ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ವತಿಯಿಂದ ಆಯೋಜಿಸಲಾಗಿರುವ ಪ್ರತಿಷ್ಠಿತ ‘ಯುವ ವಿಜ್ಞಾನಿ ಕಾರ್ಯಕ್ರಮ’ ಕ್ಕೆ ತಾಲ್ಲೂಕಿನ ಬಿದರಕುಂದಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ೯ನೇ ತರಗತಿ ವಿದ್ಯಾರ್ಥಿನಿ ಗ್ರಂಥಿಕಾ ಕುಂಬಾರ ಆಯ್ಕೆಯಾಗಿರುವ ಹಿನ್ನೆಲೆ ಪಟ್ಟಣದ ಪವಾಡ ಬಸವೇಶ್ವರ ಆಶ್ರಮದ ಆವರಣದಲ್ಲಿ ಭಾನುವಾರ ಸಂಜೆ ಕುಂಬಾರ ಸಮಾಜದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಈ ವೇಳೆ ಮುಖ್ಯಗುರು ಶಿವಾನಂದ ಕುಂಬಾರ, ಮತ್ತು ಸಮಾಜದ ಮುಖಂಡರು ಮಾತನಾಡಿ, ಈ ಭಾಗದ ವಿದ್ಯಾರ್ಥಿನಿಯೊಬ್ಬಳು ರಾಷ್ಟ್ರ ಮಟ್ಟದ ಇಸ್ರೋ ಕಾರ್ಯಕ್ರಮಕ್ಕೆ ಆಯ್ಕೆಯಾಗಿರುವುದು ಹೆಮ್ಮೆಯ ವಿಷಯ. ಇದು ಇತರ ವಿದ್ಯಾರ್ಥಿಗಳಿಗೂ ಸ್ಫೂರ್ತಿಯಾಗಲಿ ಎಂದು ಹಾರೈಸಿದರು.
ಈ ವೇಳೆ ಸಮಾಜದ ಹಿರಿಯರಾದ ಸಂಗಣ್ಣ ಕುಂಬಾರ, ಮುಖ್ಯಗುರು ಶಿವಾನಂದ ಕುಂಬಾರ, ಬಸವರಾಜ ಕುಂಬಾರ (ಗೋನಾಳ), ಮಂಜುನಾಥ ಕುಂಬಾರ, ರಾಜಶೇಖರ ಕುಂಬಾರ, ಪತ್ರಕರ್ತ ಬಸವರಾಜ ಕುಂಬಾರ (ಚವನಭಾವಿ), ಅಂಬಣ್ಣ ಕುಂಬಾರ, ಮಲ್ಲಣ್ಣ ಕುಂಬಾರ, ಶರಣಬಸಪ್ಪ ಕುಂಬಾರ, ಮುತ್ತು ಕುಂಬಾರ ಹಾಗೂ ವಿರೇಶ ಚಲವಾದಿ ಸೇರಿದಂತೆ ಸಮಾಜದ ಪ್ರಮುಖರು ಭಾಗಿಯಾಗಿದ್ದರು.

