ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಅಖಿಲ ಭಾರತ ಮಾನವೀಯತೆ ಸಂದೇಶ ವೇದಿಕೆ ವತಿಯಿಂದ ಸಿಂದಗಿ ನಗರದಲ್ಲಿ ಕುಡಿಯುವ ನೀರಿನ ಅರವಟಿಗೆ ಸೌಲಭ್ಯ ಕಲ್ಪಿಸಿ ಮಾನವೀಯತೆ ಮೆರೆದಿದೆ.
ಸುಡು ಬೇಸಿಗೆ ಹೆಚ್ಚುತ್ತಿರುವ ತಾಪಮಾನವನ್ನು ಗಮನದಲ್ಲಿ ಇಟ್ಟುಕೊಂಡು ಅಖಿಲ ಭಾರತ ಮಾನವೀಯತೆ ಸಂದೇಶ ವೇದಿಕೆಯು ನಗರದ ಪ್ರಮುಖ ಸ್ಥಳಗಳಲ್ಲಿ ನೀರಿನ ಅರವಟಿಗೆ ಅಳವಡಿಸಿ ಜನಸಾಮಾನ್ಯರಿಗೆ, ಬಾಯಾರಿ ಬಂದವರಿಗೆ ನೀರಿನ ದಾಹ ತಣಿಸುವ ಕಾರ್ಯ ಮಾಡುತ್ತಿದೆ.
ತಾಲ್ಲೂಕು ಸಾರ್ವಜನಿಕ ಆಸ್ಪತ್ರೆ, ಪೊಲೀಸ್ ಠಾಣೆ ಇನ್ನು ಹಲವಾರು ನಗರದ ಪ್ರಮುಖ ಬೀದಿಗಳಲ್ಲಿ ನೀರಿನ ಅರವಟಿಗೆಯನ್ನು ಅಳವಡಿಸಿ ಈ ಸೇವೆಯ ಕಾರ್ಯಗೆ ಚಾಲನೆ ನೀಡಲಾಯಿತು.
ಈ ಸೇವೆ ಸುಮಾರು ಹತ್ತು ವರ್ಷಗಳಿಂದ ಸಿಂದಗಿ ನಗರದಲ್ಲಿ ತುಂಬಾ ಯಶಸ್ವಿಯಾಗಿ ಮುಂದುವರೆಯುತ್ತಿದೆ. ಸಾರ್ವಜನಿಕರಿಂದ ವೇದಿಕೆಯ ಈ ಸೇವೆ ಮೆಚ್ಚುಗೆಗೆ ಪಾತ್ರವಾಗುತ್ತಿದೆ. ಇಂತಹ ಸೇವೆಯ ಭಾವನೆಯಿಂದ ಸುಂದರ ಸಮಾಜದ ನಿರ್ಮಾಣ ಸಾಧ್ಯ ಇಂತಹ ಕಾರ್ಯದಿಂದ ಜನಸಾಮಾನ್ಯರಿಗೆ, ಕಛೇರಿಗೆ ಬರುವ ಹಳ್ಳಿ ಭಾಗದ ಜನರಿಗೆ ತುಂಬಾ ಅನುಕೂಲವಾಗುವುದು ಹಾಗೂ ಮಾನವೀಯ ಮೌಲ್ಯವನ್ನು ಬೇಳೆಸುವಲ್ಲಿ ವೇದಿಕೆಯ ಪಾತ್ರ ಬಹುಮುಖ್ಯವಾಗಿದೆ. ಎಂದು ಸರ್ವ ಸದಸ್ಯರ ವತಿಯಿಂದ ವೇದಿಕೆಯ ಅಧ್ಯಕ್ಷ ಮೌಲಾನಾ ದಾವುದ ನದ್ವಿ ತಿಳಿಸಿದರು.
ಮೌಲಾನ ಕಲೀಮುಲ್ಲಾಹ ನದ್ವಿ ಈ ಸೇವೆಗೆ ಸಹಕಾರ ಸಾಹಾಯ ನೀಡಿದ ಎಲ್ಲ ದಾನಿಗಳಿಗೆ ಧನ್ಯವಾದಗಳು ತಿಳಿಸಿದರು.
ಯೂನುಸ ಶೇಖ. ಜಾಕಿರಹುಸೇನಸಾಬ ಅಂಗಡಿ, ಹುಸೇನಸಾಬ ಮುಲ್ಲಾ, ಇಲಿಯಾಸ ಬಿರಾದಾರ, ಮುಷ್ತಾಕಸಾಬ ಅತ್ತಾರ, ಮೌಲಾನಾ ಮುಹ್ಮಮದ ಅಲಿಸಾಬ, ಇಮ್ತಿಯಾಜಸಾಬ ಆಸಿಫಸಾಬ,ಸಾಜಿದ ಮೋಗಲಾಯಿ ,ಹಾಜಿ ನಾಸಿರಸಾಬ ಮತ್ತು ಇತರ ದಾನಿಗಳ ಈ ಕಾರ್ಯ ತುಂಬಾ ಶ್ಲಾಘನೀಯ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ತಾಲ್ಲೂಕ ಆಸ್ಪತ್ರೆ ಸಿಬ್ಬಂದಿ ಪೋಲಿಸ ಅಧಿಕಾರಿಗಳು ಸಾರ್ವಜನಿಕರು ಉಪಸ್ಧಿತರಿದ್ದರು.

