Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಎ ಬಿ ಜತ್ತಿ ಪ್ರೌಢಶಾಲೆ ಉತ್ತಮ ಸಾಧನೆ

ಕೃಷಿ ಕಾಯಕ ಮಾಡುತ್ತ ಶೇ.95.84 ಅಂಕ ಪಡೆದ ವಿಕಾಸ

ಜೀವನದ ಮೌಲ್ಯಗಳನ್ನು ಅರ್ಥೈಸಿಕೊಳ್ಳಲು ಎನ್ನೆಸ್ಸೆಸ್ ಸಹಕಾರಿ :ಅಗಸರ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ಪರಾಕಾಷ್ಠೆ ಬೋಧಿಸಿದ ಬಸವ ಧರ್ಮ ಜಗದ ಧರ್ಮ
(ರಾಜ್ಯ ) ಜಿಲ್ಲೆ

ಪರಾಕಾಷ್ಠೆ ಬೋಧಿಸಿದ ಬಸವ ಧರ್ಮ ಜಗದ ಧರ್ಮ

By Updated:No Comments3 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ವಿಜಯಪುರದಲ್ಲಿ ಬಸವ ತಿಳುವಳಿಕೆ ಮತ್ತು ಸಂಶೋಧನಾ ಕೇಂದ್ರದಿಂದ ಬಸವ ಜಯಂತಿ ಕಾರ್ಯಕ್ರಮ | ಪ್ರಶಸ್ತಿ ಪ್ರದಾನ | ಕೊಡಗು ವಿಶ್ವವಿದ್ಯಾಲಯದ ಕುಲಪತಿ ಡಾ.ಅಶೋಕ ಆಲೂರ ಅಭಿಮತ

ಉದಯರಶ್ಮಿ ದಿನಪತ್ರಿಕೆ

ವಿಜಯಪುರ: ಬಹುದೇವೋಪಾಸನೆಯಿಂದ ಏಕದೇವೋಪಾಸನೆಯೆಡೆಗೆ, ಮಂದಿರದಿಂದ ಅನುಭವ ಮಂಟಪದೆಡೆಗೆ, ಜಾತಿಯಿಂದ ನೀತಿಯೆಡೆಗೆ, ಕರ್ಮ ಸಿದ್ಧಾಂತದಿಂದ ಕಾಯಕ ಸಿದ್ಧಾಂತದೆಡೆಗೆ, ಮೂಢನಂಬಿಕೆಯಿಂದ ವೈಚಾರಿಕತೆಯೆಡೆಗೆ ಹಾಗೂ ಲಿಂಗ ಭೇದವಿಲ್ಲದ ಸಮಸಮಾಜದೆಡೆಗೆ ಕರೆದೊಯ್ದ ಮತ್ತು ಇಂತಹ ಉನ್ನತ ಚಿಂತನೆಗಳನ್ನು ನಾಡಿಗೆ ನೀಡಿದ ಏಕೈಕ ವ್ಯಕ್ತಿತ್ವ ಬಸವಣ್ಣನವರದು ಎಂದು ಕೊಡಗು ವಿಶ್ವವಿದ್ಯಾಲಯದ ಕುಲಪತಿ ಡಾ.ಅಶೋಕ ಆಲೂರ ಹೇಳಿದರು.


ನಗರದಲ್ಲಿ ಶನಿವಾರ ಪುಣೆಯ ಬಸವ ತಿಳುವಳಿಕೆ ಮತ್ತು ಸಂಶೋಧನಾ ಕೇಂದ್ರದ ವಿಜಯಪುರ ಜಿಲ್ಲಾ ಘಟಕ ಆಯೋಜಿಸಿದ ಬಸವ ಜಯಂತಿ ಕಾರ್ಯಕ್ರಮ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭದ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ಅಹಿಂಸೆಯ ಪರಾಕಾಷ್ಠೆ ಬೋಧಿಸಿದ ಬಸವ ಧರ್ಮ ಇದು ಜಗದ ಧರ್ಮ. ಅರಿವು, ಆಚಾರ ಮತ್ತು ಅನುಭಾವ ಇವು ಅದರ ಉತ್ತುಂಗದ ತತ್ವಗಳು. ಅನುಭವ ಮಂಟಪದಲ್ಲಿ ವಿಶ್ವದಲ್ಲೇ ಮೊದಲು ಪ್ರಜಾಪ್ರಭುತ್ವದ ಚಿಂತನೆಗಳು ನೀಡಿದ ಪ್ರಥಮ ಹರಿಕಾರ ಬಸವಣ್ಣನವರು ಎಂದು ಡಾ.ಆಲೂರ ಬಣ್ಣಿಸಿದರು.
ಕಾರ್ಯಕ್ರಮ ಉದ್ಘಾಟಿಸಿದ ವಿಜಯಪುರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಗಂಗಾಧರ ಸಂಬಣ್ಣಿ ಮಾತನಾಡಿ, ಲಿಂಗಾಯತರು ಉಪಪಂಗಡಗಳ ಸಂಕುಚಿತ ಭಾವ ತೊರೆದು ಬಸವ ಧರ್ಮ ಪಾಲಿಸಬೇಕು ಎಂದು ಕರೆ ನೀಡಿದರು.


ಪುಣೆಯ ಬಸವ ತಿಳುವಳಿಕೆ ಮತ್ತು ಸಂಶೋಧನಾ ಕೇಂದ್ರದ ಅಧ್ಯಕ್ಷ ಡಾ.ಶಶಿಕಾಂತ ಪಟ್ಟಣ ಮಾತನಾಡಿ, ಜಗತ್ತಿನಲ್ಲಿ ಪಶು-ಪ್ರಾಣಿ-ಪಕ್ಷಿಗಳನ್ನು ಪ್ರೀತಿಸುವ ಹಾಗೂ ವರ್ಗ ಮತ್ತು ವರ್ಣ ಶ್ರೇಷ್ಠತೆಯನ್ನು ತೆಗೆದುಹಾಕಿದ ಏಕೈಕ ಧರ್ಮ ಬಸವ ಧರ್ಮ. ಜಗತ್ತು ಕಂಡ ಬಹು ದೊಡ್ಡ ದಾರ್ಶನಿಕ ಬಸವಣ್ಣ. ಅವರ ಜನ್ಮಭೂಮಿಯಾದ ವಿಜಯಪುರದಲ್ಲಿ ಸರ್ಕಾರ ವಚನ ವಿಶ್ವವಿದ್ಯಾಲಯ ಸ್ಥಾಪಿಸಬೇಕು. ಅದಕ್ಕಾಗಿ ಇಲ್ಲಿಯ ಜನತೆ ಒಕ್ಕೊರಲಿಂದ ಆಗ್ರಹಿಸಬೇಕು ಎಂದು ಕರೆ ನೀಡಿದರು.
ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಸಂಸ್ಥೆಯ ಅಧ್ಯಕ್ಷ ಸುರೇಶ ದೇಸಾಯಿ, ಬಳ್ಳಾರಿಯ ರಾಷ್ಟ್ರೀಯ ಬಸವ ದಳದ ಅಧ್ಯಕ್ಷೆ ಶಾರದಮ್ಮ ಹಾಗೂ ಧಾರವಾಡದ ಡಾ.ಮೃತ್ಯುಂಜಯ ಶೆಟ್ಟರ ಮಾತನಾಡಿದರು.
ಪುಣೆಯ ಬಸವ ತಿಳುವಳಿಕೆ ಮತ್ತು ಸಂಶೋಧನಾ ಕೇಂದ್ರದ ವಿಶ್ವಸ್ಥರಾದ ಶಾರದಾ ಪಾಟೀಲ (ಮೇಟಿ), ಜಿಲ್ಲಾ ಘಟಕದ ಗೌರವಾಧ್ಯಕ್ಷರಾದ ಡಾ.ಸರಸ್ವತಿ ಪಾಟೀಲ, ಯಾದಗಿರಿ ಜಿಲ್ಲಾ ಅಧ್ಯಕ್ಷೆ ವಿಜಯಲಕ್ಷ್ಮಿ ಹಂಗರಗಿ ವೇದಿಕೆ ಮೇಲಿದ್ದರು.
ಇದೇ ಸಂದರ್ಭದಲ್ಲಿ ನಾಡಿನ ೨೧ ಜನ ಸಾಧಕರಿಗೆ ಕ್ರಾಂತಿ ಗಂಗೋತ್ರಿ ಅಕ್ಕನಾಗಮ್ಮ ಪ್ರಶಸ್ತಿ, ವಚನ ಗಾನಕೋಗಿಲೆ ಪ್ರಶಸ್ತಿ ಹಾಗೂ ಬಸವ ಸೇವಾ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.
ಇದೇ ವೇಳೆ ಶರಣ ಸಾಹಿತ್ಯ ಪರಿಷತ್ತಿನ ಹಿರಿಯರಾದ ವ್ಹಿ.ಸಿ.ನಾಗಠಾಣ ಮತ್ತು ಸಿದ್ರಾಮಪ್ಪ ಉಪ್ಪಿನ ಅವರನ್ನು ಸನ್ಮಾನಿಸಲಾಯಿತು.
ಬಸವ ತಿಳುವಳಿಕೆ ಮತ್ತು ಸಂಶೋಧನಾ ಕೇಂದ್ರದ ಜಿಲ್ಲಾ ಘಟಕದ ಅಧ್ಯಕ್ಷ ಪ್ರೊ. ಆರ್.ಎಸ್.ಬಿರಾದಾರ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಪ್ರಧಾನ ಕಾರ್ಯದರ್ಶಿ ಡಾ.ಶಾರದಾಮಣಿ ಹುಣಶ್ಯಾಳ ಸಂದೇಶ ವಾಚಿಸಿದರು. ಸಂಘಟನಾ ಕಾರ್ಯದರ್ಶಿ ಶರಣು ಸಬರದ ಸ್ವಾಗತಿಸಿ, ಪರಿಚಯಿಸಿದರು. ಸವಿತಾ ದೇಶಮುಖ ನಿರೂಪಿಸಿದರು. ಸಿದ್ದಪ್ಪ ಪಡನಾಡ ವಂದಿಸಿದರು.
ಸಂಗೀತ ಕಲಾವಿದರಾದ ಗಾಯಿತ್ರಿ ಬಡಿಗೇರ ಮತ್ತು ಡಾ.ಮೃತ್ಯುಂಜಯ ಶೆಟ್ಟರ ಅವರ ವಚನ ಗಾಯನ ಸಭಿಕರ ಮನಸೂರೆಗೊಂಡಿತು.
ಬಸವ ತಿಳುವಳಿಕೆ ಮತ್ತು ಸಂಶೋಧನಾ ಕೇಂದ್ರದ ಜಿಲ್ಲಾ ಘಟಕದ ಉಪಾಧ್ಯಕ್ಷ, ಉದ್ಯಮಿ ಗಂಗಾಧರ ಬಿ.ಸಾಲಕ್ಕಿ, ಕೋಶಾಧ್ಯಕ್ಷೆ ರತ್ನಾಬಾಯಿ ಬಿರಾದಾರ, ಪುಷ್ಪಾವತಿ ಗೋಟ್ಯಾಳ, ಸಂಘಟನಾ ಕಾರ್ಯದರ್ಶಿಗಳಾದ ರೇಣುಕಾ ಪಾಟೀಲ, ಬಸವರಾಜ ಕೋರಿ, ಬನಶ್ರೀ ಹತ್ತಿ, ಇಂದುಶೇಖರ ಮಣೂರ, ಪ್ರೊ. ಬಿ.ಎಂ.ಬಿರಾದಾರ, ಶೈಲಾ ಮಣೂರ, ಬೆಳಗಾವಿಯ ಸುಧಾ ಪಾಟೀಲ, ಡಾ.ದಾನಮ್ಮ ಝಳಕಿ, ಗೌರಮ್ಮ ನಾಶಿ ಸೇರಿದಂತೆ ಅನೇಕ ಶರಣ-ಶರಣೆಯರಿದ್ದರು.

“ಮಾನವತಾವಾದ ಮತ್ತು ಸಮಾನತೆಯ ಚಿಂತನೆಗಳನ್ನು ಬಿತ್ತಿದ ಬಸವಣ್ಣನವರ ತತ್ವಗಳನ್ನು ನಮ್ಮ ದೈನಂದಿನ ಜೀವನದಲ್ಲಿ ಅಳವಡಿಸಿಕೊಂಡು, ಬಸವತತ್ವದ ಹರಿಕಾರರಾಗಿ ಕೈಂಕರ್ಯ ಕೈಗೊಂಡು ಮುಂದಿನ ಪೀಳಿಗೆಗೆ ಉಳಿಸಿದರೆ ಅದೇ ನಾವು ಬಸವಣ್ಣನವರಿಗೆ ಸಲ್ಲಿಸುವ ಗೌರವ ಹಾಗೂ ಬಸವ ಜಯಂತಿ ಆಚರಣೆಗೂ ಸಾರ್ಥಕತೆ ಸಿಗುವುದು.”

– ಡಾ.ಅಶೋಕ ಆಲೂರ
ಕುಲಪತಿಗಳು, ಕೊಡಗು ವಿಶ್ವವಿದ್ಯಾಲಯ, ಕೊಡಗು

“ಕಾಯಕ ಮತ್ತು ದಾಸೋಹ ಬಸವ ಧರ್ಮದ ಎರಡು ಶ್ರೇಷ್ಠ ಚಿಂತನೆಗಳು. ಮನದ ಮೈಲಿಗೆ ಕಳೆದು ಪರಿಶುದ್ಧತೆಯತ್ತ ಹೋಗಲು ನಾವು ಬಸವಾದಿ ಶರಣರ ಅನುಭಾವ ಪಡೆಯಬೇಕು. ವಿಶ್ವ ಕಂಡ ಬಹು ದೊಡ್ಡ ದಾರ್ಶನಿಕ ಬಸವಣ್ಣನವರನ್ನು ನಾವು ಇನ್ನೂ ಸರಿಯಾಗಿ ಅರ್ಥೈಸಿಕೊಳ್ಳದಿರುವುದು ತುಂಬ ನೋವಿನ ಸಂಗತಿ.”

– ಡಾ.ಶಶಿಕಾಂತ ಪಟ್ಟಣ
ಬಸವ ತಿಳುವಳಿಕೆ ಮತ್ತು ಸಂಶೋಧನಾ ಕೇಂದ್ರ, ಪುಣೆ

“ವಿಜ್ಞಾನ ಮತ್ತು ಆಧ್ಯಾತ್ಮ ಎರಡೂ ಕೈಹಿಡಿದು ಜೊತೆಯಾಗಿ ಸಾಗಿದಾಗ ನಾವು ಮತ್ತು ಜಗತ್ತು ಸುರಕ್ಷಿತವಾಗಿರಲು ಸಾಧ್ಯ. ವಚನಗಳಲ್ಲಿ ವಿಜ್ಞಾನಕ್ಕೆ ನಿಲುಕದ ಅಂಶಗಳಿವೆ. ಯುವಜನಾಂಗ ವಚನಗಳನ್ನು ಓದಿ, ಉತ್ತಮ ಮೌಲ್ಯಗಳನ್ನು ಮೈಗೂಡಿಸಿಕೊಳ್ಳಬೇಕು.”

– ಶಾರದಮ್ಮ
ಅಧ್ಯಕ್ಷರು
ರಾಷ್ಟ್ರೀಯ ಬಸವ ದಳ, ಬಳ್ಳಾರಿ

ಸಂಪಾದಕ ಇಂದುಶೇಖರ ಮಣೂರ ಗೆ ಪ್ರಶಸ್ತಿ ಪ್ರದಾನ*ಕಾರ್ಯಕ್ರಮದಲ್ಲಿ ’ಉದಯರಶ್ಮಿ’ ದಿನಪತ್ರಿಕೆ ಸಂಪಾದಕರು ಹಾಗೂ ಕಾರ್ಯನಿರತ ಪತ್ರಕರ್ತರ ಸಂಘದ ವಿಜಯಪುರ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿಯಾದ ಇಂದುಶೇಖರ ಮಣೂರ ಅವರಿಗೆ “ಬಸವ ಸೇವಾ ಪ್ರಶಸ್ತಿ” ನೀಡಿ ಗೌರವಿಸಲಾಯಿತು.ಕೊಡಗು ವಿಶ್ವವಿದ್ಯಾಲಯ ಕುಲಪತಿ ಡಾ.ಅಶೋಕ ಆಲೂರ, ಪುಣೆಯ ಬಸವ ತಿಳುವಳಿಕೆ ಮತ್ತು ಸಂಶೋಧನಾ ಕೇಂದ್ರದ ಅಧ್ಯಕ್ಷ ಡಾ.ಶಶಿಕಾಂತ ಪಟ್ಟಣ ಸೇರಿದಂತೆ ಗಣ್ಯರು ಹಿರಿಯ ಪತ್ರಕರ್ತ ಇಂದುಶೇಖರ ಸೇರಿ ಹಲವು ಸಾಧಕ ಶರಣ-ಶರಣೆಯರಿಗೆ ಪ್ರಶಸ್ತಿ ಪ್ರದಾನ ಮಾಡಿದರು.

BIJAPUR NEWS bjp public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಎ ಬಿ ಜತ್ತಿ ಪ್ರೌಢಶಾಲೆ ಉತ್ತಮ ಸಾಧನೆ

ಕೃಷಿ ಕಾಯಕ ಮಾಡುತ್ತ ಶೇ.95.84 ಅಂಕ ಪಡೆದ ವಿಕಾಸ

ಜೀವನದ ಮೌಲ್ಯಗಳನ್ನು ಅರ್ಥೈಸಿಕೊಳ್ಳಲು ಎನ್ನೆಸ್ಸೆಸ್ ಸಹಕಾರಿ :ಅಗಸರ

ಪತ್ರಕರ್ತ ಈರಯ್ಯ ಪುತ್ರ ಶ್ರೀಹರ್ಷ ಉತ್ತಮ ಫಲಿತಾಂಶ

Add A Comment

Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Uncategorized
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಎ ಬಿ ಜತ್ತಿ ಪ್ರೌಢಶಾಲೆ ಉತ್ತಮ ಸಾಧನೆ
    In (ರಾಜ್ಯ ) ಜಿಲ್ಲೆ
  • ಕೃಷಿ ಕಾಯಕ ಮಾಡುತ್ತ ಶೇ.95.84 ಅಂಕ ಪಡೆದ ವಿಕಾಸ
    In (ರಾಜ್ಯ ) ಜಿಲ್ಲೆ
  • ಜೀವನದ ಮೌಲ್ಯಗಳನ್ನು ಅರ್ಥೈಸಿಕೊಳ್ಳಲು ಎನ್ನೆಸ್ಸೆಸ್ ಸಹಕಾರಿ :ಅಗಸರ
    In (ರಾಜ್ಯ ) ಜಿಲ್ಲೆ
  • ಪತ್ರಕರ್ತ ಈರಯ್ಯ ಪುತ್ರ ಶ್ರೀಹರ್ಷ ಉತ್ತಮ ಫಲಿತಾಂಶ
    In (ರಾಜ್ಯ ) ಜಿಲ್ಲೆ
  • ಲಾಡ್ಜ್ ಮೇಲೆ ಪೊಲೀಸ್ ದಾಳಿ: ವೇಶ್ಯಾವಾಟಿಕೆ ಜಾಲದ ಈರ್ವರ ಸೆರೆ
    In Uncategorized
  • ಎಸ್ಸೆಸ್ಸೆಲ್ಸಿ: ಶ್ರೀ ಸಿದ್ದೇಶ್ವರ ಪ್ರೌಢಶಾಲೆಯ ಉತ್ತಮ ಸಾಧನೆ
    In (ರಾಜ್ಯ ) ಜಿಲ್ಲೆ
  • ಪರಾಕಾಷ್ಠೆ ಬೋಧಿಸಿದ ಬಸವ ಧರ್ಮ ಜಗದ ಧರ್ಮ
    In (ರಾಜ್ಯ ) ಜಿಲ್ಲೆ
  • ಕೆಯುಡಬ್ಲ್ಯೂಜೆ ಪ್ರತಿಭಾಪುರಸ್ಕಾರಕ್ಕೆ ಅರ್ಜಿ ಆಹ್ವಾನ
    In (ರಾಜ್ಯ ) ಜಿಲ್ಲೆ
  • ಕ್ರಿಕೆಟ್ ಕಪ್ ಗೆದ್ದ ಬಿಎಲ್ಡಿಇ ಸಂಸ್ಥೆಯ ಆಯುರ್ವೇದ ಕಾಲೇಜ್
    In (ರಾಜ್ಯ ) ಜಿಲ್ಲೆ
  • ಉದಯರಶ್ಮಿ ಇಂದಿನ ದಿನಪತ್ರಿಕೆ ಏಪ್ರಿಲ್ 25, 2026
    In ದಿನಪತ್ರಿಕೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.