ಇಂದು (ಮೇ ೮, ಶುಕ್ರವಾರ) “ಅಂತರಾಷ್ಟ್ರೀಯ ರೆಡ್ ಕ್ರಾಸ್ ದಿನ” ದ ಪ್ರಯುಕ್ತ ಈ ವಿಶೇಷ ಲೇಖನ
ಲೇಖನ
– ಮಲ್ಲಪ್ಪ. ಸಿ. ಖೊದ್ನಾಪೂರ (ತಿಕೋಟಾ)
ವಿಜಯಪುರ
ಉದಯರಶ್ಮಿ ದಿನಪತ್ರಿಕೆ
ಶ್ರೇಷ್ಠ ಹೋರಾಟಗಾರ ಮಾರ್ಟಿನ್ ಲೂಥರ್ ಕಿಂಗ್ ಅವರು, “ಐiಜಿe’s mosಣ ಠಿeಡಿsisಣeಟಿಣ ಚಿಟಿಜ uಡಿgeಟಿಣ quesಣioಟಿ is, “Whಚಿಣ ಚಿಡಿe ಥಿou ಜoiಟಿg ಜಿoಡಿ oಣheಡಿs?” ಅದನ್ನೇ ಪುರಂದರ ದಾಸರು “ಮಾನವ ಜನ್ಮ ದೊಡ್ಡದು ಅದನ್ನು ಹಾನಿ ಮಾಡಿಕೊಳ್ಳಬೇಡ, ಬದುಕಿರುವಷ್ಟು ಕಾಲದಲ್ಲಿ ಸದಾ ಸಹಾಯ ಹಸ್ತ ಬಂದವರಿಗೆ ನಿಸ್ವಾರ್ಥದಿಂದ ಮಾನವೀಯತೆ ಮೆರೆದು ಸೇವೆ ಮಾಡು ಅಂದಾಗ ನಿಮ್ಮ ಜನ್ಮ ಸಾರ್ಥಕವಾಗುತ್ತದೆ ಎಂದು ಹೇಳಿರುವುದು ನಿಜಕ್ಕೂ ಸತ್ಯವಾದ ಮಾತು. ಪ್ರವಾಹ, ಅಫಘಾತ ಮತ್ತು ಇನ್ನಿತರ ನೈಸರ್ಗಿಕ ವಿಕೋಪದಂತಹ ಸಂದರ್ಭದಲ್ಲಿ ಜೀವನ್ಮರಣದ ಮಧ್ಯೆ ಹೋರಾಟ ಮಾಡುತ್ತಿರುವ ಜೀವಿಗಳನ್ನು ರಕ್ಷಿಸಲು ಮತ್ತು ಅಗತ್ಯವಾದಲ್ಲಿ ರಕ್ತದಾನ ಮಾಡುವದರ ಮೂಲಕ ಅವರನ್ನು ಪ್ರಾಣಾಪಾಯದಿಂದ ಸಂರಕ್ಷಿಸುವುದು ರೆಡ್ ಕ್ರಾಸ್ ಘಟಕದ ಸ್ವಯಂ ಸೇವಕರ ಆದ್ಯ ಕರ್ತವ್ಯವಾಗಿದೆ. ಎಲ್ಲ ದಾನಗಳಲ್ಲಿ ಅತಿ ಶ್ರೇಷ್ಠವಾದ ರಕ್ತದಾನ ಮಾಡುವ ಮೂಲಕ ಜೀವಿಗಳ ಪ್ರಾಣವನ್ನು ಉಳಿಸಬೇಕು.
*ಆಚರಣೆಯ ಧ್ಯೇಯೋದ್ಧೇಶ: ಪ್ರತಿವರ್ಷ ಮೇ ೮ ರಂದು ಜಾಗತಿಕವಾಗಿ ರೆಡ್ ಕ್ರಾಸ್ ದಿನವನ್ನು ಆಚರಿಸಲಾಗುತ್ತದೆ. ಈ ದಿನವು ಯುದ್ಧ, ವಿಪತ್ತು ಮತ್ತು ತುರ್ತು ಸಂದರ್ಭಗಳಲ್ಲಿ ವೈದ್ಯಕೀಯ ನೆರವು ಮತ್ತು ಮಾನವೀಯ ಸೇವೆಗಳನ್ನು ಸಲ್ಲಿಸುವ ಸ್ವಯಂ ಸೇವಕರನ್ನು ಗೌರವಿಸಲು ಮತ್ತು ಆರೋಗ್ಯ, ರಕ್ತದಾನ, ವಿಪತ್ತು ನಿರ್ವಹಣೆ ಮತ್ತು ಯುದ್ಧ ಸಂದರ್ಭದಲ್ಲಿ ಜನರಿಗೆ ಅವಶ್ಯಕ ಮಾನವೀಯ ಸೇವೆ ನೀಡುವ ಬಗ್ಗೆ ಜಾಗೃತಿ ಮೂಡಿಸುವುದೇ ಈ ದಿನದ ಆಚರಣೆಯ ಪ್ರಮುಖ ಧ್ಯೇಯೋದ್ಧೇಶವಾಗಿದೆ.

*ಹಿನ್ನೆಲೆ*
೧೮೫೯ ರಲ್ಲಿ ಹೆನ್ರಿ ಡ್ಯೂನಾಂಟ್ ಅವರು ಸೋಲ್ಪರಿನೋ ಎಂಬಲ್ಲಿ ನಡೆದ ಯುದ್ಧದ ಭೀಕರತೆಯನ್ನು ಕಣ್ಣಾರೆ ಕಂಡು, ಗಾಯಗೊಂಡ ಯೋಧರಿಗೆ ಮತ್ತು ಸೈನಿಕರಿಗೆ ಸೇವೆ ಸಲ್ಲಿಸಲು ಈ ರೆಡ್ ಕ್ರಾಸ್ ಸಂಸ್ಥೆಯನ್ನು ಸ್ಥಾಪಿಸಿದರು. ಇದೇ ೧೯೮೪ ರಲ್ಲಿ ಮೊದಲ ವಿಶ್ವ ರೆಡ್ ಕ್ರಾಸ್ ದಿನವಾಗಿ ಆಚರಿಸಲ್ಪಟ್ಟಿತು. ರೆಡ್ ಕ್ರಾಸ್ ಸಂಸ್ಥೆಯಡಿಯಲ್ಲಿ ರಕ್ತದಾನ, ಪ್ರಥಮ ಚಿಕಿತ್ಸೆ, ತುರ್ತು ನೆರವು ಮತ್ತು ಮಾನವೀಯ ಆರೋಗ್ಯಕರ ಸೇವೆಗಳನ್ನು ನೀಡುತ್ತಿರುವ ಡ್ಯೂನಾಂಟ್ ಅವರಿಗೆ ೧೯೦೧ ರಲ್ಲಿ ನೊಬೆಲ್ ಪ್ರಶಸ್ತಿ ದೊರಕಿತು. ಆದ್ದರಿಂದ ಹೆನ್ರಿ ಡ್ಯೂನಾಂಟ್ ಅವರ ಜನ್ಮದಿನವಾದ ಮೇ ೮ ರಂದು ವಿಶ್ವದೆಲ್ಲೆಡೆ ರೆಡ್ ಕ್ರಾಸ್ ದಿನವನ್ನಾಗಿ ಆಚರಿಸ್ರಕಾಗುತ್ತಿದೆ.
ರೆಡ್ ಕ್ರಾಸ್ ದಿನದ ಮಹತ್ವ
ರಾಷ್ಟ್ರದ ಆರೋಗ್ಯ, ಸ್ವಾಸ್ಥ್ಯ ವನ್ನು ಕಾಪಾಡುವಲ್ಲಿ ರೆಡ್ ಕ್ರಾಸ್‌ನ ಪಾತ್ರ ಅನನ್ಯವಾಗಿದೆ. ಅದರಲ್ಲಿ ವಿಶೇಷವಾಗಿ ರಕ್ತದಾನ ಮಾಡಿ ಬದುಕಿಗೊಂದು ಸಾರ್ಥಕತೆ ಹೊಂದುತ್ತಾ ಮಾನವೀಯತೆಯನ್ನು ಮೆರೆಯಬೇಕು. ಸಮಾಜಕ್ಕಾಗಿ ಏನನ್ನಾದರೂ ಕೊಡುಗೆ ನೀಡಿ ಋಣ ತೀರಿಸಬೇಕೆಂದು ಸಲಹೆ ನೀಡಿದರು. ನೈಸರ್ಗಿಕ ವಿಕೋಪಗಳಂತಹ ಸಂದರ್ಭಗಳಲ್ಲಿ ರೆಡಕ್ರಾಸ್ ಸ್ವಯಂ ಸೇವಕರು ಸೇವೆಗೈಯುತ್ತಾ ಜನ, ಜಾನುವಾರು ಮತ್ತು ಸಾರ್ವಜನಿರ ಆಸ್ತಿ-ಪಾಸ್ತಿ ಸಂರಕ್ಷಿಸುವಲ್ಲಿ ಪ್ರಮುಖ ಪಾತ್ರವಹಿಸಬೇಕಾಗಿರುವುದು ಇಂದಿನ ಅಗತ್ಯತೆಯಾಗಿದೆ. ಯುವಕರು ತಮ್ಮ ಆರೋಗ್ಯದ ಬಗ್ಗೆ ಜಾಗೃತಿ ವಹಿಸುತ್ತಾ, ಇಡೀ ಸಮಾಜಕ್ಕೆ ಹೆಮ್ಮಾರಿಯಾಗಿ ಕಾಡುತ್ತಿರುವ ಹೆಚ್,ಐ.ವ್ಹಿ ಮತ್ತು ಏಡ್ಸ್ ನಂತಹ ಮಾರಕ ರೋಗಗಳಿಂದ ದೂರವಿರಬೇಕು. ಯುವಕರು ಸಮಾಜದಲ್ಲಿ ಸದೃಢ ಭಾರತಕ್ಕಾಗಿ ಸದೃಢ ಯುವಕರು ಎಂಬಂತೆ ಆರೋಗ್ಯದ ಜಾಗೃತಿ ಮೂಡಿಸಬೇಕು. ಆರೋಗ್ಯಕರ, ಸ್ವಾಸ್ಥ್ಯ ಮತ್ತು ಸುಸ್ಥಿರ ಭಾರತಕ್ಕಾಗಿ ನಾವು-ನಿವೆಲ್ಲರೂ ಕಂಕಣಬದ್ಧರಾಗಿ ಹೋರಾಡಬೇಕು. ರೆಡ್ ಕ್ರಾಸ್ ಮತ್ತು ರೆಡ್ ಕ್ರೆಸೆಂಟ್ ಚಳುವಳಿಯ ಮೂಲಭೂತ ತತ್ವಗಳನ್ನು ಕಾರ್ಯರೂಪಕ್ಕೆ ತರಬೇಕು.

ವಿದ್ಯಾರ್ಥಿಗಳು ವಿದ್ಯಾರ್ಥಿದೆಸೆಯಲ್ಲಿಯೇ ರೆಡ್ ಕ್ರಾಸನಂತಹ ಕಾರ್ಯಕ್ರಮಗಳಲ್ಲಿ ಸಕ್ರೀಯವಾಗಿ ಪಾಲ್ಗೊಂಡು ರಾಷ್ಟ್ರೀಯ ಸೇವಾ ಮನೋಭಾವದ ಗುಣವನ್ನು ಬೆಳೆಸಿಕೊಳ್ಳಬೇಕು. ರಕ್ತದಾನ, ಪ್ರಥಮ ಚಿಕಿತ್ಸೆ, ತುರ್ತು ನೆರವು, ಆಹಾರ ಪೂರೈಕೆಯಂತಹ ಮಾನವೀಯ ಮತ್ತು ನಿಸ್ವಾರ್ಥ ಸೇವೆಗಳನ್ನು ಮಾಡುತ್ತಾ, ರಾಷ್ಟ್ರಕ್ಕಾಗಿ ತಮ್ಮ ಅಳಿಲು ಸೇವೆಯನ್ನು ಸಲ್ಲಿಸಬೇಕು. ಈ ಸಮಾಜ ನನಗೇನು ಕೊಟ್ಟಿದೆ ಎನ್ನುವದಕ್ಕಿಂತಲೂ ನನಗೆ ಏನೆಲ್ಲವನ್ನು ನೀಡಿದ ಈ ಸಮಾಜಕ್ಕೆ ನಾನೇನು ಕೊಡುಗೆ ನೀಡಬಲ್ಲೆನೆಂದು ಆತ್ಮಾವಲೋಕನ ಮಾಡಿಕೊಳ್ಳಬೇಕು.
೨೦೨೬ ನೇಯ ವರ್ಷದ ಘೋಷವಾಕ್ಯ “ಮಾನವೀಯತೆಯನ್ನು ಜೀವಂತವಾಗಿರಿಸುವುದು (ಒಚಿಞe ಊumಚಿಟಿiಣಥಿ ಣo be ಚಿಟive)”ಎಂಬ ಸಂದೇಶದೊಂದಿಗೆ ಆಚರಿಸಲಾಗುತ್ತಿರುವ ಈ ರೆಡ್ ಕ್ರಾಸ ದಿನದ ಅಂಗವಾಗಿ ನಾವು ವಿಜ್ಞಾನ-ತಂತ್ರಜ್ಞಾನದಲ್ಲಿ ಅದೇಷ್ಟೋ ಮುಂದುವರೆದರೂ ಮಾನವೀಯತೆಯನ್ನು ಬಿಡಬಾರದು. ಸಂಕಷ್ಟ-ಕಷ್ಟದಲ್ಲಿರುವವರನ್ನು ರಕ್ಷಿಸುವ ಮತ್ತು ಅವಶ್ಯಕ ವೈದ್ಯಕೀಯ ಉಪಚಾರ ಮಾಡುವ ಮಾನವೀಯತೆಯ ಬೆಳೆಸಿಕೊಳ್ಳಬೇಕೆಂಬುದೇ ಈ ವರ್ಷದ ಆಚರಣೆಯ ಪ್ರಮುಖ ಉದ್ಧೇಶವಾಗಿದೆ.
ಕೊನೆಯ ನುಡಿ
ಅಮೇರಿಕಾದ ರೆಡ್ ಕ್ರಾಸ್ ಸಂಸ್ಥಾಪಕ ಕ್ಲಾರಾ ಬಾರ್ಟನ್ ಅವರು, “ಕಷ್ಟ-ಸಂಕಷ್ಟ ಮತ್ತು ಜೀವನ್ಮರಣದ ಮಧ್ಯೆ ಹೋರಾಡುತ್ತಿರುವವರಿಗೆ ಸೇವೆ ಅಗತ್ಯವೆನಿಸಿದರೆ ನಿಸ್ವಾರ್ಥತೆ ಮತ್ತು ಮಾನವೀಯತೆಯಿಂದ ಸೇವೆ ಸಲ್ಲಿಸುವುದನ್ನು ಮರೆಯಬೇಡ” ಎಂದು ಹೇಳಿದ್ದಾರೆ. ಜಾತಿ, ಮತ-ಪಂಥಗಳ ಬೇಧವಿಲ್ಲದೇ ಕಷ್ಟದಲ್ಲಿರುವವರಿಗೆ ಸಹಾಯ ಹಸ್ತ ಚಾಚೋಣ. ಯುದ್ಧ ಮತ್ತು ನೈಸರ್ಗಿಕ ವಿಕೋಪಗಳ ಸಮಯದಲ್ಲಿ ಜೀವನ್ಮರಣ ಮಧ್ಯೆ ಹೋರಾಡುತ್ತಿರುವವರಿಗೆ ಆಶಾಕಿರಣವಾಗಿ ಕಾರ್ಯನಿರ್ವಹಿಸುತ್ತಿರುವ ರೆಡ್ ಕ್ರಾಸ್ ಸ್ವಯಂ ಸೇವಕರಿಗೆ ಗೌರವ ನಮನಗಳನ್ನು ಸಲ್ಲಿಸೋಣ. ಡ್ಯೂನಾಂಟ್ ಅವರ ಕನಸಿನ ಕೂಸು ರೆಡ್ ಕ್ರಾಸ್‌ನ ಧ್ಯೇಯೋದ್ಧೇಶಗಳನ್ನು ಈಡೇರಿಸುವಲ್ಲಿ ಅಹಿಂಸೆ, ಶಾಂತಿ ಮತ್ತು ನಿಸ್ವಾರ್ಥ ಸೇವೆಯ ಮಂತ್ರವನ್ನು ಜಪಿಸೋಣ.


