ಉದಯರಶ್ಮಿ ದಿನಪತ್ರಿಕೆ
ಬೆಂಗಳೂರು: ಎಸ್ಎಸ್ಎಲ್ಸಿ ಮತ್ತು ಪಿಯುಸಿ
ಪರೀಕ್ಷೆಯಲ್ಲಿ ಶೇ. 90ಕ್ಕೂ ಹೆಚ್ಚು ಅಂಕಗಳಿಸಿದ ಪತ್ರಕರ್ತರ ಮಕ್ಕಳ ಪ್ರತಿಭಾ ಪುರಸ್ಕಾರಕ್ಕಾಗಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (ಕೆಯುಡಬ್ಲ್ಯೂಜೆ ) ಅರ್ಜಿ ಆಹ್ವಾನಿಸಿದೆ.
ವಿದ್ಯಾರ್ಥಿಯ ಅಂಕ ಪಟ್ಟಿಯ ನಕಲನ್ನು ಶಾಲಾ/ ಕಾಲೇಜಿನ ಮುಖ್ಯಸ್ಥರಿಂದ ದೃಢೀಕರಿಸಿರಬೇಕು. ಸಂಘದ ಸದಸ್ಯರ ಆಧಾರ್ ಮತ್ತು ವಿದ್ಯಾರ್ಥಿಯ ಆಧಾರ್ ಜೆರಾಕ್ಸ್ ಮತ್ತು ಸಂಘದ ಐಡಿ ಕಾರ್ಡ್ (ಕಡ್ಡಾಯ) ಜೆರಾಕ್ಸ್ ಹಾಗೂ ವಿದ್ಯಾರ್ಥಿಯ ಭಾವಚಿತ್ರ ಸಹಿತ ಅರ್ಜಿ ಸಲ್ಲಿಸಬೇಕು. (ವಿದ್ಯಾರ್ಥಿ ಭಾವಚಿತ್ರ ಹಿಂಬದಿ ತಪ್ಪದೇ ಅವರ ಹೆಸರು ಬರೆಯಿರಿ)
ಶೇ.90ಕ್ಕಿಂತ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳು ಸಂಘವು ನಿಗಧಿಪಡಿಸಿರುವ ನಮೂನೆಯಲ್ಲಿ ಜಿಲ್ಲಾ ಸಂಘದ ದೃಢೀಕರಣದೊಂದಿಗೆ 10-5-2026 ರೊಳಗಾಗಿ
ಅಧ್ಯಕ್ಷರು/ಪ್ರಧಾನ ಕಾರ್ಯದರ್ಶಿ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ, 3ನೇ ಮಹಡಿ, ಕಂದಾಯ ಭವನ, ಕೆಜಿ ರಸ್ತೆ, ಬೆಂಗಳೂರು-09 ಇಲ್ಲಿಗೆ ತಲಪುವಂತೆ ಕಳುಹಿಸಬೇಕು.
ಅರ್ಜಿ ಮತ್ತು ಇತರೆ ಮಾಹಿತಿಗಾಗಿ ಆಯಾ ಜಿಲ್ಲಾ ಸಂಘವನ್ನು ಸಂಪರ್ಕಿಸಿ ಪಡೆಯಬಹುದು ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ
ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಮತ್ತು ಪ್ರಧಾನ ಕಾರ್ಯದರ್ಶಿ ಜಿ.ಸಿ.ಲೋಕೇಶ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

