ಬಿ.ಎಸ್. ಯಡಿಯೂರಪ್ಪನವರ ಅಭಿಮಾನೋತ್ಸವದ ಹಿನ್ನೆಲೆ ವಿಜಯಪುರದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಶ್ಲಾಘನೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಮೇ.09 ರಂದು ಚಿತ್ರದುರ್ಗದಲ್ಲಿ ನಡೆಯಲಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ ಅಭಿಮಾನೋತ್ಸವ ಕಾರ್ಯಕ್ರಮದ ಹಿನ್ನೆಲೆಯಲ್ಲಿ, ವಿಜಯಪುರ ನಗರ ಮಂಡಲದ ವತಿಯಿಂದ ಬುಧವಾರ ಪೂರ್ವಭಾವಿ ಸಭೆ ಜರುಗಿತು.
ಈ ಸಭೆಯಲ್ಲಿ ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಮಾತನಾಡಿ, ಕರ್ನಾಟಕ ಕಂಡ ಅತ್ಯಂತ ಧೀಮಂತ ರಾಜಕೀಯ ಮುತ್ಸದ್ಧಿಗಳು ಅವರು ಮುಖ್ಯಮಂತ್ರಿಗಳಾಗಿ ಭಾಗ್ಯಲಕ್ಷ್ನೀ ಯೋಜನೆ, ಶಾಲಾ ಮಕ್ಕಳಿಗೆ ಸೈಕಲ್ , ರೈತರಿಗಾಗಿ ಪ್ರತ್ಯೇಕ ಕೃಷಿ ಬಜೆಟ್ ಹೀಗೆ ಅಭೂತಪೂರ್ವ ಕೊಡುಗೆ ನೀಡಿದ್ದಾರೆ. ವಿಜಯಪುರ ಜಿಲ್ಲೆಗೆ ಅನೇಕ ಕೊಡುಗೆಗಳನ್ನು ಕೊಟ್ಟಿದ್ದು ಯಡಿಯೂರಪ್ಪನವರು ಅಜಾತಶತ್ರುವಾಗಿದ್ದು ಎಲ್ಲ ಸಮುದಾಯದ ಜನರನ್ನು ಸಮಾನರಾಗಿ ಕಂಡವರಾಗಿದ್ದಾರೆ. ಅವರ ಅಭಿಮಾನೋತ್ಸವದ ಈ ಕಾರ್ಯಕ್ರಮಕ್ಕೆ ನಾವೆಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಲು ಕಾರ್ಯಕರ್ತರಿಗೆ ಕರೆ ಕೊಟ್ಟರು ಈ ಸಂದರ್ಭದಲ್ಲಿ ಮುಖಂಡರಾದ ಸುರೇಶ ಬಿರಾದಾರ, ಮಳುಗೌಡ ಪಾಟೀಲ, ಸಂದೀಪ ಪಾಟೀಲ, ಭೀಮಾಶಂಕರ ಹದನೂರ, ಸ್ವಪ್ನಾ ಕಣಮುಚನಾಳ, ಭರತ ಕೋಳಿ, ವಿಜಯ ಜೋಷಿ, ಪಾಪುಸಿಂಗ ರಜಪೂತ, ರಾಜೇಶ ತಾವಸೆ, ಶರಣಬಸಪ್ಪ ಕುಂಬಾರ, ಅಪ್ಪು ಕುಂಬಾರ, ರಾಜು ಬಿರಾದಾರ, ಜಗದೀಶ ಮುಚ್ಚಂಡಿ, ಸಂತೋಷ ಯಂಕಪ್ಪಗೂಳ, ಪ್ರಹ್ಲಾದ ಕಾಂಬಳೆ, ವಿವೇಕ ತಾವರಗೇರಿ, ಶಿವರಾಜ ಮಡಿವಾಳ, ಮಂಥನ ಗಾಯಕವಾಡ, ಭಾರತಿ ಭುಯ್ಯಾರ, ಶಾಂತಾ ಉತ್ಲಾಸಕರ, ಶಾಂತಾ ಯಳಮೇಲಿ, ಶ್ರೀದೇವಿ ಅವಧಿ, ಬಸಮ್ಮಾ ಗುಜರಿ ಹಾಗೂ ಪ್ರಿಯಾಂಕಾ ಶೇರಖಾನೆ ಅವರು ಉಪಸ್ಥಿತರಿದ್ದರು.

