ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ನಗರದ ಹೊರವಲಯದಲ್ಲಿರುವ ಭೀಮಾ ಯುನಿವರ್ಸಲ್ ಸೆಂಟ್ರಲ್ ಸ್ಕೂಲ್‌ನ ಪ್ರಸಕ್ತ ಸಾಲಿನ ಸಿಬಿಎಸ್‌ಸಿ ೧೦ನೆಯ ತರಗತಿಯ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ. ೧೦ನೆಯ ತರಗತಿಯ ವಾಷೀಕ ಪರೀಕ್ಷೆಗೆ ಹಾಜರಾದ ಒಟ್ಟು ೫೭ ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿ ೨೦ ವಿದ್ಯಾರ್ಥಿಗಳು, ೩೭ ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ, ಶಾಲೆಯ ಒಟ್ಟು ಪಲಿತಾಂಶ ೧೦೦ಕ್ಕೆ ೧೦೦ರಷ್ಟಾಗಿದೆ. ವೈಷ್ಣವಿ ಮಸಳಿ, ಮಾಹಿತಿ ತಂತ್ರಜ್ಞಾನ (ಐ.ಟಿ) ಮತ್ತು ಕನ್ನಡ ವಿಷಯದಲ್ಲಿ ೧೦೦ಕ್ಕೆ ೧೦೦ ಅಂಕ, ಸ್ನೇಹಾ ಪಾಟೀಲ ಕನ್ನಡ ವಿಷಯದಲ್ಲಿ ೧೦೦ಕ್ಕೆ ೧೦೦ ಅಂಕಗಳನ್ನು ಪಡೆದುಕೊಂಡಿದ್ದಾರೆ. ವೈಷ್ಣವಿ ಮಸಳಿ ಶೇ.೯೯ರಷ್ಟು ಪ್ರತಿಶತ ಅಂಕ ಪಡೆಯುವುದರ ಮೂಲಕ ಸಿಂದಗಿ ತಾಲೂಕು ಹಾಗೂ ವಿಜಯಪುರ ಜಿಲ್ಲೆಗೆ ಅತ್ಯುನ್ನತ ಶ್ರೇಣಿ ತೇರ್ಗೆಡೆ ಹೊಂದಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದು ಶಾಲೆಯ ಕೀರ್ತಿಯನ್ನು ಹೆಚ್ಚಿಸಿದ್ದಾರೆ.
ವಿದ್ಯಾರ್ಥಿನಿಯರ ಈ ಕಠಿಣ ಪರಿಶ್ರಮ, ಶಾಲೆಯ ಶಿಕ್ಷಕರ ಅತ್ಯುತ್ತಮ ಭೋಧನೆಯಿಂದ ನಮ್ಮ ಸಂಸ್ಥೆಯ ವಿದ್ಯಾರ್ಥಿಗಳು ಅತ್ಯುನ್ನತ ಅಂಕಗಳನ್ನು ಪಡೆಯುವದರೊಂದಿಗೆ ಶಾಲೆಯ ಪಲಿತಾಂಶ ಶೇ.೧೦೦ಕ್ಕೆ ೧೦೦ರಷ್ಟು ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ಪಡೆದಿದ್ದು ನಮಗೆ ಬಹಳ ಹೆಮ್ಮ ತಂದಿದೆ ಎಂದು ಅಧ್ಯಕ್ಷ ವಿಠ್ಠಲ ಕೋಳುರ ಪ್ರತಿಕ್ರಿಯಿಸಿ, ವಿದ್ಯಾರ್ಥಿಗಳಿಗೆ ಶುಭ ಹಾರೈಸಿದ್ದಾರೆ.
ವಿದ್ಯಾರ್ಥಿಗಳ ಈ ಸಾಧನೆಗೆ ಸಂಸ್ಥೆಯ ಆಡಳಿತ ಮಂಡಳಿಯ ನಿರ್ದೇಶಕರು, ಪ್ರಾಚಾರ್ಯರು ಮತ್ತು ಸಿಬ್ಬಂದಿ ವರ್ಗದವರು ವಿದ್ಯಾರ್ಥಿನಿಯರಿಗೆ ಶುಭ ಕೋರಿದ್ದಾರೆ.

