ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಪ್ರಕೃತಿಯಲ್ಲಿರುವ ಜೀವ ಸಂಕುಲ ಉಳಿಸಲು ಪಕ್ಷಿಗಳ ದಾಹ ತೀರಿಸುವುದು ನಮ್ಮೆಲ್ಲರ ಕರ್ತವ್ಶವಾಗಿದೆ ಎಂದು ಜ್ಞಾನ ವಿಕಾಸ್ ಸಮಾನ್ವಯಾಧಿಕಾರಿ ಆಶಾ ಹಿರೇಮಠ ಹೇಳಿದರು.
ಸಿಂದಗಿ ತಾಲೂಕಿನ ಹೊನ್ನಳ್ಳಿ ಗ್ರಾಮದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಬಿವೃದ್ಧಿ ಸಂಸ್ಥೆಯ, ಗಂಗಾ ಜ್ಞಾನ ವಿಕಾಸ್ ಕೇಂದ್ರದ ಹಾಗೂ ಧರ್ಮಸ್ಥಳ ಸಂಘದ ಪದಾಧಿಕಾರಿಗಳ ಸಂಯುಕ್ತಾಶ್ರಯದಲ್ಲಿ ಪಕ್ಷಿಗಳಿಗೆ ನೀರುಣಿಸುವ ಸಲುವಾಗಿ ಅರವಟ್ಟಿಗೆಯನ್ನು ಮರದಲ್ಲಿ ಅಳವಡಿಸಿ ಮಾತನಾಡಿದ ಅವರು, ಪ್ರತಿಯೊಬ್ಬರೂ ತಮ್ಮ ಮನೆಯ ಮುಂದಿನ ಗೀಡ ಮರಗಳ ಹಾಗೂ ಮನೆಯ ಮೇಲೆ ಒಂದು ಪಾತ್ರೆ ಅಥವಾ ಪ್ಲಾಸ್ಟಿಕ್ ಬಾಟಲಗಳಲ್ಲಿ ನೀರು ಇಟ್ಟರೆ ಸಾವಿರಾರು ಪಕ್ಷಿಗಳ ಜೀವ ಉಳಿಸಬಹುದು ಎಂದರು.
ಈ ವೇಳೆ ಸ್ಥಳೀಯ ಸೇವಾ ಪ್ರತಿನಿಧಿ ಭೀಮಾಭಾಯಿ ಗೌಂಡಿ, ಸಂಘದ ಪ್ರತಿನಿಧಿ ಲೈಲಾಬಿ ನಾಯ್ಕೋಡಿ, ಬಿಬಿಜಾನ್ ಅಗಿಸಿಮನಿ, ನಜಾಮಾ ಅಗಿಸಿಮನಿ, ರೋಶಾ ಬಾಗೇವಾಡಿ, ರಸೂಲಬಿ ಗಡಗಂಜ್, ಸಲೀಮಾ ಬಾಗೇವಾಡಿ ಸೇರಿದಂತೆ ಅನೇಕರು ಇದ್ದರು.

