Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಸಾಮಾಜಿಕ ನ್ಯಾಯಕ್ಕೆ ನಮ್ಮ ಸರ್ಕಾರ ಬದ್ಧ :ಸಿಎಂ

ವ್ಯವಸ್ಥಿತ & ಅರ್ಥಪೂರ್ಣವಾಗಿ ನಡೆದ ಬೀದರ ಸಮ್ಮೇಳನ

ಅನ್ನದಾತ ಅತಂತ್ರ, ಬೆಳೆಹಾನಿ ಪರಿಹಾರ ಹೆಚ್ಚಳಕ್ಕೆ ಒತ್ತಾಯ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ಅನ್ನದಾತ ಅತಂತ್ರ, ಬೆಳೆಹಾನಿ ಪರಿಹಾರ ಹೆಚ್ಚಳಕ್ಕೆ ಒತ್ತಾಯ
(ರಾಜ್ಯ ) ಜಿಲ್ಲೆ

ಅನ್ನದಾತ ಅತಂತ್ರ, ಬೆಳೆಹಾನಿ ಪರಿಹಾರ ಹೆಚ್ಚಳಕ್ಕೆ ಒತ್ತಾಯ

By Updated:No Comments2 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಹೆಚ್ ಡಿ ಕೋಟೆಯಲ್ಲಿ ಗಾಳಿ-ಮಳೆಗೆ ಬಾಳೆ ಗಿಡಗಳು ನೆಲಸಮ

ಉದಯರಶ್ಮಿ ದಿನಪತ್ರಿಕೆ

ಹೆಚ್ ಡಿ ಕೋಟೆ: ಕಳೆದ ಮೂರು-ನಾಲ್ಕು ದಿನಗಳಿಂದ ಆಗಾಗ್ಗೆ, ಅಲ್ಲಲ್ಲಿ ಸುರಿಯುತ್ತಿರುವ ಮಳೆಗೆ ಕೆಲ ರೈತರ ಬದುಕು ಅತಂತ್ರವಾಗಿದೆ. ಕಟಾವಿಗೆ ಬಂದಿದ್ದ ಬೆಳೆಗಳನ್ನು ಕಳೆದುಕೊಂಡು ಕಂಗಾಲಾಗಿದ್ದಾರೆ. ತಾಲೂಕಿನ ತುಂಬಸೋಗೆ ಸಮೀಪವಿರುವ ನಿಲುವಾಗಿಲು ಗ್ರಾಮದ ಕಾಂತನಾಯಕ ಅವರ ಜಮೀನಿನಲ್ಲಿ ಬೆಳೆದಿದ್ದ ಬಾಳೆ ಬೆಳೆ ಸಂಪೂರ್ಣ ನೆಲಕಚ್ಚಿದೆ. ಬಿರುಗಾಳಿ ಸಹಿತ ಮಳೆಗೆ ನಾಲ್ಕು ಎಕರೆ ಜಮೀನಿನಲ್ಲಿ ಬೆಳೆದಿದ್ದ ಬಾಳೆ ಸಂಪೂರ್ಣ ನೆಲಸಮವಾಗಿದೆ. ಇನ್ನು 15-20 ದಿನದಲ್ಲಿ ಬಾಳೆ ಬೆಳೆ ಕಟಾವಿಗೆ ಬಂದಿತ್ತು. ವ್ಯಾಪಾರಸ್ಥರು ಕೂಡ ಬಾಳೆ ಗೊನೆ ನೋಡಿ, ಕೆಲವೇ ದಿನಗಳಲ್ಲಿ ಬಂದು ಕಟಾವು ಮಾಡುವುದಾಗಿ ಹೇಳಿ ಹೋಗಿದ್ದರು. ಆದರೆ ಅಷ್ಟರೊಳಗೆ ಬಿರುಗಾಳಿ ಸಹಿತ ಮಳೆಗೆ ಬಾಳೆ ಗಿಡಗಳು ನೆಲಸಮವಾಗಿವೆ. ಸಾಲಸೋಲ ಮಾಡಿ ಬಾಳೆ ಬೆಳೆದಿದ್ದೀವಿ. 15 ದಿನದೊಳಗೆ ಕಟಾವು ಮಾಡಿಸಿ, ಅಲ್ಪಸ್ವಲ್ಪ ದುಡ್ಡು ನೋಡುವ ಆಸೆ ಇತ್ತು. ಆದರೆ ಇದೀಗ ನಮ್ಮ ಆಸೆಗೆ ಮಳೆರಾಯ ತಣ್ಣೀರು ಎರಚಿದ್ದಾನೆ. ಬಾಳೆ ಕಳೆದುಕೊಂಡ ನಮಗೆ ದಿಕ್ಕೇ ತೋಚದಾಗಿದೆ. ಜೀವನ ಹೇಗೆ ನಡೆಸಬೇಕು ಎಂಬುದೇ ಗೊತ್ತಾಗುತ್ತಿಲ್ಲ. ಎರಡೂವರೆ ಎಕರೆ ಬೆಳೆ ಹಾನಿಗೆ ಕೇವಲ 17 ಸಾವಿರ ರೂಪಾಯಿ ಪರಿಹಾರ ಸರ್ಕಾರದಿಂದ ಬರುತ್ತೆ ಎಂದು ಹೇಳುತ್ತಿದ್ದಾರೆ. ಆ ಬಿಡುಗಾಸು ಹಣ ತೆಗೆದುಕೊಂಡು ಏನು ಮಾಡಬೇಕೆಂದು ಗೊತ್ತಾಗುತ್ತಿಲ್ಲ ಎಂದು ಜಮೀನು ಮಾಲೀಕ ಕಾಂತನಾಯಕ ಅಳಲು ತೋಡಿಕೊಳ್ಳುತ್ತಾರೆ.
ನಿಲುವಾಗಿಲು ಗ್ರಾಮದ ಮತ್ತೊಬ್ಬ ರೈತ ವೆಂಕಟೇಶ್ ಅವರ ಜಮೀನಿನಲ್ಲಿ ಬೆಳೆದಿದ್ದ 3 ಎಕರೆ ಬಾಳೆ ಬೆಳೆ ಕೂಡ ಸಂಪೂರ್ಣ ನೆಲಕಚ್ಚಿದೆ. ಗಾಳಿ-ಮಳೆಗೆ ಬಾಳೆಗಿಡಗಳು ನೆಲಕ್ಕುರುಳಿವೆ. ಇದರಿಂದ ರೈತ ವೆಂಕಟೇಶ್ ಗೆ ದಿಕ್ಕೇ ತೋಚದಾಗಿದೆ. ಎಕರೆಗೆ ೫೦ ಲಕ್ಷ ರೂಪಾಯಿ ಖರ್ಚು ಮಾಡಿ ಬಾಳೆ ಬೆಳೆದಿದ್ದೆ. ಇನ್ನು ಎರಡು ತಿಂಗಳಲ್ಲಿ ಬಾಳೆ ಗೊನೆ ಕಟಾವಿಗೆ ಬರುತ್ತಿತ್ತು. ಅಷ್ಟರೊಳಗೆ ಮಳೆ ಬಂದು ಈ ಪರಿಸ್ಥಿತಿ ನಿರ್ಮಾಣವಾಗಿದೆ. ಕೇವಲ ಬಾಳೆ ಕಂದು ಹಾಕುವುದಕ್ಕೆ ಎಕರೆಗೆ 4-5 ಸಾವಿರ ರೂಪಾಯಿ ಖರ್ಚು ಆಗುತ್ತದೆ. ಅಂತದ್ರಲ್ಲಿ ಎಕರೆಗೆ 6 ಸಾವಿರ ರೂಪಾಯಿ ಪರಿಹಾರ ಹಣ ತೆಗೆದುಕೊಂಡು ಏನು ಮಾಡಲಿ ಎಂದು ಕಣ್ಣೀರು ಹಾಕುತ್ತಾರೆ.
ತಾಲೂಕಿನ ಹ್ಯಾಂಡ್ ಪೋಸ್ಟ್ ಸಮೀಪವಿರುವ ಚೆನ್ನೇಗೌಡನಹುಂಡಿ ಗ್ರಾಮದಲ್ಲೂ ಬೆಳೆಹಾನಿಯಾಗಿದೆ. ಎರಡೂವರೆ ಎಕರೆ ಜಮೀನಿನಲ್ಲಿ ಬೆಳೆದಿದ್ದ ಬಾಳೆ ನಾಶವಾಗಿದ್ದು, ರೈತ ಪ್ರಕಾಶ್ ಗೆ ದಿಕ್ಕೆತೋಚದಾಗಿದೆ. ದಯವಿಟ್ಟು ಸರ್ಕಾರ ಅನ್ನದಾತರ ನೆರವಿಗೆ ಬರಬೇಕು. ಪರಿಹಾರ ಹ್ ಅನಾ ಹೆಚ್ಚಳ ಮಾಡಬೇಕೆಂದು ಸರ್ಕಾರಕ್ಕೆ ಒತ್ತಾಯ ಮಾಡುತ್ತಾರೆ.

BIJAPUR NEWS bjp public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಸಾಮಾಜಿಕ ನ್ಯಾಯಕ್ಕೆ ನಮ್ಮ ಸರ್ಕಾರ ಬದ್ಧ :ಸಿಎಂ

ವ್ಯವಸ್ಥಿತ & ಅರ್ಥಪೂರ್ಣವಾಗಿ ನಡೆದ ಬೀದರ ಸಮ್ಮೇಳನ

ಗ್ಯಾರಂಟಿ ಯೋಜನೆಗಳ ಅನುಷ್ಠಾನ: ಬಬಲೇಶ್ವರ ಕ್ಷೇತ್ರ ರಾಜ್ಯದಲ್ಲಿಯೇ ಮೊದಲು

ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆಏರಿಕೆ ಖಂಡಿಸಿ ಆಪ್ ಮನವಿ

Add A Comment

Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Helldivers
  • Uncategorized
  • Wemod
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಸಾಮಾಜಿಕ ನ್ಯಾಯಕ್ಕೆ ನಮ್ಮ ಸರ್ಕಾರ ಬದ್ಧ :ಸಿಎಂ
    In (ರಾಜ್ಯ ) ಜಿಲ್ಲೆ
  • ವ್ಯವಸ್ಥಿತ & ಅರ್ಥಪೂರ್ಣವಾಗಿ ನಡೆದ ಬೀದರ ಸಮ್ಮೇಳನ
    In (ರಾಜ್ಯ ) ಜಿಲ್ಲೆ
  • ಅನ್ನದಾತ ಅತಂತ್ರ, ಬೆಳೆಹಾನಿ ಪರಿಹಾರ ಹೆಚ್ಚಳಕ್ಕೆ ಒತ್ತಾಯ
    In (ರಾಜ್ಯ ) ಜಿಲ್ಲೆ
  • ಗ್ಯಾರಂಟಿ ಯೋಜನೆಗಳ ಅನುಷ್ಠಾನ: ಬಬಲೇಶ್ವರ ಕ್ಷೇತ್ರ ರಾಜ್ಯದಲ್ಲಿಯೇ ಮೊದಲು
    In (ರಾಜ್ಯ ) ಜಿಲ್ಲೆ
  • ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆಏರಿಕೆ ಖಂಡಿಸಿ ಆಪ್ ಮನವಿ
    In (ರಾಜ್ಯ ) ಜಿಲ್ಲೆ
  • ಮೇ ೧೧ ರಿಂದ ಅಲರ್ಜಿ, ಅಸ್ತಮಾ, ಕೆಮ್ಮು, ದಮ್ಮು ರೋಗಕ್ಕೆ ಉಚಿತ ತಪಾಸಣೆ
    In (ರಾಜ್ಯ ) ಜಿಲ್ಲೆ
  • ಸರ್ವ ಸಮುದಾಯದ ಜನರನ್ನು ಸಮಾನವಾಗಿ ಕಂಡ ಯಡಿಯೂರಪ್ಪ
    In (ರಾಜ್ಯ ) ಜಿಲ್ಲೆ
  • ಜಮಖಂಡಿಯ ಸ್ನಾತಕೋತ್ತರ ಕೇಂದ್ರದಲ್ಲಿ ಕ್ಯಾಂಪಸ್ ಸಂದರ್ಶನ
    In (ರಾಜ್ಯ ) ಜಿಲ್ಲೆ
  • ಅಫಜಲಪುರದಲ್ಲಿ ಕಸಾಪ ಸಂಸ್ಥಾಪನಾ ದಿನ ಆಚರಣೆ
    In (ರಾಜ್ಯ ) ಜಿಲ್ಲೆ
  • ಶೂನ್ಯದಿಂದ ಶಿಖರದೆತ್ತರಕ್ಕೆ ಏರಬೇಕೆ?
    In ವಿಶೇಷ ಲೇಖನ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.