ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ೨ನೆಯ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ವಿದ್ವಾಂಸರಿಂದ ಗೋಷ್ಠಿಗಳನ್ನು ಏರ್ಪಡಿಸಿ ಸಮ್ಮೇಳನಕ್ಕೆ ಬಂದ ಕನ್ನಡ ಅಭಿಮಾನಿಗಳಿಗೆ ಜ್ಞಾನ ದಾಸೋಹ ಉಣ ಬಡಿಸುವಂತಾಗಲಿ ಎಂದು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹ.ಮ ಪೂಜಾರ ಹೇಳಿದರು.
ಸಿಂದಗಿ ತಾಲೂಕ ಪಂಚಾಯತ ಸಭಾಂಗಣದಲ್ಲಿ ಜರುಗಿದ ಸಾಹಿತಿಗಳ, ಲೇಖಕರ, ಕವಿಗಳ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕಳೆದ ೧೪ ವರ್ಷದ ಹಿಂದೆ ಸಿಂದಗಿಯಲ್ಲಿ ಜಿಲ್ಲಾ ಸಮ್ಮೇಳನ ಜರುಗಿತ್ತು. ಈಗ ಹಮ್ಮಿಕೊಳ್ಳಲಾಗಿರುವ ಸಮ್ಮೇಳನಕ್ಕೆ ಸಿಂದಗಿ ತಾಲೂಕಿನ ಎಲ್ಲ ಕನ್ನಡ ಅಭಿಮಾನಿಗಳು ತನು, ಮನ, ದನದಿಂದ ಸಹಕಾರ ನೀಡುವುದು ಅತ್ಯಗತ್ಯ ಎಂದರು.
ಈ ವೇಳೆ ವಿಶ್ರಾಂತ ಗುರುಮಾತೆ ಜಯಶ್ರೀ ಕುಲಕರ್ಣಿ ಮಾತನಾಡಿ, ಮಹಿಳೆಯರ ಕುರಿತು ಗೋಷ್ಠಿಯನ್ನು ಏರ್ಪಡಿಸಬೇಕು. ಸ್ಥಳೀಯ ಮಹಿಳೆಯರಿಗೆ ಸೂಕ್ತ ವೇದಿಕೆ ನೀಡಬೇಕು. ಎಂಭತ್ತು ವರ್ಷ ಮೀರಿದ ಸಾಧಕ ಮಹಿಳೆಯರನ್ನು ವೇದಿಕೆಯಲ್ಲಿ ಗೌರವಿಸಬೇಕು ಎಂದರು.
ಇದೇ ಸಂದರ್ಭದಲ್ಲಿ ಎಚ್.ಜಿ.ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಎ.ಆರ್.ಹೆಗ್ಗನದೊಡ್ಡಿ, ವಿಶ್ರಾಂತ ಪ್ರಾಚಾರ್ಯ ರಾ.ಶಿ.ವಾಡೆದ, ತಾಲೂಕ ಕಸಾಪ ಅಧ್ಯಕ್ಷ ವೈ.ಸಿ.ಮಯೂರ, ಶಿಕ್ಷಕಿ ಶೋಭಾ ಚಿಗರಿ, ಶೈನಾಬಿ ಮಸಳಿ, ಕಸಾಪ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲೀಕಾರ, ಕಸಾಪ ತಾಲೂಕು ಗೌರವ ಕಾರ್ಯದರ್ಶಿ ಆನಂದ ಶಾಬಾದಿ, ಮಹಿಳಾಪರ ಹೋರಾಟಗಾರ್ತಿ ಜಗದೇವಿ ಬಿರಾದಾರ, ಶರಣು ಲಂಗೋಟಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಎಸ್.ಎಸ್.ಸಾತಿಹಾಳ, ಶಿವಕುಮಾರ ಶಿವಸಿಂಪಿ, ಶಾಂತು ರಾಣಾಗೋಳ, ಸುನಂದಾ ಯಂಪೂರೆ, ಅನಸೂಯಾ ಪಾರಗೊಂಡ, ಪುರುಷೋತ್ತಮ ಕುಲಕರ್ಣಿ, ಶಾಂತಾ ಮೋಸಲಗಿ, ರಾಚೂ ಕೊಪ್ಪ, ಡಾ.ವಾಯ್.ಡಿ.ನಾಟೀಕಾರ, ಡಾ.ಎನ್.ಎಮ್.ಚಪ್ಪರಬಂದ, ವರ್ಷಾ ಪಾಟೀಲ, ನಾಗೇಶ ತಳವಾರ, ಬಸವರಾಜ ಅಗಸರ, ಅಮರ ಗಾಯಕವಾಡ, ರಮೇಶ ಬಡದಾಳ, ರಾಜಶೇಖರ ಕಂಬಾರ ಸೇರಿದಂತೆ ಇತರರು ಇದ್ದರು.

