Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಅರಣ್ಯ ಕಾರ್ಮಿಕರಿಗೆ ಪಿಎಫ್, ವಿಮೆ ಒದಗಿಸಲು ಕ್ರಮ :ಮಹೇಶ

ಗ್ರಾಮೀಣ ಜನತೆ ಕಾನೂನಿನ ಜ್ಞಾನ ಹೊಂದಬೇಕು :ನ್ಯಾ. ನಾಗೇಶ

ನಿಷ್ಕಳಂಕ ಸೇವೆ ಸಲ್ಲಿಸುವುದು ಇತರರಿಗೆ ಮಾದರಿ :ಮಹಾಂತೇಶ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ಬರಿದಾಗುತ್ತಿರುವ ಕೃಷ್ಣಾ ನದಿ :ಕೃಷಿಗೆ ತೀವ್ರ ಸಂಕಷ್ಟ
(ರಾಜ್ಯ ) ಜಿಲ್ಲೆ

ಬರಿದಾಗುತ್ತಿರುವ ಕೃಷ್ಣಾ ನದಿ :ಕೃಷಿಗೆ ತೀವ್ರ ಸಂಕಷ್ಟ

By Updated:No Comments2 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಉತ್ತರ ಕರ್ನಾಟಕದ ಜೀವನಾಡಿ ಕೃಷ್ಣೆಗೆ ಸಂಕಷ್ಟ | ನೀರಿನ ಮಟ್ಟ ಗಣನೀಯ ಕುಸಿತ

ವರದಿ: ಸಿದ್ರಾಮ್ ಎಮ್ ಇಟ್ಟಿ
ಜಮಖಂಡಿ: ಉತ್ತರ ಕರ್ನಾಟಕದ ಜೀವನಾಡಿ ಎಂದೇ ಕರೆಯಲ್ಪಡುವ ಕೃಷ್ಣಾ ನದಿ ಈ ಬಾರಿ ಬೇಸಿಗೆ ಆರಂಭದಲ್ಲೇ ಬರಿದಾಗುತ್ತಿರುವುದು ಆತಂಕಕಾರಿಯಾಗಿದೆ. ಬೆಳಗಾವಿ ಜಿಲ್ಲೆಯಲ್ಲಿ ಹಾಯ್ದು ಹೋಗುವ ಈ ಪ್ರಮುಖ ನದಿ, ಬೆಳಗಾವಿ ಮತ್ತು ಬಾಗಲಕೋಟೆ ಜಿಲ್ಲೆಗಳ ಸೇರಿದಂತೆ ಸುಮಾರು 111 ಗ್ರಾಮಗಳಿಗೆ ಜೀವನಾಡಿಯಾಗಿ ಕಾರ್ಯನಿರ್ವಹಿಸುತ್ತಿದೆ. ಆದರೆ ಈಗ ನೀರಿನ ಕೊರತೆಯಿಂದ ಜನಜೀವನ ಹಾಗೂ ಕೃಷಿ ತೀವ್ರ ಸಂಕಷ್ಟಕ್ಕೆ ಸಿಲುಕಿದೆ.

ಮಹಾರಾಷ್ಟ್ರದಲ್ಲಿ ಉಗಮಗೊಂಡು ಬಾಗಲಕೋಟೆ ಭಾಗದಲ್ಲಿ ಸಂಗಮವಾಗುವ ಕೃಷ್ಣಾ ನದಿ, ಈ ಭಾಗದ ಕೃಷಿ ಚಟುವಟಿಕೆಗಳಿಗೆ ಪ್ರಮುಖ ಆಧಾರವಾಗಿದೆ. ಹಿಪ್ಪರಗಿ ಗ್ರಾಮದಲ್ಲಿ ನದಿಗೆ ಅಡ್ಡವಾಗಿ ನಿರ್ಮಿಸಲಾದ ಹಿಪ್ಪರಗಿ ಬ್ಯಾರೇಜ್‌ನಲ್ಲಿ ಈ ಬಾರಿ ನೀರಿನ ಮಟ್ಟ ಗಣನೀಯವಾಗಿ ಕುಸಿದಿದೆ.
ಜಮಖಂಡಿ ತಾಲೂಕಿನ ಕೃಷ್ಣೆ ನದಿ ತೀರದ ಸುತ್ತಮುತ್ತ ಗ್ರಾಮಗಳಾದ ಶಿರುಗುಪ್ಪಿ, ಮೈಗೂರು, ಆಲಬಾಳ, ಮುತ್ತೂರು, ಕಂಕನವಾಡಿ, ಕಡಕೋಳ ಶೂರಪಾಲಿ, ಜಂಬಗಿ,ಸನಾಳ , ಕುಂಬಾರಹಳ್ಳ, ಆಲಗೂರು, ಚಿಕ್ಕಪಡಸಲಗಿ, ಹಿರೇಪಡಸಲಗಿ, ಟಕ್ಕೋಡ, ಟಕ್ಕಳಕಿ, ಕುಂಚನೂರ, ಲಿಂಗನೂರು, ಚಿನಗುಂಡಿ, ಜಕನೂರ, ಬಿದರಿ, ಜನವಾಡ, ಕವಟಗಿ ಇತರ ಹಳ್ಳಿಗಳ ರೈತರು ನೀರಿಲ್ಲದೆ ಪರದಾಡುವಂತಾಗಿದೆ.

6 ಟಿಎಂಸಿ ಸಾಮರ್ಥ್ಯ ಹೊಂದಿರುವ ಹಿಪ್ಪರಗಿ ಬ್ಯಾರೇಜ್‌ನಲ್ಲಿ ಕಳೆದ ವರ್ಷ ಏಪ್ರಿಲ್ ತಿಂಗಳಲ್ಲಿ ಸುಮಾರು 2.5 ಟಿಎಂಸಿ ನೀರು ಸಂಗ್ರಹವಾಗಿದ್ದರೆ, ಈ ಬಾರಿ ಅದು ಕೇವಲ 1.5 ಟಿಎಂಸಿಗೆ ಇಳಿದಿದೆ. ಇದರಲ್ಲಿ ಬಹುತೇಕ 1.5 ಟಿಎಂಸಿ ನೀರು ಡೆಡ್ ಸ್ಟೋರೇಜ್ ಆಗಿರುವುದರಿಂದ ಬಳಕೆಗೆ ಯೋಗ್ಯವಾದ ನೀರು ಇಲ್ಲದಂತಾಗಿದೆ.
ಹಿಪ್ಪರಗಿ ಜಲಾಶಯದಿಂದ 3 ಲಕ್ಷ ಹೆಕ್ಟರ್ ಕೃಷಿ ಭೂಮಿ ಜಲಾಶಯದ ಮೇಲೆ ಅವಲಂಭಿತವಾಗಿದ್ದು,ಈಗ ಕುಡಿಯುವ ಸಲುವಾಗಿ ನೀರನ್ನು ಬಿಟ್ಟರೆ ಬೆಳೆಗಳ ಗತಿ ಏನು ಎಂದು ರೈತರು ಅಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ರಾಜಕೀಯ ನಾಯಕರು ಮಹಾರಾಷ್ಟ್ರದ ಸಿಎಂ ಅವರೊಂದಿಗೆ ಮಾತನಾಡಿ ಮೂರು ಟಿಎಂಸಿ ನೀರನ್ನು ತರಲು ಮುಂದಾಗಬೇಕು ಎಂದು ಒತ್ತಾಯಿಸಿದ್ದಾರೆ.
ಕಳೆದ 15 ದಿನಗಳಿಂದ ಕೃಷ್ಣಾ ನದಿ ನೀರು ಸಂಪೂರ್ಣವಾಗಿ ಕಡಿಮೆಯಾಗಿದ್ದು, ರೈತರು ಬೆಳೆದ ಬೆಳೆಗಳಿಗೆ ನೀರು ಒದಗಿಸಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಕೃಷಿಭೂಮಿಗಳು ಒಣಗುತ್ತಿದ್ದು, ರೈತರು ಮತ್ತು ಪಶುಪಾಲಕರು ಭಾರೀ ಸಂಕಷ್ಟ ಎದುರಿಸುತ್ತಿದ್ದಾರೆ.
ಸ್ಥಳೀಯ ರೈತರು ಸರ್ಕಾರ ತಕ್ಷಣ ಕ್ರಮ ಕೈಗೊಂಡು ನೀರಿನ ಸಮಸ್ಯೆ ಪರಿಹರಿಸಬೇಕೆಂದು ಆಗ್ರಹಿಸಿದ್ದಾರೆ. ಕೃಷ್ಣಾ ನದಿಯ ಈ ಸ್ಥಿತಿ ಮುಂದುವರಿದರೆ ಉತ್ತರ ಕರ್ನಾಟಕದ ಅನೇಕ ಗ್ರಾಮಗಳಲ್ಲಿ ತೀವ್ರ ಜಲ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ.

“ಬಿಸಿಲಿನ ತಾಪಮಾನ ಮೇ 15ರವರೆಗೆ ಮುಂದುವರೆಯುವ ಸಾಧ್ಯತೆಯಿದ್ದು, ನೀರು ಆವಿಯಾಗುವ ಪ್ರಮಾಣ ಕೂಡ ಅತಿಯಾಗಿದ್ದು, ಜಮಖಂಡಿ ಮತ್ತು ರಬಕವಿ ಬನಹಟ್ಟಿ ನಗರ ಸೇರಿ 35 ಎಮ್ ವಿ.ಎಸ್ ಯೋಜನೆ ಜಾರಿಯಲ್ಲಿದ್ದು, ಅದಕ್ಕಾಗಿ ನದಿ ದಡದಲ್ಲಿ ವಾರಕ್ಕೊಮ್ಮೆ ವಿದ್ಯುತ್ ಕಡಿತಗೊಳಿಸಲಾಗುತ್ತಿತ್ತು, ಮುಂದಿನ ವಾರದಿಂದ ವಾರಕ್ಕೆ ಎರಡು ದಿನ ವಿದ್ಯುತ್ ಕಡಿತಗೊಳಿಸಲಾಗುವುದು. ನೀರಿನ ತೀವ್ರ ಕೊರತೆ ಹಿನ್ನೆಲೆಯಲ್ಲಿ ಜನರು ಹಾಗೂ ಜಾನುವಾರುಗಳ ಬದುಕು ಸಂಕಷ್ಟದಲ್ಲಿದೆ. ಆದಕಾರಣ ನೀರನ್ನು ಕುಡಿಯುವ ಉದ್ದೇಶಕ್ಕಾಗಿ ಮಾತ್ರ ಬಳಸುವಂತೆ ಸೂಚಿಸಿದ್ದೆವೆ.”

– ಶ್ವೇತಾ ಬಿಡೀಕರ
ಉಪವಿಭಾಗಾಧಿಕಾರಿಗಳು, ಜಮಖಂಡಿ.

” ಮಳೆಗಾಲದಲ್ಲಿ ನದಿ ಬಂದು ಹೊಲ, ಮನೆ ಮುಳುಗಡೆಯಾಗುತ್ತವೆ. ಬೇಸಿಗೆಕಾಲದಲ್ಲಿ ನೀರಿಲ್ಲದೆ ಬೆಳೆಗಳು ಒಣಗಿ ಹೋಗುತ್ತವೆ ಹಾಗೂ ದನ ಕರುಗಳಿಗೆ ಮೇವಿಲ್ಲದೆ ಮಾರಾಟ ಮಾಡುವ ಪರಿಸ್ಥಿತಿ ಉಂಟಾಗಿದೆ. ಶಾಶ್ವತ ಮುಳುಗಡೆ ಮಾಡುವ ಸಲುವಾಗಿ ಪ್ರತಿ ವರ್ಷ ರೈತರು ಹೋರಾಟ ಮಾಡುತ್ತಿದ್ದೇವೆ. ಪ್ರತಿ ಎಕರೆಗೆ 40 ಲಕ್ಷ ಘೋಷಣೆ ಮಾಡಿ ಒಂದು ವರ್ಷ ಕಳೆದರೂ ಕೂಡಾ ರೈತರಿಗೆ ಹಣ ಸಿಕ್ಕಿಲ್ಲ. ನಮ್ಮ ಪರಿಸ್ಥಿತಿ ಸರ್ಕಾರಕ್ಕೆ ತಿಳಿಯುತ್ತಿಲ್ಲ.”

– ಧರೇಪ್ಪ ದಾನಗೌಡ
ಸಾಮಾಜಿಕ ಹೋರಾಟಗಾರ ಹಾಗೂ ಚಿಕ್ಕಪಡಸಲಗಿ ಗ್ರಾಮದ ರೈತ.

BIJAPUR NEWS bjp public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಅರಣ್ಯ ಕಾರ್ಮಿಕರಿಗೆ ಪಿಎಫ್, ವಿಮೆ ಒದಗಿಸಲು ಕ್ರಮ :ಮಹೇಶ

ಗ್ರಾಮೀಣ ಜನತೆ ಕಾನೂನಿನ ಜ್ಞಾನ ಹೊಂದಬೇಕು :ನ್ಯಾ. ನಾಗೇಶ

ನಿಷ್ಕಳಂಕ ಸೇವೆ ಸಲ್ಲಿಸುವುದು ಇತರರಿಗೆ ಮಾದರಿ :ಮಹಾಂತೇಶ

ಕನ್ನಡ ಸಾಹಿತ್ಯ ಲೋಕಕ್ಕೆ ಡಾ.ಚನ್ನಪ್ಪ ಕಟ್ಟಿ ಕೊಡುಗೆ ಅನನ್ಯ

Add A Comment

Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Helldivers
  • Uncategorized
  • Wemod
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಅರಣ್ಯ ಕಾರ್ಮಿಕರಿಗೆ ಪಿಎಫ್, ವಿಮೆ ಒದಗಿಸಲು ಕ್ರಮ :ಮಹೇಶ
    In (ರಾಜ್ಯ ) ಜಿಲ್ಲೆ
  • ಗ್ರಾಮೀಣ ಜನತೆ ಕಾನೂನಿನ ಜ್ಞಾನ ಹೊಂದಬೇಕು :ನ್ಯಾ. ನಾಗೇಶ
    In (ರಾಜ್ಯ ) ಜಿಲ್ಲೆ
  • ನಿಷ್ಕಳಂಕ ಸೇವೆ ಸಲ್ಲಿಸುವುದು ಇತರರಿಗೆ ಮಾದರಿ :ಮಹಾಂತೇಶ
    In (ರಾಜ್ಯ ) ಜಿಲ್ಲೆ
  • ಕನ್ನಡ ಸಾಹಿತ್ಯ ಲೋಕಕ್ಕೆ ಡಾ.ಚನ್ನಪ್ಪ ಕಟ್ಟಿ ಕೊಡುಗೆ ಅನನ್ಯ
    In (ರಾಜ್ಯ ) ಜಿಲ್ಲೆ
  • ಮೌಲ್ಯಮಾಪನ ಎಡವಟ್ಟು ಪಾಸ್‌ ಆಗಿದ್ದ ವಿದ್ಯಾರ್ಥಿನಿ ಫೇಲ್‌!
    In (ರಾಜ್ಯ ) ಜಿಲ್ಲೆ
  • ಪ್ರಗತಿಯಲ್ಲಿರುವ ನೀರಾವರಿ ಯೋಜನೆಗಳು ಬೇಗ ಪೂರ್ಣಗೊಳಿಸಲು ಸೂಚನೆ
    In (ರಾಜ್ಯ ) ಜಿಲ್ಲೆ
  • ಹಳ್ಳಗಳಿಗೆ ನೀರು ತುಂಬಿಸುವ ಯೋಜನೆ ಇಡೀ ದೇಶಕ್ಕೆ ಮಾದರಿ
    In (ರಾಜ್ಯ ) ಜಿಲ್ಲೆ
  • ಶ್ರೀ ಬಿ.ಎಂ.ಪಾಟೀಲ ಪಬ್ಲಿಕ್ ಸ್ಕೂಲ್ ಗೆ ಮೊದಲ ಮೂರು ರ‌್ಯಾಂಕ್
    In (ರಾಜ್ಯ ) ಜಿಲ್ಲೆ
  • ಬರಿದಾಗುತ್ತಿರುವ ಕೃಷ್ಣಾ ನದಿ :ಕೃಷಿಗೆ ತೀವ್ರ ಸಂಕಷ್ಟ
    In (ರಾಜ್ಯ ) ಜಿಲ್ಲೆ
  • ಭಕ್ತಿಸಾಗರದಲ್ಲಿ ತೇಲಿದ ಚಿಕ್ಕಪಡಸಲಗಿ ಭಕ್ತವೃಂದ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.