ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ದೇಶದಲ್ಲಿ ದ್ವಿದಳ ಧಾನ್ಯಗಳಲ್ಲಿ ಮೌಲ್ಯವರ್ಧನೆ ಉತ್ತೇಜಿಸಲು ಹಾಗೂ ರೈತರ ಆದಾಯ ಹೆಚ್ಚಿಸಲು ಸಂಸ್ಕರಣಾ ಘಟಕವನ್ನು ಅನುಷ್ಠಾನಗೊಳಿಸಲು ಅರ್ಹರಿಂದ ಕೃಷಿ ಇಲಾಖೆ ಅರ್ಜಿ ಆಹ್ವಾನಿಸಿದೆ.
ರೈತ ಉತ್ಪಾದಕ ಸಂಸ್ಥೆಗಳು. ಕ್ಲಸ್ಟರ್ ಮಟ್ಟದ ಒಕ್ಕೂಟಗಳು ಪ್ರಾಥಮಿಕ ಕೃಷಿ ಪತ್ತಿನ ಸಂಘಗಳು (PಂಅS) ಯಾವುದೇ ನೋಂದಾಯಿತ ಸಂಸ್ಥೆಗಳು ಹಾಗೂ ವೈಯಕ್ತಿಕ ಫಲಾನುಭವಿಗಳು ಈ ಯೋಜನೆಯಡಿ ಅರ್ಜಿ ಸಲ್ಲಿಸಲು ಅರ್ಹರಾಗಿದ್ದಾರೆ.
ವೈಯಕ್ತಿಕ ಫಲಾನುಭವಿಯು ಅರ್ಹ ಫಲಾನುಭವಿಯಾಗಲು ಕನಿಷ್ಠ ೨೧ ವರ್ಷದವರಾಗಿರಬೇಕು. ಪ್ರತಿ ಕುಟುಂಬದಿಂದ (ಪತಿ/ಪತ್ನಿ ಹಾಗೂ ಅವಿವಾಹಿತ ಮಕ್ಕಳು) ಒಂದು ಅರ್ಹ ಫಲಾನುಭವಿಗೆ ಮಾತ್ರ ಸಹಾಯಧನ ಪಡೆಯಲು ಅವಕಾಶವಿದೆ. ಯೋಜನಾ ವೆಚ್ಚದ ಶೇ ೧೫ ರಷ್ಟು ಸ್ವಂತ ಬಂಡವಾಳ ಹೂಡಿಕೆ ಮಾಡುವ ಸಾಮರ್ಥ್ಯ ಹೊಂದಿರಬೇಕು.
ಗುಂಪು ಫಲಾನುಭವಿಗಳು ಅರ್ಹರಾಗಲು ಸಂಸ್ಥೆಗಳು ಕಡ್ಡಾಯವಾಗಿ ನೋಂದಣಿಯಾಗಿ,ಕನಿಷ್ಠ ೨ ವರ್ಷಕಾರ್ಯ ನಿರ್ವಹಿಸಿರಬೇಕು. ಯೋಜನಾ ವೆಚ್ಚದ ಶೇ ೧೫ ರಷ್ಟು ಸ್ವಂತ ಬಂಡವಾಳ ಹೂಡಿಕೆ ಮಾಡುವ ಸಾಮರ್ಥ್ಯ ಹೊಂದಿರಬೇಕು. ಪರಿಶಿಷ್ಟ ಜಾತಿ, ಪಂಗಡ, ಮಹಿಳಾ ಫಲಾನುಭವಿಗಳಿಗೆ ಆಧ್ಯತೆ ನೀಡಲಾಗುವದು. ದ್ವಿದಳ ಧಾನ್ಯಗಳಲ್ಲಿ ಆತ್ಮನಿರ್ಭರತಾ ಅಭಿಯಾನ ಕಾರ್ಯಕ್ರಮದಡಿ ಯೋಜನಾ ವೆಚ್ಚದ ಶೇ. ೩೩ ರಷ್ಟು ಸಹಾಯಧನ ಆರ್ಥಿಕ ನೆರವು ನೀಡಲಾಗುವದು.
ಆಸಕ್ತರು, ಜೂನ್ ೩ ರೊಳಗಾಗಿ ಹತ್ತಿರದ ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಹಾಗೂ ರೈತ ಸಂಪರ್ಕ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಲು ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
