ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಅಖಿಲ ಭಾರತ ಮಾನವೀಯತೆ ಸಂದೇಶ ವೇದಿಕೆ ಸಿಂದಗಿ ಶಾಖೆಯ ವತಿಯಿಂದ ಸಿಂದಗಿ ನಗರದ ಮೂರು ಪ್ರಮುಖ ಆಸ್ಪತ್ರೆಯಲ್ಲಿ ಹಳ್ಳಿಗಳಿಂದ ಬಂದ ರೋಗಿಗಳಿಗೆ ಮತ್ತು ಹಸಿದವರಿಗ ಹಾಗೂ ಬಸ್ ನಿಲ್ದಾಣದಲ್ಲಿ ರಾತ್ರಿಯ ಹೊತ್ತು ಪ್ರಯಾಣ ಮಾಡುವ ನೂರ, ಐವತ್ತು ಪ್ರಯಾಣಿಕರಿಗೆ ಸಂಜೆಯ ಊಟ ವಿತರಿಸಲಾಯಿತು.
ಹಸಿವು ಮುಕ್ತ ಸಮಾಜವೆಂದರೆ ಎಲ್ಲರಿಗೂ ಆಹಾರ ಲಭ್ಯವಾಗುವ ಸಮಾಜವಾಗಬೇಕು. ಇದು ಮೂಲಭೂತ ಮಾನವ ಹಕ್ಕು. ನಾವು ಒಟ್ಟಾಗಿ ಕೆಲಸ ಮಾಡಿದರೆ, ಹಸಿವನ್ನು ನಿರ್ಮೂಲನೆ ಮಾಡಬಹುದು.
ಪ್ರತಿ ಊಟವೂ ಒಂದು ಉಡುಗೊರೆ. ಹಸಿದವರಿಗೆ ಊಟ ನೀಡುವುದು ನಮ್ಮ ಕರ್ತವ್ಯ. ನಾವು ಆಹಾರವನ್ನು ವ್ಯರ್ಥ ಮಾಡಬಾರದು. ಬದಲಿಗೆ ಅದನ್ನು ಅಗತ್ಯವಿರುವವರಿಗೆ ಹಂಚಬೇಕು. ಹಸಿವು ಮುಕ್ತ ಸಮಾಜಕ್ಕಾಗಿ, ನಾವು ಒಗ್ಗಟ್ಟಾಗಿ ನಿಲ್ಲೋಣ ಎಂದು ಮೌಲಾನಾ ದಾವೂದ ನದ್ವಿ ಹೇಳಿದರು.
ಇದೇ ರೀತಿ ಮೌಲಾನಾ ಕಲೀಮುಲ್ಲಾಹ ನದ್ವಿ ಹಸಿದವರಿಗೆ ಊಟ ನೀಡುವ ಸೇವೆಯು ಬಹಳ ಶ್ರೇಷ್ಠವಾದ ಕೆಲಸ. ಇದು ನಮ್ಮ ಸಮಾಜದಲ್ಲಿ ಬಡತನ ಮತ್ತು ಹಸಿವಿನ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ ಎಂಬ ಸಂದೇಶ ತಿಳಿಸಿ ಹೇಳಿದರು.
ಬಹುತೇಕ ಜನರು ಈ ಕಾರ್ಯಕ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಶಾರುಖ್ ಯಲಗಾರ ಯಾಸೀನ ಸಿಂದಗಿಕರ ಮುಜಮ್ಮಿಲ ಪಯ್ಯಾಜ ನದ್ವಿ ಅಬೂಹುರೈರಾ ನದ್ವಿ ನಬಿ ಇತರರು ಭಾಗವಹಿಸಿದ್ದರು.

