ಉದಯರಶ್ಮಿ ದಿನಪತ್ರಿಕೆ
ಇಂಡಿ: ಪಟ್ಟಣದ ಮಹಾವೀರ ವೃತ್ತದಲ್ಲಿ ಆಯಿಷಾ ಮಜಿದದ ಇಮಾಮ ಅಹಮ್ಮದ ಸಲಾವೂದ್ದೀನ ನಾಗೂರ ಇವರ ನೇತೃತ್ವದಲ್ಲಿ ನಗರದ ಮಹಾವೀರ ವೃತ್ತದಲ್ಲಿ ಮಂಗಳವಾರ ಸಂತೆಯ ನಿಮಿತ್ಯ ಉಚಿತ ಬಿಸ್ಲೇರಿ ತಂಪಾದ ಕುಡಿಯುವ ನೀರು ವಿತರಿಸಿದರು.
ಗ್ರಾಮೀಣ ಮತ್ತು ನಗರದ ಜನತೆಗೆ ಸಂತೆಯ ದಿನ ಪ್ರತಿ ಮಂಗಳವಾರ ಬಾಯಾರಿಕೆ ನಿವಾರಿಸಿಕೊಳ್ಳಲು ಈ ಸೌಲಭ್ಯ ಮಾಡಲಾಗಿದೆ.
ಈಗಾಗಲೇ ನಿನ್ನೆಯ ಮಂಗಳವಾರ ಪ್ರಾರಂಭವಾಗಿದ್ದು ಮೇ ತಿಂಗಳವರೆಗೂ ಇರುವದು.
೧೫ ತರುಣರು ನೀರು ಕೊಡಲು ಸಹಕರಿಸುವರು. ಮತ್ತು ಪ್ರತಿ ಮಂಗಳವಾರ ಒಂದು ನೂರು ಕ್ಯಾನ ನೀರು ಸಾರ್ವಜನಿಕರಿಗೆ ಉಚಿತವಾಗಿ ವಿತರಿಸಲಾಗುತ್ತಿದೆ.
ಹಸನ್ ಮುಜಾವರ, ವಸೀಮ ವಾಲಿಕಾರ,ಉಮರ ಫಾರುಕ ಬಾಗವಾನ, ಮೀರ್ ಅಯಾನ ಸುಲ್ತಾನ, ವಕಾಸ ಪಟೇಲ, ಫೈಝಾನ ಮುಲ್ಲಾ, ಅಜರ ಇಂಡಿಕರ, ಅಬ್ಬು ಕೋಟ್ನಾಳ, ಮಾಝ ನಾಯಿಕೊಡಿ, ಅಜಾಜ ಮುನಸಿ ವಿತರಣೆಯಲ್ಲಿದ್ದರು.

