇಳಿದರು.
ಗುರುವಾರ ಪಟ್ಟಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾರತವು ವೈವಿದ್ಯೆಮಯ ಭಾಷೆ, ಸಂಸ್ಕೃತಿ, ಸಾಹಿತ್ಯ ಪರಂಪರೆಯ ನೆಲೆಯಾಗಿದೆ. ವಿಶ್ವದ ಪ್ರತಿಯೊಂದು ಭಾಷೆಯು ತನ್ನದೆ ಆದ ವೈಶಿಷ್ಟತೆಗಳನ್ನು ಹೊಂದಿದೆ. ಈ ಪರಂಪರೆ ಭಾರತ ದೇಶದ ಏಕತೆಗಾಗಿ ಸಂದೇಶ ಸಾರುತ್ತದೆ ಎಂದರು.
ಕಥೆಗಳು ಕೇವಲ ಮನರಂಜನೆಯ ಸಾಧನವಲ್ಲ, ಸಮಾಜದ ದರ್ಪಣವಾಗಿಯೂ, ಚಿಂತನೆಗೆ ದಾರಿಯಾಗಿಯೂ ಕಾರ್ಯನಿರ್ವಹಿಸುತ್ತವೆ. ಈ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಲೇಖನ ಮಂಡಿಸುವವರು ಆದ್ಯಯನ ಕೇಂದ್ರಿಕರಿಸಿ ಸಂಶೋಧನಾ ಲೇಖನಗಳನ್ನು ರಚಿಸಬಹುದು. ವಿಷಯಗಳ ಜೊತೆಯಲ್ಲಿ ನಿಮ್ಮ ಆದ್ಯಯನಕ್ಕೆ ಲಭಿಸುವ ಕಥಾಸಾಹಿತ್ಯದ ಚಿಂತನೆಗಳ ಬರಹಗಳಿಗೂ ಇಲ್ಲಿ ಅವಕಾಶ ಕಲ್ಪಿಸಲಾಗುವದು. ಕಾರಣ ಈ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಾಹಿತಿಗಳು ಬಾಗವಹಿಸಬೇಕೆಂದು ತಿಳಿಸಿದರು.
ಈ ವೇಳೆ ಪ್ರಾಂಶುಪಾಲ ಪ್ರೊ ಪಿ ಎಸ್ ತೋಳನೂರ, ಪ್ರಾದ್ಯಾಪಕರಾದ ಡಾ ಎಸ್ ಎಲ್ ರಾಠೋಡ, ಡಾ. ಎಂ ಬಿ ಹೂಗಾರ, ಡಾ. ಸಂತೋಷ ನವಲಗುಂದ, ಡಾ. ಶ್ರೀನಿವಾಸ ದೊಡ್ಮನಿ, ಡಾ. ರವಿಚಂದ್ರ ವಾಲೀಕಾರ, ಡಾ. ಕೃಷ್ಣಮೂರ್ತಿ, ಎಲ್ ಬಿ ದೇಸಾಯಿ, ಜಿ ಎಂ ಕಾಂಬಳೆ, ಸುಶಾಂತ ಜವನಾರ, ಸ್ವಪ್ನಾ ಹಾಲಳ್ಳಿ, ಲಕ್ಷ್ಮಿ ಕಾತ್ರಾಳ, ಎಸ್ ಬಿ ಉಪ್ಪಾರ, ನಾಗರಾಜ ನರಳೆ, ದಯಾನಂದ ರೇಷ್ಮೀ ಮತ್ತಿತರರು ಉಪಸ್ಥಿತರಿದ್ದರು.

