ವಿಜಯಪುರದ ಬಿ.ಎಲ್.ಡಿ.ಇ ಸ್ವಾಯತ್ತ ವಿಶ್ವವಿದ್ಯಾನಿಲಯದ ಉಪಕುಲಪತಿ ಡಾ.ವಾಯ್.ಎಂ.ಜಯರಾಜ ಅಭಿಮತ
ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಇಂದಿನ ಮಕ್ಕಳ ಸ್ಥಿತಿ ಏನಾಗಿದೆ ಎಂದರೆ ಮನೆಗೆ ಬಂದ ಅತಿಥಿಗಳಿಗಿಂತ, ಪಾಲಕರಿಗಿಂತ ಮೋಬೈಲ್ ಮೇಲೆಯೇ ಹೆಚ್ಚು ಪ್ರೀತಿ. ಇದರಿಂದ ರಕ್ತ ಸಂಬಂಧಗಳು ನಶಿಸಿ ಹೋಗುತ್ತಿವೆ ಎಂದು ವಿಜಯಪುರದ ಬಿ.ಎಲ್.ಡಿ.ಇ ಸ್ವಾಯತ್ತ ವಿಶ್ವವಿದ್ಯಾನಿಲಯದ ಉಪಕುಲಪತಿ ಡಾ.ವಾಯ್.ಎಂ.ಜಯರಾಜ ವಿಷಾದ ವ್ಯಕ್ತಪಡಿಸಿದರು.
ಸಿಂದಗಿ ನಗರದ ಶ್ರೀ ಪದ್ಮರಾಜ ವಿದ್ಯಾವರ್ಧಕ ಸಂಸ್ಥೆ, ಸಾರಂಗಮಠದ ಜಿ.ಪಿ.ಪೋರವಾಲ ಕಲಾ ವಾಣಿಜ್ಯ ಮತ್ತು ವ್ಹಿ.ವ್ಹಿ.ಸಾಲಿಮಠ ವಿಜ್ಞಾನ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡ ವಾರ್ಷಿಕ ಸ್ನೇಹ ಸಮ್ಮೇಳನದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಯಾವುದೇ ಕ್ಷೇತ್ರವಿರಲಿ ಅಲ್ಲಿ ಶ್ರದ್ದೆ ಮತ್ತು ಗಣನೀಯವಾಗಿ ಸೇವೆ ಮಾಡಿ ಸಾಧನೆ ಮಾಡಬೇಕು. ಇಂದು ಹೃದಯವಂತಿಕೆ ಮಾತುಗಳಿಗಿಂತ ಒಣ ಮಾತುಗಳೇ ಹೆಚ್ಚಾಗುತ್ತಿವೆ. ಇದರ ಬಗ್ಗೆ ವಿದ್ಯಾರ್ಥಿಗಳು ತೆಲೆಕೆಡಿಸಿಕೊಳ್ಳದೆ ಮುನ್ನುಗ್ಗಬೇಕು ಎಂದರು.
ಈ ವೇಳೆ ಸ್ಥಳೀಯ ಸಾರಂಗಮಠದ ಪೀಠಾಧಿಪತಿ, ಸಂಸ್ಥೆಯ ಅಧ್ಯಕ್ಷರಾದ ಪೂಜ್ಯಶ್ರೀ ಡಾ.ಪ್ರಭುಸಾರಂಗದೇವ ಶಿವಾಚಾರ್ಯರು ಸಾನಿಧ್ಯ ವಹಿಸಿ ಮಾತನಾಡಿ, ಇಂದಿನ ಯುವ ಜನಾಂಗ ಎಷ್ಟೇ ಓದಿದರು ದೊಡ್ಡ ಸ್ಥಾನಕ್ಕೆ ಏರಿದರು ವಿದ್ಯೆಯ ಜೊತೆಗೆ ವಿನಮ್ರತೆ ಇರಬೇಕು. ಸೌಜನ್ಯವೇ ಮಾನವನಿಗೆ ಭೂಷಣ ಅದನ್ನು ಅಳವಡಿಸಿಕೊಳ್ಳಬೇಕು ಎಂದರು.
ಇದೇ ಸಂಧರ್ಭದಲ್ಲಿ ಸಮ್ಮುಖ ವಹಿಸಿದ ಸಾರಂಗಮಠದ ಉತ್ತರಾಧಿಕಾರಿ ಡಾ.ವಿಶ್ವಪ್ರಭುದೇವ ಶಿವಾಚಾರ್ಯರು ಮಾತನಾಡಿದರು. ಮಹಾವಿದ್ಯಾಲಯದ ಪ್ರಾಚಾರ್ಯ ಡಿ.ಎಮ್.ಸರಶೆಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪ್ರಾಧ್ಯಾಪಕ ಬಿ.ಆರ್.ಮಹಾಜನಶೆಟ್ಟಿ, ಪ್ರತಿಕಾ ತಳವಾರ, ವಿದ್ಯಾರ್ಥಿ ಪ್ರತಿನಿಧಿ ಬೀರಲಿಂಗ ಗುಂಡಮನಿ ವೇದಿಕೆ ಮೇಲಿದ್ದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ಸಹ-ಕಾರ್ಯದರ್ಶಿ ಅಶೋಕ ವಾರದ, ಪ್ರಾಧ್ಯಾಪಕ ಮಹಾದೇವ ಸಂಕಪಾಲ, ಡಾ.ರವಿ ಲಮಾಣಿ, ಡಾ.ಪ್ರಕಾಶ ರಾಠೋಡ, ಎಮ್.ಆಯ್.ಮಿಂಚ, ಪಿ.ಆರ್.ಪಾಟೀಲ, ಪಿ.ಎ.ಪಾಂಡೆ, ಭೀಮಾಶಂಕರ ಅರಳಗುಂಡಗಿ, ಡಾ.ಎಸ್.ಆಯ್.ಭಂಡಾರಿ, ಡಾ.ಸುಮಾ ನಿರಣಿ, ಎಸ್.ಎಸ್.ಮಂಗಳೂರ ಇದ್ದರು. ಡಾ.ರವಿ ಗೋಲಾ ನಿರೂಪಿಸಿದರು. ಡಾ.ನಾಗರಾಜ ಮುರಗೋಡ ಸ್ವಾಗತಿಸಿದರು. ಮಹೇಶ ರೂಡಗಿ ವಂದಿಸಿದರು.

