ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಸಮಾಜದಲ್ಲಿ ಉನ್ನತ ಶ್ರೇಣಿಗೆ ಮಕ್ಕಳು ತಲುಪಬೇಕಾದರೆ ಆವಮಾನ, ಅನುಮಾನ ನಂತರ ಸನ್ಮಾನ ದೊರೆಯುತ್ತವೆ. ಹಾಗಾಗಿ ಶ್ರಮ ವಹಿಸಿ ಕಾರ್ಯ ನಿರ್ವಹಿಸಬೇಕು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೆಶಕ ಹೇಳಿದರು.
ಜಿಲ್ಲಾ ಬಾಲ ಭವನದಲ್ಲಿ ನಡೆದ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮಕ್ಕಳಲ್ಲಿ ಕ್ರೀಯಾಶೀಲ ವ್ಯಕ್ತಿತ್ವ ವಿಕಸನಕ್ಕಾಗಿ ಚಟುವಟಿಕೆಯ ಮೂಲಕ ಮಕ್ಕಳಿಗೆ ತಿಳುವಳಿಕೆ ನೀಡಿದರು. ಮಕ್ಕಳು ಪಾಲಕರು ಮಾಡುವ ಕೆಲಸಗಳನ್ನು ಅನುಸರಿಸುತ್ತಾರೆ. ಹಾಗಾಗಿ ಮಕ್ಕಳ ಮುಂದೆ ಪಾಲಕರು ಮೊಬೈಲ್ ಬಳಕೆಯನ್ನು ನಿಯಮಿತವಾಗಿ ಮಾಡುವುದಾಗಿ ಹಾಗೂ ಮಕ್ಕಳಲ್ಲಿ ಸ್ಮಜನಾತ್ಮಕ ಕಲಿಕೆಗೆ ಹೆಚ್ಚಿನ ಅವಕಾಶವನ್ನು ಮಾಡಿಕೊಡಬೇಕು ಎಂದರು. ಕರ್ನಾಟಕ ನಾಡ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಸುರೇಶ ಜತ್ತಿ ಮಾತನಾಡಿ, ಮಕ್ಕಳನ್ನು ಸಮಾಜದಲ್ಲಿ ಉತ್ತಮ ಪ್ರಜೆಯನ್ನಾಗಿ ಮಾಡಲು ಕ್ರೀಡೆ, ಯೋಗ, ಸಂಗೀತ, ಕರಾಟೆ, ಚಿತ್ರಕಲೆ, ಕರಕುಶಲ ವಸ್ತುಗಳ ತಯಾರಿಕೆ ಇತ್ಯಾದಿ ಚಟುವಟಿಕೆಗಳ ತರಬೇತಿ ಪಡೆಯುವುದು ಅಗತ್ಯವಾಗಿದೆ ಎಂದರು.
ಇಂತಹ ಚಟುವಟಿಕೆಗಳು ಬೇಸಿಗೆ ಶಿಬಿರದಲ್ಲಿರುತ್ತವೆ. ಅದರಲ್ಲಿ ಭಾಗವಹಿಸಿ ಸಸುಪಯೋಗ ಪಡೆದುಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ ಮಕ್ಕಳಿಗೆ ಪ್ರಶಸ್ತಿ ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು.
ಜಿಲ್ಲಾ ಮಿಷನ್ ಸಂಯೋಜಕಿ ಭಾರತಿ ಪಾಟೀಲ, ದೀಪಾಕ್ಷಿ ಜಾನಕಿ, ನಾಗಶ್ರೀ ನಿಂಬಾಳ, ಎಸ್.ಸಿ.ಮ್ಯಾಗೇರಿ, ಜ್ಯೋತಿ, ನೂತನ ಬಿರಾದಾರ, ಅನಿತಾ ಬಿರಾದಾರ. ಬೇಸಿಗೆ ಶಿಬಿರದ ಸಂಪನ್ಮೂಲ ವ್ಯಕ್ತಿಗಳಾದ ಜಗದೀಶ ಗುಳೇದಗುಡ್ಡ (ಕರಾಟೆ), ವಾಸು ಕುಲಕರ್ಣಿ (ನೃತ್ಯ), ಸಿಕಂದರ್ ಮುಳವಾಡ (ಕರಕುಶಲ), ಸಿದ್ರಾಮ ಲ. ಬಳ್ಳ ಗಿಡದ (ಚಿತ್ರಕಲೆ), ಆಶ್ವಿನಿ ಪತ್ತಾರ (ಸಂಗೀತ) ಸೇರಿದಂತೆ ಮಹಿಳಾ ಸಬಲೀಕರಣ ಘಟಕದ ಸಿಬ್ಬಂದಿ, ಮಕ್ಕಳು ಹಾಗೂ ಪಾಲಕರು ಮತ್ತು ಜಿಲ್ಲಾ ಬಾಲಭವನದ ಸಿಬ್ಬಂದಿಗಳು ಉಪಸ್ಥಿತರಿದ್ದರು.
