ಉದಯರಶ್ಮಿ ದಿನಪತ್ರಿಕೆ
ಅಥಣಿ: ಹಾವೇರಿಯ ಹುಕ್ಕೇರಿ ಮಠದ ಲಿಂ.ಶಿವಬಸವ ಮಹಾ ಶಿವಯೋಗಿಗಳ ಜನ್ಮಸ್ಥಳ ಸಪ್ತಸಾಗರದಲ್ಲಿ ಶ್ರೀ ಶಿವಬಸವ ಗುರು ಮಂದಿರದ ಪ್ರಥಮ ವರ್ಷಾಚರಣೆ ಸಮಾರಂಭ ಜರುಗಿತು.
ತಾಲೂಕಿನ ಸಪ್ತಸಾಗರ ಶಾರದಾ ಅಲ್ಪಸಂಖ್ಯಾತರ ಶಿಕ್ಷಣ ಸಂಸ್ಥೆಯ, ಸಪ್ತಸಾಗರ ಪ್ರೌಢಶಾಲೆಯ ಎಸ್.ಎಸ್.ಎಲ್ .ಸಿ ಪರೀಕ್ಷಾ ಫಲಿತಾಂಶದಲ್ಲಿ ಅತ್ಯುತ್ತಮ ಸಾಧನೆ ಮಾಡಿದ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಸನ್ಮಾನಿಸಲಾಯಿತು.
ಶೇಗುಣಸಿ ಎಸ್ ಎಸ್ ಎಲ್ ಸಿ ಪರೀಕ್ಷಾ ಕೇಂದ್ರಕ್ಕೆ ಪ್ರಜ್ವಲ ರಾವಸಾಬ ಬಮ್ಮಣ್ಣವರ 98.88% ಅಂಕಗಳನ್ನು ಪಡೆದು ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗೆ ಹಾಗೂ ವರ್ಷಿತಾ ಭರಮಗೌಡ ಪಾಟೀಲ 97.92% ಅಂಕಗಳನ್ನು ಪಡೆದು ದ್ವಿತೀಯ ಸ್ಥಾನ ಪಡೆದ ವಿದ್ಯಾರ್ಥಿನಿಗೆ ಮತ್ತು ಅಶ್ವಥ ಮಲ್ಲಪ್ಪ ತೇಲಿ 96.16% ಅಂಕಗಳನ್ನು ಪಡೆದು ತೃತೀಯ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಹಾವೇರಿಯ ಶ್ರೀ.ಮ.ನಿ.ಪ್ರ. ಸದಾಶಿವ ಮಹಾಸ್ವಾಮಿಗಳು ಹಾಗೂ ಹಲ್ಯಾಳದ ಶ್ರೀ.ಮ.ನಿ.ಪ್ರ. ಗುರುಸಿದ್ಧ ಮಹಾಸ್ವಾಮಿಗಳು ಹಾಗೂ ಗಣ್ಯ-ಮಾನ್ಯರು ಸೇರಿ ಸತ್ಕಾರ ಮಾಡಿದರು.
ಡಿಸ್ಟಿಂಕ್ಷನ್ ದಲ್ಲಿ 14 ಮಕ್ಕಳು, ಪ್ರಥಮ ಶ್ರೇಣಿಯಲ್ಲಿ 16 ಮಕ್ಕಳು ಉತ್ತೀರ್ಣ ಹೊಂದಿ, ಸಪ್ತಸಾಗರ ಗ್ರಾಮಕ್ಕೆ ಹಾಗೂ ಪ್ರೌಢಶಾಲೆಗೆ ಕೀರ್ತಿ ತಂದಿದ್ದಕ್ಕೆ ಎಲ್ಲ ಮಕ್ಕಳಿಗೆ ಆಶೀರ್ವಾದ ಮಾಡಿದರು.
ಈ ವೇಳೆ ಆರ್.ಎ. ಪಾಟೀಲ, ರಾಜು ನಾಡಗೌಡ, ಬಾಬಾಲಾಲ ನದಾಫ, ಸದಾಶಿವ ಹನಗಂಡಿ, ಡಿ.ಬಿ.ನದಾಫ, ರವೀಂದ್ರ ಬಮ್ಮಣ್ಣವರ, ಅಶೋಕ ಐಗಳಿ, ಪರಮಾನಂದ ತೇಲಿ, ಚಂದ್ರಕಾಂತ ಸಂಕ್ರಟ್ಟಿ, ರಾಮು ಗಸ್ತಿ, ಶಂಕರ ಕೊಳೇಕಾರ, ಪರಶುರಾಮ ಕೊಳೇಕರ, ಮುಕುಂದ ತೀರ್ಥ, ಪಿ.ಡಿ.ಓ ಅಚ್ಯುತ ಕುಲಕರ್ಣಿ, ಹಾರೂನ ಮುಲ್ಲಾ, ಮಹಾವೀರ ಬಿಲಕರ, ಗ್ರಾಮ ಲೆಕ್ಕಾಧಿಕಾರಿ ಅಶೋಕ ಕೋಗಿಲೆ, ಚಿದಾನಂದ ಮಾಂಗ, ಮಲ್ಲಪ್ಪ ಜಗದಾಳ, ಮಲ್ಲು ದರೂರು ಸೇರಿದಂತೆ ಇನ್ನಿತಿತರರಿದ್ದರು.

