ಉದಯರಶ್ಮಿ ದಿನಪತ್ರಿಕೆ
ಹೆಚ್ ಡಿ ಕೋಟೆ: ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದೊಂದಿಗೆ ಶೈಕ್ಷಣಿಕ ಒಪ್ಪಂದ ಮಾಡಿಕೊಂಡಿದೆ ಎಂದು ಪ್ರಾಂಶುಪಾಲರಾದ ಡಾ. ಎಂ ಅರುಣ್ ಕುಮಾರ್ ಹೇಳಿದರು.
ಪಟ್ಟಣದ ಕಾಲೇಜು ವನಸಿರಿಯ ಬಯಲು ರಂಗಮಂದಿರದಲ್ಲಿ ಹಮ್ಮಿಕೊಂಡಿದ್ದ ವನಸಿರಿ ನಾಡಿನ ಜನಪದ ಕಲರವ ಮತ್ತು ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಎಂ ಅರುಣ್ ಕುಮಾರ್, ಕೆಎಸ್ಒಯು ಜೊತೆ ಶೈಕ್ಷಣಿಕ ಒಪ್ಪಂದ ಮಾಡಿಕೊಂಡಿರುವುದು ತುಂಬಾ ಸಂತೋಷವಾಗುತ್ತದೆ. ಇದು ಉನ್ನತ ಶಿಕ್ಷಣದ ಗುಣಮಟ್ಟ, ನಾವೀನ್ಯತೆ ಮತ್ತು ಅಂತರರಾಷ್ಟ್ರೀಯ ಸಹಕಾರವನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ. ಜೊತೆಗೆ ಜಾಗತೀಕರಣದ ಯುಗದಲ್ಲಿ ಜ್ಞಾನ ಹಂಚಿಕೆ, ಹೊಸ ತಂತ್ರಜ್ಞಾನಗಳ ಅಳವಡಿಕೆ ಮತ್ತು ಶೈಕ್ಷಣಿಕ ಗುಣಮಟ್ಟವನ್ನು ಸುಧಾರಿಸುವುದು ಇದರ ಮುಖ್ಯ ಗುರಿಯಾಗಿದೆ ಎಂದು ಹೇಳಿದರು.
ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾನಿಲಯದ ಇತಿಹಾಸ ಅಧ್ಯಯನ ಮತ್ತು ಸಂಶೋಧನ ವಿಭಾಗದ ಮುಖ್ಯಸ್ಥ ಡಾ. ರಾಮೇಗೌಡ ಮಾತನಾಡಿ,
ಗ್ರಾಮೀಣ ಭಾಗದ ಸೊಗಡು ಎಷ್ಟೇ ಹಣ ಕೊಟ್ಟರು ಬೇರೆಡೆ ಎಲ್ಲೂ ಸಿಗುವುದಿಲ್ಲ. ನಮ್ಮ ಪೂರ್ವಿಕರು ಬೆಳೆದ ಬೆಳೆಯನ್ನು ಒಕ್ಕಣೆ ಮಾಡಲು ರಾಗಿ ಕಣವನ್ನು ಬಳಸುತಿದ್ದರು. ಅದರ ಗಮ್ಮತೆ ಗಮ್ಮತ್ತು, ಕೆಲವು ದಿನಸಿಗಳನ್ನು ಓನಕೆಯಿಂದ ಕುಟ್ಟಿ ಕಾಳು ತೆಗೆಯುತ್ತಿದ್ದರು, ಮೊರೆ. ಷೇರು. ಪಾವು ಇಂತಹ ವಸ್ತುಗಳನ್ನು ನೋಡಿ ತುಂಬಾ ವರ್ಷಗಳೇ ಕಳೆದು ಹೋಗಿದ್ದವು. ಈಗ ಇವುಗಳನ್ನು ಇಲ್ಲಿ ನೋಡಿ ತುಂಬಾ ಸಂತೋಷವಾಯಿತು. ಹೆಚ್ ಡಿ ಕೋಟೆ ತಾಲೂಕಿನಲ್ಲಿ ಅರಣ್ಯ ಸಂಪತ್ತು, ಜಲ ಸಂಪತ್ತು ಹೆಚ್ಚಾಗಿದ್ದು, ಈ ತಾಲೂಕನ್ನು ಪುನ್ನಾಟ ನಾಡು ಎಂದು ಕರೆಯಲಾಗುತ್ತಿತ್ತು. ಇದರ ಬಗ್ಗೆ ಮತ್ತಷ್ಟು ತಿಳಿಯಲು ಇತಿಹಾಸ ಓದಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಅರುಣ್ ಕುಮಾರ್, ಡಾ ಗಣೇಶ್, ಡಾ ಎನ್. ಪುಟ್ಟರಾಜು, ಪ್ರೊ.ಕತ್ಯಾಯಿನಿ, ಪ್ರೊ. ಪೂರ್ಣಿಮ, ಪ್ರೊ. ಗುರುದತ್ತ ಕಾಮತ್, ಪ್ರೊ. ಶಾಹಿಕಲಾ, ಪ್ರೊ.ಕೆಂಪರಾಜು, ಡಾ. ಪುಷ್ಪಲತಾ ಪಿ, ದಮ್ಮೂರಪ್ಪ ಕೆ, ಬೋರಮ್ಮ ಹೆಚ್ ಅಂಗಡಿ, ಬಾಲಾಜಿ ಕೆ.ವಿ , ರಾಜಶೇಖರ್ ಎಸ್, ಮಂಜು ಎಸ್, ಪ್ರವೀಣ್ ಕುಮಾರ್, ದೇವರಾಜು ಆನಗಟ್ಟಿ , ನಿಂಗರಾಜಯ್ಯ, ಸಣ್ಣಯ್ಯ ಚಕ್ಕಗೌಡನಹಳ್ಳಿ, ವಿನಯ್, ಸೋಮಶೇಖರ್ ಆರಾಧ್ಯ, ರುಕ್ಮಿಣಿ, ಅಭಿಲಾಷ್, ಕ್ಲರ್ಕ್ ಸ್ವಾಮಿ ಸೇರಿದಂತೆ ಜನಪದ ಕಲಾವಿದರು, ವಿದ್ಯಾರ್ಥಿಗಳು ಇದ್ದರು.

